ETV Bharat / sports

ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ವಿರಾಟ್​​ ಕೊಹ್ಲಿ ಮೊದಲ ಪ್ರತಿಕ್ರಿಯೆ... ಹೇಳಿದ್ರು ಈ ಮಾತು! - ಪೌರತ್ವ ತಿದ್ದುಪಡಿ ಕಾಯ್ದೆ

ಕಳೆದ ಕೆಲ ದಿನಗಳಿಂದ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ದೇಶಾದ್ಯಂತ ವ್ಯಾಪಕ ಪ್ರತಿಭಟನೆ ನಡೆಯುತ್ತಿದ್ದು, ಇದೇ ಮೊದಲ ಬಾರಿಗೆ ಟೀಂ ಇಂಡಿಯಾ ಕ್ಯಾಪ್ಟನ್​ ಕೊಹ್ಲಿ ಈ ವಿಷಯವಾಗಿ ಮಾತನಾಡಿದ್ದಾರೆ.

Virat Kohli on Citizenship Amendment Act
ವಿರಾಟ್​ ಕೊಹ್ಲಿ ಸುದ್ದಿಗೋಷ್ಠಿ
author img

By

Published : Jan 4, 2020, 4:03 PM IST

Updated : Jan 4, 2020, 6:42 PM IST

ಗುವಾಹಟಿ: ಶ್ರೀಲಂಕಾ-ಭಾರತ ನಡುವೆ ನಾಳೆ ಗುವಾಹಟಿಯಲ್ಲಿ ಟಿ-20 ಸರಣಿಯ ಮೂದಲ ಪಂದ್ಯ ನಡೆಯಲಿದ್ದು, ಅದಕ್ಕಾಗಿ ಉಭಯ ತಂಡಗಳು ಈಗಾಗಲೇ ಭರ್ಜರಿ ತಾಲೀಮು ನಡೆಸಿವೆ. ಇದರ ಮಧ್ಯೆ ಅಸ್ಸೋಂನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯ ಕಿಚ್ಚು ಜೋರಾಗಿದ್ದು, ಇದೇ ಮೊದಲ ಸಲ ತಂಡದ ಕ್ಯಾಪ್ಟನ್​ ಆ ಬಗ್ಗೆ ಮಾತನಾಡಿದ್ದಾರೆ.

ವಿರಾಟ್​ ಕೊಹ್ಲಿ ಸುದ್ದಿಗೋಷ್ಠಿ

ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ಕುರಿತು ರಾಷ್ಟ್ರವ್ಯಾಪಿ ನಡೆಯುತ್ತಿರುವ ಪ್ರತಿಭಟನೆ ಬಗ್ಗೆ ಪ್ರತಿಕ್ರಿಯೆ ನೀಡಲು ನಾನು ಜವಾಬ್ದಾರಿ ವ್ಯಕ್ತಿಯಲ್ಲ ಎಂದುಕೊಂಡಿದ್ದೇನೆ ಎಂದು ರನ್​ಮಷಿನ್​​ ಹೇಳಿದ್ದಾರೆ. ನಾಳೆ ನಡೆಯಲಿರುವ ಮೊದಲ ಪಂದ್ಯಕ್ಕೂ ಮೊದಲು ಕ್ಯಾಪ್ಟನ್​ ಕೊಹ್ಲಿ ಸುದ್ದಿಗೋಷ್ಠಿಯಲ್ಲಿ ಭಾಗಿಯಾದರು. ಈ ವೇಳೆ ವರದಿಗಾರರು ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಅವರ ಬಳಿ ಪ್ರಶ್ನೆಗಳ ಸುರಿಮಳೆಗೈದರು. ಈ ವೇಳೆ ಮಾತನಾಡಿದ ಕೊಹ್ಲಿ, ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ನನಗೆ ಹೆಚ್ಚಿನ ಮಾಹಿತಿ ಇಲ್ಲದ ಕಾರಣ ಪ್ರತಿಕ್ರಿಯೆ ನೀಡುವುದು ನನ್ನ ಬೇಜವಾಬ್ದಾರಿಯಾಗಲಿದೆ ಎಂದು ಕೊಂಡಿದ್ದೇನೆ. ಸದ್ಯ ನಗರ ಸಂಪೂರ್ಣವಾಗಿ ಸುರಕ್ಷಿತವಾಗಿದೆ ಎಂದು ನಾವು ಅಂದುಕೊಂಡಿದ್ದೇವೆ ಎಂದರು.

ಇದೇ ವೇಳೆ ಹಗಲು-ರಾತ್ರಿ ಟೆಸ್ಟ್​​ ಪಂದ್ಯದ ಬಗ್ಗೆ ಮಾತನಾಡಿದ ಕೊಹ್ಲಿ ಕ್ರಿಕೆಟ್​​ನ್ನ ಮತ್ತೊಂದು ದಿಸೆಗೆ ತೆಗೆದುಕೊಂಡು ಹೋಗಲು ಇದು ಹೊಸ ಹೆಜ್ಜೆಯಾಗಿದೆ ಎಂದು ನಾವು ಅಂದುಕೊಂಡಿದ್ದೇವೆ ಎಂದರು. ಲೋಕಸಭೆಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಯಾದಾಗಿನಿಂದಲೂ ಅಸ್ಸೋಂನಲ್ಲಿ ವ್ಯಾಪಕ ಪ್ರತಿಭಟನೆ ನಡೆಯುತ್ತಿದೆ.

Intro:Body:

nternational cooperation needed to tackle financial crises: Nobel Laureate

Conclusion:
Last Updated : Jan 4, 2020, 6:42 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.