ಪುಣೆ, ಮಹಾರಾಷ್ಟ್ರ: ಟೀಂ ಇಂಡಿಯಾ- ಇಂಗ್ಲೆಂಡ್ ನಡುವೆ ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ಏಕದಿನ ಪಂದ್ಯ ನಡೆಯುತ್ತಿದ್ದು, ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೊಸ ದಾಖಲೆಯನ್ನು ನಿರ್ಮಿಸಿದ್ದಾರೆ.
ಮೂರನೇ ಕ್ರಮಾಂಕದ ಬ್ಯಾಟ್ಸ್ಮನ್ ಆಗಿ 10 ಸಾವಿರ ರನ್ ಗಳಿಸಿದ ಎರಡನೇ ಆಟಗಾರರಾಗಿ ವಿರಾಟ್ ಕೊಹ್ಲಿ ಹೊರಹೊಮ್ಮಿದ್ದಾರೆ. ಮೊದಲ ಸ್ಥಾನದಲ್ಲಿ ಆಸ್ಟ್ರೇಲಿಯಾ ಕ್ರಿಕೆಟ್ನ ಮಾಜಿ ನಾಯಕ ರಿಕ್ಕಿ ಪಾಂಟಿಂಗ್ ಇದ್ದಾರೆ. ರಿಕ್ಕಿ ಸುಮಾರು 330 ಇನ್ನಿಂಗ್ಸ್ಗಳಲ್ಲಿ ಮೂರನೇ ಕ್ರಮಾಂಕದಲ್ಲಿ ಆಡಿ 12,662 ರನ್ ಗಳಿಸಿದ್ದಾರೆ.
-
FIFTY!
— BCCI (@BCCI) March 26, 2021 " class="align-text-top noRightClick twitterSection" data="
Captain @imVkohli brings up his 62nd ODI half-century off 62 deliveries.
Live - https://t.co/RrLvC29Iwg #INDvENG @Paytm pic.twitter.com/KG23aWbEFJ
">FIFTY!
— BCCI (@BCCI) March 26, 2021
Captain @imVkohli brings up his 62nd ODI half-century off 62 deliveries.
Live - https://t.co/RrLvC29Iwg #INDvENG @Paytm pic.twitter.com/KG23aWbEFJFIFTY!
— BCCI (@BCCI) March 26, 2021
Captain @imVkohli brings up his 62nd ODI half-century off 62 deliveries.
Live - https://t.co/RrLvC29Iwg #INDvENG @Paytm pic.twitter.com/KG23aWbEFJ
ರಿಕ್ಕಿ ಪಾಂಟಿಂಗ್ಗೆ ಹೋಲಿಕೆ ಮಾಡುವುದಾದರೆ ಕೇವಲ 190 ಇನ್ನಿಂಗ್ಸ್ಗಳಲ್ಲಿ ವಿರಾಟ್ ಕೊಹ್ಲಿ 10 ಸಾವಿರ ರನ್ ಗಳಿಸಿದ್ದಾರೆ. ಮೂರನೇ ಸ್ಥಾನದಲ್ಲಿ ಶ್ರೀಲಂಕಾ ಕ್ರಿಕೆಟ್ನ ಮಾಜಿ ನಾಯಕ ಕುಮಾರ್ ಸಂಗಕ್ಕಾರ ಇದ್ದು, ಮೂರನೇ ಕ್ರಮಾಂಕದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದಾರೆ.
ಇದನ್ನೂ ಓದಿ: ಕೆಮಿಕಲ್ ಫಾಕ್ಟರಿಯಲ್ಲಿ ಕೆಮಿಕಲ್ ಲೀಕೇಜ್ : ಓರ್ವ ಸಾವು, ಮೂವರ ಸ್ಥಿತಿ ಗಂಭೀರ
ಕುಮಾರ್ ಸಂಗಕ್ಕಾರ 238 ಇನ್ನಿಂಗ್ಸ್ನಲ್ಲಿ ಸುಮಾರು 9,747 ರನ್ ಗಳಿಸಿದ್ದಾರೆ. ಇವರಾದ ನಂತರ ದಕ್ಷಿಣ ಆಫ್ರಿಕಾದ ಜಾಕಸ್ ಕಾಲಿಸ್ 7,774 ರನ್ ಗಳಿಸಿ ನಾಲ್ಕನೇ ಸ್ಥಾನದಲ್ಲಿದ್ದಾರೆ.