ETV Bharat / sports

ವಿರಾಟ್​, ಪಂತ್​​ ಅದ್ಭುತ ಆಟ... ವಿಂಡೀಸ್​ ವಿರುದ್ಧ ಟಿ-20 ಸರಣಿ ಕ್ಲೀನ್​​ ಸ್ವೀಪ್​​​ - ರಿಷಭ್ ಪಂತ್

ನಾಯಕ ವಿರಾಟ್​ ಮತ್ತು ರಿಷಭ್ ಪಂತ್ ಬ್ಯಾಟಿಂಗ್ ನೆರವಿನಿಂದ ಟೀಂ ಇಂಡಿಯಾ ಮೂರನೇ ಟಿ-20 ಪಂದ್ಯದಲ್ಲಿ ಜಯ ದಾಖಲಿಸಿ ಟಿ-20 ಸರಣಿಯನ್ನ 3-0 ವೈಟ್​ವಾಷ್ ಮಾಡಿದೆ.

ಟೀಂ ಇಂಡಿಯಾ
author img

By

Published : Aug 7, 2019, 7:48 AM IST

ಗಯಾನ: ವೆಸ್ಟ್​ ಇಂಡೀಸ್​ ವಿರುದ್ಧ ನಡೆದ ಮೂರನೇ ಟಿ-20 ಪಂದ್ಯದಲ್ಲಿ ಟೀಂ ಇಂಡಿಯಾ 7 ವಿಕೆಟ್​ಗಳ ಭರ್ಜರಿ ಜಯ ಸಾಧಿಸುವ ಮೂಲಕ ಮೂರು ಪಂದ್ಯಗಳ ಟಿ-20 ಸರಣಿಯನ್ನ ಕ್ಲೀನ್​ ಸ್ವೀಪ್ ಮಾಡಿದೆ.

ಟಾಸ್​ ಸೋತು ಮೊದಲು ಬ್ಯಾಟಿಂಗ್​ ಆಯ್ದುಕೊಂಡ ವೆಸ್ಟ್​ ಇಂಡೀಸ್​ ತಂಡ ನಿಗದಿತ 20 ಓವರ್​ಗಳಲ್ಲಿ 6 ವಿಕೆಟ್​ ಕಳೆದುಕೊಂಡು 146 ರನ್ ​ಗಳಿಸಿತು. ವಿಂಡೀಸ್​ ಪರ ಅದ್ಬುತ ಬ್ಯಾಟಿಂಗ್ ಪ್ರದರ್ಶನ ತೋರಿದ ಕಿರನ್ ಪೊಲಾರ್ಡ್​ 58 ರನ್​​, ಪೋವೆಲ್​ 32 ರನ್ ​ಗಳಿಸಿದ್ರೆ, ಪೂರನ್ 17 ರನ್​ ಗಳಿಸಿದ್ರು.

ಪದಾರ್ಪಣೆ ಪಂದ್ಯದಲ್ಲೇ ಉತ್ತಮ ಪ್ರದರ್ಶನ ತೋರಿದ್ದ ವೇಗಿ ದೀಪಕ್​ ಚಹಾರ್ 3 ವಿಕೆಟ್​ ಕಬಳಿಸಿದ್ರೆ, ನವ್​ದೀಪ್​ ಸೈನಿ 2​, ರಾಹುಲ್​ ಚಹಾರ್​ 1 ವಿಕೆಟ್​ ಪಡೆದು ವಿಂಡೀಸ್​ ಆಟಗಾರ ರನ್​ ವೇಗಕ್ಕೆ ಬ್ರೇಕ್​ ಹಾಕಿದ್ರು.

147 ರನ್​ಗಳ ಗುರಿ ಬೆನ್ನತ್ತಿದ ಭಾರತ ಆರಂಭಿಕ ಆಘಾತ ಅನುಭವಿಸಿತು. 10 ಕಲೆಹಾಕುವಷ್ಟರಲ್ಲಿ 3 ರನ್ ​ಗಳಿಸಿದ್ದ ಶಿಖರ್ ಧವನ್, ಓಶಾನೆ ಥಾಮಸ್​ಗೆ ವಿಕೆಟ್​ ಒಪ್ಪಿಸಿದ್ರು. ಕೆ.ಎಲ್.ರಾಹುಲ್​ ಕೂಡ 20 ರನ್ ​ಗಳಿಸಿ ಪೆವಿಲಿಯನ್​ ಸೇರಿದ್ರು.

ಈ ವೇಳೆ ತಂಡಕ್ಕೆ ಆಸರೆಯಾದ ನಾಯಕ ವಿರಾಟ್​ ಕೊಹ್ಲಿ ಮತ್ತು ವಿಕೆಟ್​ ಕೀಪರ್​ ರಿಷಭ್ ಪಂತ್ 106 ರನ್​ಗಳ ಉತ್ತಮ ಜೊತೆಯಾಟವಾಡಿ ಟೀಂ ಇಂಡಿಯಾ ಗೆಲುವಿಗೆ ಆಸರೆಯಾದ್ರು. ಅಂತಿಮವಾಗಿ ಟೀಂ ಇಂಡಿಯಾ 19.1 ಓವರ್​ಗಳಲ್ಲಿ 150 ರನ್ ​ಗಳಿಸಿ ಗೆಲುವು ದಾಖಲಿಸಿ ಟಿ-20 ಸರಣಿಯನ್ನ ಕ್ಲೀನ್ ಸ್ವೀಪ್​ ಮಾಡಿತು.

ಭಾರತ ತಂಡದ ಪರ ವಿರಾಟ್​ 59 ರನ್​ ಗಳಿಸಿದ್ರೆ, ಆಕರ್ಷಕ ಬ್ಯಾಟಿಂಗ್ ಪ್ರದರ್ಶನ ತೋರಿದ ಪಂತ್ 42 ಎಸೆತಗಳಲ್ಲಿ 4 ಬೌಡರಿ, 4 ಸಿಕ್ಸರ್​ಗಳ ನೆರವಿನಿಂದ 65 ರನ್ ​ಗಳಿಸಿ ಅಜೇಯರಾಗಿ ಉಳಿದರು. ವಿಂಡೀಸ್​ ಪರ ಓಶಾನೆ ಥಾಮಸ್ 2 ವಿಕೆಟ್ ಪಡೆದ್ರೆ, ಅಲೆನ್ 1 ವಿಕೆಟ್ ಪಡೆದಿದ್ದಾರೆ.

Intro:Body:

sports

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.