ETV Bharat / sports

ಕೊಹ್ಲಿ-ಟೀಂ​ ಮ್ಯಾನೇಜ್​ಮೆಂಟ್​ ಮಾಡಿದ ಮಾಸ್ಟರ್​ ಪ್ಲಾನ್​ಗೆ ಬಲಿಯಾದ್ರಾ ಕುಲ್ದೀಪ್-ಚಹಲ್​? - ​ದಕ್ಷಿಣ ಆಫ್ರಿಕಾ ವಿರುದ್ಧದ ಟಿ20

ಯಜುವೇಂದ್ರ ಚಹಾಲ್​ ಹಾಗೂ ಕುಲ್ದೀಪ್​ ಯಾದವ್ ಕಳೆದೆರಡು ವರ್ಷಗಳಿಂದ ಸೀಮಿತ ಓವರ್​ಗಳ ಪಂದ್ಯಗಳಲ್ಲಿ ಅದ್ಭುತ ಪ್ರದರ್ಶನ ತೋರುತ್ತಿದ್ದಾರೆ. ಆದರೆ ಈ ಇಬ್ಬರನ್ನು ಪ್ರಸ್ತುತ ಸರಣಿಗೆ ಪರಿಗಣಿಸದಿರುವುದು ಎಲ್ಲರ ಆಶ್ಚರ್ಯಕ್ಕೆ ಕಾರಣವಾಗಿತ್ತು. ಆದರೆ ಕೊಹ್ಲಿ ಈ ನಿರ್ಧಾರದ ಹಿಂದೆ ಇರುವ ಮಹತ್ವದ ನಿರ್ಣಯವನ್ನು ಬಿಚ್ಚಿಟ್ಟಿದ್ದಾರೆ.

Virat Kohli
author img

By

Published : Sep 15, 2019, 5:18 PM IST

ಮುಂಬೈ: ಭಾರತ ತಂಡದ ಸ್ಪಿನ್​ ಅಸ್ತ್ರಗಳಾದ ಯಜುವೇಂದ್ರ ಚಹಾಲ್​ ಹಾಗೂ ಕುಲ್ದೀಪ್​ ಯಾದವ್​ರನ್ನು ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಗೆ ತಂಡದಿಂದ ಕೈಬಿಟ್ಟಿರುವುದಕ್ಕೆ ನಾಯಕ ಕೊಹ್ಲಿ ಕಾರಣವನ್ನು ಬಿಚ್ಚಿಟ್ಟಿದ್ದಾರೆ.

ಹೌದು, ಯಜುವೇಂದ್ರ ಚಹಾಲ್​ ಹಾಗೂ ಕುಲ್ದೀಪ್​ ಯಾದವ್ ಕಳೆದೆರಡು ವರ್ಷಗಳಿಂದ ಸೀಮಿತ ಓವರ್​ಗಳ ಪಂದ್ಯಗಳಲ್ಲಿ ಅದ್ಭುತ ಪ್ರದರ್ಶನ ತೋರುತ್ತಿದ್ದಾರೆ. ಆದರೆ ಈ ಇಬ್ಬರನ್ನು ಪ್ರಸ್ತುತ ಸರಣಿಗೆ ಪರಿಗಣಿಸದಿರುವುದು ಎಲ್ಲರ ಆಶ್ಚರ್ಯಕ್ಕೆ ಕಾರಣವಾಗಿತ್ತು. ಕೊಹ್ಲಿ ಈ ನಿರ್ಧಾರದ ಹಿಂದೆ ಇರುವ ಮಹತ್ವದ ನಿರ್ಣಯವನ್ನು ಬಿಚ್ಚಿಟ್ಟಿದ್ದಾರೆ.

ಭಾರತ ಮುಂದಿನ ವರ್ಷ ಟಿ20 ವಿಶ್ವಕಪ್​ನಲ್ಲಿ ಪಾಲ್ಗೊಳ್ಳಬೇಕಿದೆ. ಕುಲ್ದೀಪ್​-ಚಹಲ್​ ಉತ್ತಮ ಸ್ಪಿನ್ನರ್​ ಇರಬಹುದು. ಆದರೆ ಕಳೆದೆರಡು ವರ್ಷಗಳಿಂದ ಹಲವು ಯುವ ಆಟಗಾರರು ಐಪಿಎಲ್​ ಸೇರಿದಂತೆ ಹಲವು ದೇಶಿ ಟೂರ್ನಿಗಳಲ್ಲಿ ಉತ್ತಮ ಪ್ರದರ್ಶನ ನೀಡಿ ಗಮನ ಸೆಳೆದಿದ್ದಾರೆ. ಅವರಿಗೂ ಅವಕಾಶ ನೀಡಬೇಕು. ಜೊತೆಗೆ ಕೆಲವೇ ಬೌಲರ್​ಗಳಿಗೆ ಒಗ್ಗಿಕೊಳ್ಳದೆ ಬದಲಾವಣೆ ಮಾಡಬೇಕೆಂದು ಟೀಂ ಮ್ಯಾನೇಜ್​ಮೆಂಟ್​ ನಿರ್ಧರಿಸಿದೆ ಎಂದಿದ್ದಾರೆ.

ಇನ್ನು, ಹೊಸ ಆಟಗಾರರಿಗೆ ಮಣೆ ಹಾಕಬೇಕಿಂದಿರುವುದಕ್ಕೆ ಕಾರಣ ಬ್ಯಾಟಿಂಗ್​ ಬಲಪಡಿಸುವುದು. ವಿಶ್ವದ ಹಲವಾರು ತಂಡಗಳು 9-10 ನೇ ಕ್ರಮಾಂಕದವರೆಗೂ ಬ್ಯಾಟಿಂಗ್​ ನಡೆಸಬಲ್ಲರೆಂದರೆ ನಮಗೇಕೆ ಅದು ಸಾಧ್ಯವಿಲ್ಲ. ಹೀಗಾಗಿ ನಾವು ಕೂಡ ಬೌಲಿಂಗ್​ ಜೊತೆಗೆ ಬ್ಯಾಟಿಂಗ್​, ಫೀಲ್ಡಿಂಗ್​ ಮಾಡಬಲ್ಲಂತಹ ಪ್ರತಿಭೆಗಳಿಗೆ ಅವಕಾಶ ನೀಡಲು ನಿರ್ಧಿರಿಸಿದ್ದೇವೆ ಎಂದು ಕೊಹ್ಲಿ ತಿಳಿಸಿದ್ದಾರೆ.

ನಾವು ಹೊಸ ಪ್ರತಿಭೆಗಳ ಸಾಮರ್ಥ್ಯ, ಹಿಡಿತ ಹಾಗೂ ತಂಡದ ಯಶಸ್ಸಿಗೆ ಯಾವರೀತಿ ಪಾತ್ರವಹಿಸುತ್ತಾರೆ ಎಂಬುದನ್ನು ನೋಡಲು ಕಾತುರದಿಂದ ಕಾದಿದ್ದೇವೆ. ನಾಯಕ ಹಾಗೂ ಆಡಳಿತ ಮಂಡಳಿಗೆ ವಿಭಿನ್ನ ಸಂಯೋಜನೆಗಳಲ್ಲಿ ವಿಭಿನ್ನ ಆಟಗಾರರು ಯಾವ ರೀತಿ ಪ್ರದರ್ಶನ ತೋರಲಿದ್ದಾರೆ ಎಂಬುದನ್ನು ನೋಡಲಿದ್ದೇವೆ. ಹೀಗಾಗಿ ಯುವ ಪ್ರತಿಭೆಗಳ ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದ್ದಾರೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.