ನವದೆಹಲಿ: ಎಲ್ಲ ಮಾದರಿಯ ಕ್ರಿಕೆಟ್ಗೆ ವಿದಾಯ ಘೋಷಿಸಿರುವ ಟೀಂ ಇಂಡಿಯಾ ಮಾಧ್ಯಮ ಕ್ರಮಾಂಕದ ಆಟಗಾರ ಅಂಬಾಟಿ ರಾಯುಡು ಬಿಸಿಸಿಐಗೆ ಧನ್ಯವಾದ ತಿಳಿಸಿದ್ದಾರೆ.
ನಿವೃತ್ತಿ ಕುರಿತು ಬಿಸಿಸಿಐಗೆ ಪತ್ರ ಬರೆದಿದ್ದು, ಪತ್ರದಲ್ಲಿ ತನ್ನ ಕ್ರಿಕೆಟ್ ವೃತ್ತಿ ಜೀವನಕ್ಕೆ ಸಹಕಾರ ನೀಡಿದ ಪ್ರತಿಯೊಬ್ಬರಿಗೂ ಧನ್ಯವಾದ ತಿಳಿಸಿದ್ದಾರೆ. ‘ಈ ಪತ್ರದ ಮೂಲಕ ಬಿಸಿಸಿಐಗೆ ತಿಳಿಸುವುದೇನೆಂದರೆ. ನಾನು ಎಲ್ಲ ಮಾದರಿಯ ಕ್ರಿಕೆಟ್ನಿಂದ ನಿವೃತ್ತಿ ತೆಗೆದುಕೊಳ್ಳಲು ಬಯಸುತ್ತೇನೆ. ಈ ಸಂದರ್ಭದಲ್ಲಿ ನನಗೆ ಕ್ರಿಕೆಟ್ ಆಡಲು ಅವಕಾಶ ನೀಡಿದ ಬಿಸಿಸಿಐ, ಮತ್ತು ಹೈದರಾಬಾದ್, ಆಂಧ್ರ, ಬರೋಡಾ, ವಿದರ್ಭ ಕ್ರಿಕೆಟ್ ಅಸೋಸಿಯೇಷನ್ಗಳಿಗೆ ಧನ್ಯವಾದ ತಿಳಿಸುತ್ತೇನೆ ಎಂದಿದ್ದಾರೆ.
ಐಪಿಎಲ್ನಲ್ಲಿ ನನಗೆ ಅವಕಾಶ ನೀಡಿದ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸ್ಗಳಿಗೂ ಧನ್ಯವಾದಗಳು. ಅಲ್ಲದೆ ಎಂ.ಎಸ್.ಧೋನಿ, ರೋಹಿತ್ ಶರ್ಮಾ, ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ನಾನು ಕ್ರಿಕೆಟ್ ಆಡಿದ್ದೇನೆ. ಟೀಂ ಇಂಡಿಯಾದಲ್ಲಿ ಆಡುವಾಗ ವಿರಾಟ್ ನನ್ನ ಮೇಲೆ ಸಾಕಷ್ಟು ಭರವಸೆ ಇಟ್ಟಿದ್ದರು, ಅವರಿಗೂ ಧನ್ಯವಾದ ತಿಳಿಸುತ್ತೇನೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಕಳೆದ 25 ವರ್ಷಗಳಿಂದ ಕ್ರೀಡೆಯಲ್ಲಿ ನನ್ನನ್ನ ನಾನು ತೊಡಗಿಸಿಕೊಂಡಿದ್ದೇನೆ. ಈ ವೇಳೆ ಹಲವು ಏಳು-ಬೀಳುಗಳನ್ನ ಕಂಡಿರುವ ನಾನು ಸಾಕಷ್ಟು ಕಲಿತಿದ್ದೇನೆ. ನನಗೆ ಸಹಕಾರ ನೀಡಿದ ನನ್ನ ಕುಟುಂಬದವರಿಗೂ ನಾನು ಧನ್ಯವಾದಗಳು ಎಂದು ಪತ್ರದಲ್ಲಿ ತಿಳಿದ್ದಾರೆ.