ವಿಶಾಖಪಟ್ಟಣ: ಭಾರತ ತಂಡದ ಸೀಮಿತ ಓವರ್ಗಳಲ್ಲಿ ಭರ್ಜರಿ ಆಟ ಪ್ರದರ್ಶಿಸಿರುವ ಹಿಟ್ಮ್ಯಾನ್ ರೋಹಿತ್ ಶರ್ಮಾ, ಮೊದಲ ಬಾರಿಗೆ ಟೆಸ್ಟ್ ಕ್ರಿಕೆಟ್ನಲ್ಲಿ ಆರಂಭಿಕರಾಗಿ ಕಣಕ್ಕಿಳಿಯುತ್ತಿದ್ದು, ಅವರನ್ನು ಸ್ಫೋಟಕ ಬ್ಯಾಟ್ಸ್ಮನ್ ವಿರೇಂದ್ರ ಸೆಹ್ವಾಗ್ರಿಗೆ ಹೋಲಿಸಲಾಗುತ್ತಿದೆ.
ವಿಶಾಖಪಟ್ಟಣದಲ್ಲಿ ದಕ್ಷಿಣ ಆಫ್ರಿಕ ವಿರುದ್ಧ ಬುಧವಾರದಿಂದ ಮೊದಲ ಟೆಸ್ಟ್ ಆರಂಭವಾಗಿದೆ. ಈ ಸರಣಿಯ ಎಲ್ಲಾ ಪಂದ್ಯಗಳಿಗೂ ಹಿಟ್ಮ್ಯಾನ್ ಆರಂಭಿಕರಾಗಿ ಕಣಕ್ಕಿಳಿಯಲಿದ್ದಾರೆ ಎಂದು ಆಯ್ಕೆ ಸಮಿತಿ ಗ್ರೀನ್ ಸಿಗ್ನಲ್ ನೀಡಿದೆ. ಇದೀಗ ಕೊಹ್ಲಿ ಸಹಾ ರೋಹಿತ್ ಶರ್ಮಾ ಅವರ ಬೆನ್ನಿಗೆ ನಿಂತಿದ್ದಾರೆ. ಅವರು ಆರಂಭಿಕನಾಗಿ ಸ್ಥಿರತೆ ಕಾಪಾಡಿಕೊಳ್ಳುವವರೆಗೂ ನಾವು ಅವರಿಗೆ ಹೆಚ್ಚು ಒತ್ತಡ ಹೇರುವುದಿಲ್ಲ. ಅವರ ಸ್ವಾಭಾವಿಕ ಆಟ ಆಡಲು ಅವಕಾಶ ನೀಡಲಿದ್ದೇವೆ ಎಂದು ತಿಳಿಸಿದ್ದಾರೆ.
ನಾವು ರೋಹಿತ್ರಿಂದ ಅತಿಯಾದ ನಿರೀಕ್ಷೆ ಮಾಡುತ್ತಿಲ್ಲ. ಇಡೀ ತಂಡ ಅವರ ಸ್ವಾಭಾವಿಕ ಆಟ ನೋಡಲು ಕಾಯುತ್ತಿದೆ. 6 ರಿಂದ 7 ಟೆಸ್ಟ್ಗಳಲ್ಲಿ ಅವರಿಗೆ ಆರಂಭಿಕರಾಗಿ ಸ್ಥಿರತೆ ಕಾಯ್ದುಕೊಳ್ಳಲು ಅವಕಾಶ ನೀಡಲು ಟೀಂ ಮ್ಯಾನೇಜ್ಮೆಂಟ್ ನಿರ್ಧರಿಸಿದೆ. ರೋಹಿತ್ ಆರಂಭಿಕರಾಗಿ ಅವರಿಗಿಷ್ಟ ಬಂದಂತೆ ಆಡಲು ಸ್ವಾತಂತ್ರ್ಯ ನೀಡಲಿದ್ದೇವೆ ಎಂದು ಕೊಹ್ಲಿ ತಿಳಿಸಿದ್ದಾರೆ.
-
"We are looking forward to Rohit playing his natural game at the top" - @imVkohli 👌👌 #TeamIndia #INDvSA @paytm pic.twitter.com/yCKPxhwSsu
— BCCI (@BCCI) October 1, 2019 " class="align-text-top noRightClick twitterSection" data="
">"We are looking forward to Rohit playing his natural game at the top" - @imVkohli 👌👌 #TeamIndia #INDvSA @paytm pic.twitter.com/yCKPxhwSsu
— BCCI (@BCCI) October 1, 2019"We are looking forward to Rohit playing his natural game at the top" - @imVkohli 👌👌 #TeamIndia #INDvSA @paytm pic.twitter.com/yCKPxhwSsu
— BCCI (@BCCI) October 1, 2019
ನಾವು ರೋಹಿತ್ರಿಂದ ಸ್ಫೋಟಕ ಆಟಕ್ಕೆ ಹೆಸರಾಗಿದ್ದ ವಿರೇಂದ್ರ ಸೆಹ್ವಾಗ್ರ ಆಟ ನೋಡಲು ಬಯಸುತ್ತಿದ್ದೇವೆ. ಅವರು ತಮ್ಮ ನೈಜ ಆಟವನ್ನು ಕಂಡುಕೊಂಡರೆ ಇಡೀ ಪಂದ್ಯವನ್ನೇ ಮುಂದಕ್ಕೆ ನಡೆಸಿಕೊಂಡು ಹೋಗಲಿದ್ದಾರೆ. ಈ ರೀತಿಯ ಆಟವನ್ನು ನಾವು ಹಲವಾರು ವರ್ಷಗಳ ಕಾಲ ಸೆಹ್ವಾಗ್ರಿಂದ ಕಂಡಿದ್ದೇವೆ ಎಂದು ಕೊಹ್ಲಿ ತಿಳಿಸಿದ್ದಾರೆ.
ಸೆಹ್ವಾಗ್ಗೆ ಸಿಡಿಲಬ್ಬರದ ಬ್ಯಾಟಿಂಗ್ ನಡೆಸುವಂತೆ ಹೇಳಿದರೆ ಸಾಕು ಅವರು ಲಂಚ್ಬ್ರೇಕ್ಗೂ ಮೊದಲೇ ಶತಕ ಬಾರಿಸುತ್ತಿದ್ದರು. ಬೌಲರ್ಗಳನ್ನು ತಮ್ಮಿಚ್ಛೆಯಂತೆ ದಂಡಿಸುತ್ತಿದ್ದ ಸೆಹ್ವಾಗ್ರಲ್ಲಿದ್ದ ಗುಣ ರೋಹಿತ್ರವರಲ್ಲೂ ಇದೆ. ಆದರೆ, ತಕ್ಷಣ ಅಂತಹ ಆಟ ನೋಡಲು ಸಾಧ್ಯವಾಗದಿದ್ದರೂ ಮುಂದಿನ ದಿನ ಖಂಡಿತ ಶಾಧ್ಯವಾಗಲಿದೆ. ಸದ್ಯಕ್ಕೆ ರೋಹಿತ್ ಮೊದಲ ಬಾರಿಗೆ ಮಧ್ಯಮ ಕ್ರಮಾಂಕದಿಂದ ಆರಂಭಿಕನಾಗಿ ಬಡ್ತಿ ಪಡೆದಿರುವುದರಿಂದ ಅವರಿಗೆ ಬೇಕಾದಷ್ಟು ಸಮಯ ನೀಡುವುದು ಅಗತ್ಯವಾಗಿದೆ ಎಂದು ಕೊಹ್ಲಿ ಅಭಿಪ್ರಾಯಪಟ್ಟಿದ್ದಾರೆ.