ದುಬೈ: ಕೊರೊನಾ ವೈರಸ್ ಬಿಕ್ಕಟ್ಟಿನಿಂದಾಗಿ ಐದು ತಿಂಗಳ ನಂತರ ಕ್ರಿಕೆಟ್ಗ ಮರಳುತ್ತಿರುವುದರಿಂದ ಆವೇಗವನ್ನು ಮರಳಿ ಪಡೆಯಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ಸಮತೋಲಿತ ರೀತಿಯಲ್ಲಿ ತರಬೇತಿ ಪಡೆದಿದ್ದಾರೆ ಎಂದು ನಾಯಕ ವಿರಾಟ್ ಕೊಹ್ಲಿ ತಿಳಿಸಿದ್ದಾರೆ.
ಕೋವಿಡ್ 19 ಬಿಕ್ಕಟ್ಟಿನಿಂದ 13ನೇ ಆವೃತ್ತಿ ಐಪಿಎಲ್ ಭಾರತದಿಂದ ಯುಎಇಗೆ ವರ್ಗಾಯಿಸಲಾಗಿದೆ. ಸೆಪ್ಟೆಂಬರ್ 19ರಿಂದ 2020ರ ಐಪಿಎಲ್ ಆರಂಭವಾಗಲಿದೆ. ಎಲ್ಲಾ ತಂಡಗಳು ಒಂದು ತಿಂಗಳ ಮುಂಚೆಯೇ ದುಬೈಗೆ ತೆರಳಿದ್ದು, ಅಲ್ಲಿ ತರಬೇತಿ ಆರಂಭಿಸಿವೆ.
-
More intense, more hungry than ever before, and more balanced, Virat Kohli speaks about his progress after two weeks of practice in the UAE ahead of Dream 11 IPL 2020. pic.twitter.com/l2ovA1IgGf
— Royal Challengers Bangalore (@RCBTweets) September 12, 2020 " class="align-text-top noRightClick twitterSection" data="
">More intense, more hungry than ever before, and more balanced, Virat Kohli speaks about his progress after two weeks of practice in the UAE ahead of Dream 11 IPL 2020. pic.twitter.com/l2ovA1IgGf
— Royal Challengers Bangalore (@RCBTweets) September 12, 2020More intense, more hungry than ever before, and more balanced, Virat Kohli speaks about his progress after two weeks of practice in the UAE ahead of Dream 11 IPL 2020. pic.twitter.com/l2ovA1IgGf
— Royal Challengers Bangalore (@RCBTweets) September 12, 2020
ಕೆಲವು ತಿಂಗಳ ನಂತರ ತರಬೇತಿ ನಡೆಸಿದ್ದರಿಂದ ಕೆಲವರಿಗೆ ಭುಜದ ನೋವು ಕಾಣಿಸಿಕೊಂಡಿದೆ. ಇದ್ದಕ್ಕಿದ್ದಂತೆ ಸ್ನಾಯುಗಳಲ್ಲಿ ನೋವು ಕಾಣಿಸಿಕೊಳ್ಳುತ್ತಿದೆ. ಹೀಗಾಗಿ ತಂಡದ ಸದಸ್ಯರಿಗೆ ತಾವೂ ಬಯಸುವ ಮಟ್ಟಕ್ಕೆ ಮರಳುತ್ತಿದ್ದೇವೆ ಎಂಬುದು ಅರಿವಾಗುತ್ತಿದೆ ಎಂದು ಕೊಹ್ಲಿ ತಿಳಿಸಿದ್ದಾರೆ.
ನನ್ನ ಪ್ರಕಾರ ನಾವು ಸಮತೋಲನದ ರೀತಿಯಲ್ಲಿ ಮುಂದುವರಿಯುತ್ತಿದ್ದೇವೆ. ನಾವು 6 ದಿನಗಳಲ್ಲಿ 6 ಸೆಷನ್ ಮಾಡುವ ಹುಚ್ಚು ಸಾಹಸಕ್ಕೆ ಹೋಗುವುದಿಲ್ಲ.ನಾವು ತಂಡದ ಸದಸ್ಯರಿಗೆ ಸಾಕಷ್ಟು ಸಮಯವನ್ನು ನೀಡಿದ್ದೇವೆ, ಈ ಮುಂದಿನ ಕೆಲವು ತರಬೇತಿ ಅವಧಿಗಳಲ್ಲಿಯೂ ನಾವು ಇದನ್ನು ಮುಂದುವರಿಸುತ್ತೇವೆ ಎಂದಿದ್ದಾರೆ.
ಸುದೀರ್ಘ ವಿರಾಮದ ನಂತರ ವಿಷಯಗಳು ವಿಭಿನ್ನವಾಗಿವೆ ಮತ್ತು "ಸ್ಪರ್ಧಾತ್ಮಕ" ಮನಸ್ಸಿನ ಚೌಕಟ್ಟಿನಲ್ಲಿ ಮರಳಲು ತಂಡ ಪ್ರಯತ್ನಿಸುತ್ತಿದೆ ಎಂದು ಕೊಹ್ಲಿ ಒಪ್ಪಿಕೊಂಡಿದ್ದಾರೆ. ಸದ್ಯಕ್ಕೆ ಆಟಗಾರರೆಲ್ಲೆ ಫಿಟ್ ಆಗಿದ್ದಾರೆ. ಇದು ನಮಗೆ ಖುಷಿ ತಂದಿದೆ ಎಂದು ತಂಡದ ಬಗ್ಗೆ ತೃಪ್ತಿ ಇರುವುದಾಗಿ ಹೇಳಿದ್ದಾರೆ.
ಆರ್ಸಿಬಿ ಸೆಪ್ಟೆಂಬರ್ 21 ರಂದು ಸನ್ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸಲಿದೆ.