ಪೋರ್ಟ್ ಆಫ್ ಸ್ಪೇನ್: ಏಕದಿನ ಕ್ರಿಕೆಟ್ನ ಪ್ರತಿ ಪಂದ್ಯದಲ್ಲೂ ಒಂದಿಲ್ಲೊಂದು ದಾಖಲೆ ಬರೆಯುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ವೆಸ್ಟ್ ಇಂಡೀಸ್ ವಿರುದ್ಧ ಮತ್ತೊಂದು ಮೈಲಿಗಲ್ಲು ತಲುಪಿದ್ದಾರೆ.
ವಿಶ್ವ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಕೆರಿಬಿಯನ್ ತಂಡದ ವಿರುದ್ಧ ರನ್ ಗಳಿಸಿದವರಲ್ಲಿ ಕೊಹ್ಲಿ ಅಗ್ರ ಸ್ಥಾನಕ್ಕೇರಿದ್ದಾರೆ. ಈ ಮೂಲಕ 26 ವರ್ಷಗಳ ಹಿಂದೆ ಪಾಕಿಸ್ತಾನದ ಜಾವೇದ್ ಮಿಯಾಂದಾದ್ ಮಾಡಿದ್ದ ದಾಖಲೆಯನ್ನು ಕೊಹ್ಲಿ ಅಳಿಸಿಹಾಕಿದ್ದಾರೆ. ವೆಸ್ಟ್ ಇಂಡೀಸ್ ಜೊತೆ ನಡೆಯುತ್ತಿರುವ ಇಂದಿನ ಪಂದ್ಯದಲ್ಲಿ ವಿರಾಟ್ ಈ ಸಾಧನೆ ಮಾಡಿದ್ದಾರೆ.
ಜಾವೇದ್ ಮಿಯಾಂದಾದ್ ವಿಂಡೀಸ್ ವಿರುದ್ಧ 64 ಇನ್ನಿಂಗ್ಸ್‌ಗಳಲ್ಲಿ 1930 ರನ್ ಗಳಿಸಿ ಮೊದಲ ಸ್ಥಾನದಲ್ಲಿದ್ದರು. ಇನ್ನು ಇಂದಿನ ಪಂದ್ಯದಲ್ಲಿ ಈ ದಾಖಲೆ ಮುರಿಯಲು 19 ರನ್ ಅಗತ್ಯವಿತ್ತು. ಪಂದ್ಯದಲ್ಲಿ ಕಾಟ್ರೆಲ್ ಎಸೆದ 4ನೇ ಓವರ್ನ 4ನೇ ಎಸೆತದಲ್ಲಿ ಒಂದು ರನ್ ಗಳಿಸುವ ಮೂಲಕ ವಿರಾಟ್ ಈ ಮೈಲಿಗಲ್ಲು ತಲುಪಿದರು. ಅಲ್ಲದೆ ಏಕದಿನ ಕ್ರಿಕೆಟ್ನಲ್ಲಿ ನಂ. 1 ಸ್ಥಾನದಲ್ಲಿರುವ ಕೊಹ್ಲಿ ಕೆರಿಬಿಯನ್ನರ ವಿರುದ್ಧ ಕೇವಲ 34 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆಗೈದಿದ್ದಾರೆ.