ETV Bharat / sports

ದ.ಅಫ್ರಿಕಾ ಸರಣಿಯಲ್ಲಿ ಒಂದೇ ದಾಖಲೆಗೆ ರೋಹಿತ್​- ಕೊಹ್ಲಿ ಸೆಣಸಾಟ! - SA vs IND

ರೋಹಿತ್​ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 88 ಇನ್ನಿಂಗ್ಸ್​ಗಳಲ್ಲಿ 2422 ರನ್​ ಗಳಿಸಿ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ. ಕೊಹ್ಲಿ 65 ಇನ್ನಿಂಗ್ಸ್​ಗಳಲ್ಲಿ 2369 ರನ್ ​ಗಳಿಸಿ ಎರಡನೇ ಸ್ಥಾನದಲ್ಲಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ 54 ರನ್​ ಗಳಿಸಿದರೆ ರೋಹಿತ್​ ಹಿಂದಿಕ್ಕಿ ಅಗ್ರಸ್ಥಾನಕ್ಕೇರಲಿದ್ದಾರೆ.

Virat Kohli
author img

By

Published : Sep 15, 2019, 6:34 PM IST

ಧರ್ಮಶಾಲ: ಭಾರತ ಸೀಮಿತ ಓವರ್​ಗಳ ತಂಡದ ನಾಯಕ ಕೊಹ್ಲಿ ಹಾಗೂ ಉಪನಾಯಕ ರೋಹಿತ್​ ಶರ್ಮಾ ಪಾಲಿಗೆ ಈ ಸರಣಿ ಮಹತ್ವದ್ದಾಗಿದ್ದು, ಇಬ್ಬರು ಟಿ20 ಕ್ರಿಕೆಟ್​ನಲ್ಲಿ ಗರಿಷ್ಠ ರನ್​ ಸರದಾರರಾಗಲು ಪೈಪೋಟಿ ನಡೆಸಲಿದ್ದಾರೆ.

ಹಿಟ್​ಮ್ಯಾನ್​ ಖ್ಯಾತಿಯ ರೋಹಿತ್​ ಶರ್ಮಾ ಪ್ರಸ್ತುತ ಟಿ20 ಕ್ರಿಕೆಟ್​ನ ಗರಿಷ್ಠ ಸ್ಕೋರರ್​ ಎನಿಸಿಕೊಂಡಿದ್ದಾರೆ. ರೋಹಿತ್​ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 88 ಇನ್ನಿಂಗ್ಸ್​ಗಳಲ್ಲಿ 2422 ರನ್ ​ಗಳಿಸಿ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ. ಕೊಹ್ಲಿ 65 ಇನ್ನಿಂಗ್ಸ್​ಗಳಲ್ಲಿ 2369 ರನ್​ ಗಳಿಸಿ ಎರಡನೇ ಸ್ಥಾನದಲ್ಲಿದ್ದಾರೆ. ಇನ್ನು ಇಂದಿನ ಪಂದ್ಯದಲ್ಲಿ ಕೊಹ್ಲಿ 54 ರನ್​ ಗಳಿಸಿದರೆ ರೋಹಿತ್​ ಹಿಂದಿಕ್ಕಿ ಅಗ್ರಸ್ಥಾನಕ್ಕೇರಲಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಭಾರತ ತಂಡ 3 ಟಿ20 ಪಂದ್ಯಗಳನ್ನಾಡಲಿದ್ದು ಈ ಸರಣಿಯಲ್ಲಿ ಯಾರು ಹೆಚ್ಚು ರನ್ ​ಗಳಿಸುತ್ತಾರೋ ಅವರು ಟಿ20 ಕ್ರಿಕೆಟ್​ನ ಬಾದ್​ಶಾ ಎನಿಸಿಕೊಳ್ಳಲಿದ್ದಾರೆ.

ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್​ನಲ್ಲಿ ಹೆಚ್ಚು ರನ್​ ಗಳಿಸಿದವರು:

  • ರೋಹಿತ್​ ಶರ್ಮಾ(2422)
  • ವಿರಾಟ್​ ಕೊಹ್ಲಿ (2369)
  • ಮಾರ್ಟಿನ್​ ಗಪ್ಟಿಲ್​ (2283)
  • ಶೋಯಬ್​ ಮಲಿಕ್​(2263)
  • ಬ್ರೆಂಡನ್​ ಮೆಕಲಮ್​ (2283)

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.