ಮುಂಬೈ: ಭಾರತ ತಂಡದ ನಾಯಕ ಕೊಹ್ಲಿ ರನ್ ಗಳಿಸುವುದರಲ್ಲಿ ಮಾತ್ರವಲ್ಲ ಟ್ವಿಟರ್ನಲ್ಲೂ ಅತಿ ಫಾಲೋವರ್ಸ್ ಪಡೆಯುವುದರಲ್ಲೂ ದಾಖಲೆ ನಿರ್ಮಿಸಿದ್ದಾರೆ.
ಮೊನ್ನೆಯಷ್ಟೇ ಪಾಕ್ ವಿರುದ್ಧ ನಡೆದ ವಿಶ್ವಕಪ್ ಪಂದ್ಯದ ವೇಳೆ ವೇಗವಾಗಿ 11 ಸಾವಿರ ರನ್ ಪೂರೈಸಿ ವಿಶ್ವದಾಖಲೆ ಬರೆದಿದ್ದ ಕೊಹ್ಲಿ, ಇದೀಗ ಸಾಮಾಜಿಕ ಜಾಲತಾಣದಲ್ಲೂ ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವ ಕ್ರಿಕೆಟಿಗ ಎಂಬ ದಾಖಲೆಗೆ ಪಾತ್ರವಾಗಿದ್ದಾರೆ.
ನಿನ್ನೆಗೆ ಕೊಹ್ಲಿಯ ಟ್ವಿಟರ್ ಹಿಂಬಾಲಕರ ಸಂಖ್ಯೆ 30 ಮಿಲಿಯನ್ ದಾಟಿದೆ. ಈ ವಿಷಯವನ್ನು ಸ್ವತಃ ಕೊಹ್ಲಿ, ಧೋನಿ ಸ್ಟಾರ್ಕ್ ಬೌಲಿಂಗ್ನಲ್ಲಿ ಸಿಕ್ಸರ್ ಸಿಡಿಸಿದಾಗ ಕೊಟ್ಟ ಪ್ರತಿಕ್ರಿಯೆಯ ವಿಡಿಯೋವನ್ನು ಪೋಸ್ಟ್ ಮಾಡಿ 'ನನ್ನ ಟ್ವಿಟರ್ ಫಾಲೋವರ್ 30 ಮಿಲಿಯನ್ ದಾಟಿದ್ದನ್ನು ನೋಡಿದಾಗ ನನ್ನ ಪ್ರತಿಕ್ರಿಯೆ ಹೀಗೇ ಇತ್ತು' ಎಂದು ಬರೆದುಕೊಂಡಿದ್ದಾರೆ.
-
also my reaction when we crossed 30 million on Twitter. 👀 Thanks for all the love and support everyone. 🙏🏼😊 #30MillionStrong 💪 pic.twitter.com/TGOrUQvWac
— Virat Kohli (@imVkohli) June 19, 2019 " class="align-text-top noRightClick twitterSection" data="
">also my reaction when we crossed 30 million on Twitter. 👀 Thanks for all the love and support everyone. 🙏🏼😊 #30MillionStrong 💪 pic.twitter.com/TGOrUQvWac
— Virat Kohli (@imVkohli) June 19, 2019also my reaction when we crossed 30 million on Twitter. 👀 Thanks for all the love and support everyone. 🙏🏼😊 #30MillionStrong 💪 pic.twitter.com/TGOrUQvWac
— Virat Kohli (@imVkohli) June 19, 2019
ಸದ್ಯ ಕೊಹ್ಲಿ ಟ್ವಿಟರ್, ಇನ್ಸ್ಟಾಗ್ರಾಮ್ನಲ್ಲಿ 100 ಮಿಲಿಯನ್ ಫಾಲೋವರ್ಸ್ ಹೊಂದಿರುವ ಭಾರತದ ಏಕೈಕ ಕ್ರೀಡಾಪಟುವಾಗಿದ್ದಾರೆ. ಒಟ್ಟಾರೆ ಭಾರತದಲ್ಲಿ ಅತಿ ಹೆಚ್ಚು ಟ್ವಿಟರ್ ಹಿಂಬಾಲಕರನ್ನು ಹೊಂದಿರುವ ಪಟ್ಟಿಯಲ್ಲಿ 6ನೇ ಸ್ಥಾದಲ್ಲಿದ್ದಾರೆ.
48 ಮಿಲಿಯನ್ ಹಿಂಬಾಲಕರನ್ನು ಹೊಂದಿರುವ ಪ್ರಧಾನಿ ನರೇಂದ್ರ ಮೋದಿ ಮೊದಲ ಸ್ಥಾನದಲ್ಲಿದ್ದರೆ, ನಂತರದ ಸ್ಥಾನದಲ್ಲಿ ಶಾರುಖ್ ಖಾನ್ (38 ಮಿಲಿಯನ್) , ಅಮಿತಾಬ್ ಬಚ್ಚನ್ (37 ಮಿಲಿಯನ್), ಸಲ್ಮಾನ್ ಖಾನ್(37 ಮಿಲಿಯನ್), ಅಕ್ಷಯ್ ಕುಮಾರ್(30 ಮಿಲಿಯನ್) ಇದ್ದಾರೆ.