ನಾಗಪುರ : ನಾಗಪುರದಲ್ಲಿ ಆಸೀಸ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಕ್ಯಾಪ್ಟನ್ ವಿರಾಟ್ ಕೊಹ್ಲಿ ಅದ್ಭುತ ಸೆಂಚುರಿ ಸಿಡಿಸಿದ್ದರಿಂದ ಭಾರತ 8 ರನ್‌ನಿಂದ ರೋಚಕ ಗೆಲುವು ಕಂಡಿತು. ಆದರೆ, ದಿಲ್ಲಿವಾಲಾಗೆ ಇದೊಂದು ದೊಡ್ಡ ವಿಷಯವೇ ಅಲ್ವಂತೆ.
ಫಸ್ಟ್ ಇನ್ನಿಂಗ್ಸ್‌ಗಿಂತಲೂ 2ನೇ ಇನ್ನಿಂಗ್ಸ್ ಇಷ್ಟ :
40ನೇ ಸೆಂಚುರಿ ಭಾರಿಸಿರೋದು ಒಳ್ಳೇ ಅನುಭವ. ಆದ್ರೇ, ಇದು ಬರೀ ನಂಬರಷ್ಟೇ.. ಭಾರತ ತಂಡ ಗೆಲ್ಲೋದಕ್ಕಾಗಿ ಆಡೋದು ನನಗೆ ತುಂಬಾ ಖುಷಿ ಕೊಡುತ್ತೆ ಅಂತ ವಿರಾಟ್ ಕೊಹ್ಲಿ ಹೇಳಿಕೊಂಡಿದ್ದಾರೆ. ನಾ ಆಡಿದ ಮೊದಲ ಇನ್ನಿಂಗ್ಸ್‌ಗಿಂತಲೂ 2ನೇ ಇನ್ನಿಂಗ್ಸ್‌ನಲ್ಲಿ ಆಡಿದ ರೀತಿಗೆ ಹೆಮ್ಮೆ ಪಡುತ್ತೇನೆ. 46 ರನ್ ಸಿಡಿಸಿದ ವಿಜಯ್ ಶಂಕರ್ ಆಟ ಔಟ್‌ಸ್ಟ್ಯಾಂಡಿಂಗ್. ಆದರೆ, ಅವರು ಅನಾಯಾಸವಾಗಿ ರನೌಟಾದರು. ಕೇದಾರ್ ಮತ್ತು ಎಂ.ಎಸ್ ಧೋನಿ ಬೇಗ ವಿಕೆಟ್ ಒಪ್ಪಿಸಿದ್ದರು.
ಇದರ ಮಧ್ಯೆಯೂ ನಾಗಪುರ ಪಂದ್ಯ ಗೆದ್ದ ರೀತಿಯಿದೆ ಅಲ್ಲ, ಅದು ನಮಗೆ ವಿಶ್ವಕಪ್ ಗೆಲ್ಲೋದಕ್ಕೆ ಕಾನ್ಫಿಡೆನ್ಸ್ ಮೂಡಿಸುತ್ತೆ. ಕೆಟ್ಟ ಸಮಯದಲ್ಲೂ ಈ ರೀತಿ ಆಡಿ ಗೆಲ್ಲುವುದು ಮುಖ್ಯವಾಗಿರುತ್ತೆ. ವಿಶ್ವಕಪ್‌ನಲ್ಲೂ ಕಡಿಮೆ ರನ್ ಪೇರಿಸಿದರೂ ನಾವು ಗೆಲ್ಲಬಹುದು ಅನ್ನೋದಕ್ಕೆ ಇದೇ ಸಾಕ್ಷಿ. ಈ ರೀತಿ ರೂಪಿಸಿರುವ ಪಿಚ್‌ನಲ್ಲಿ ಕೇದಾರ್ ಜಾಧವ್ ಆಟ ಹೇಳಿ ಮಾಡಿಸಿದಂತಿರುತ್ತೆ ಅಂತ ಪಂದ್ಯದ ಬಳಿಕ ಕೊಹ್ಲಿ ಹೇಳಿಕೊಂಡಿದ್ದರು.
ಪಂದ್ಯ ಗೆಲ್ಲೋದಕ್ಕೆ ಎಲ್ಲರೂ ಕಾರಣ ಎಂದ ಕೊಹ್ಲಿ :
120 ಬಾಲ್‌ಗೆ 116 ರನ್ ಸಿಡಿಸಿದ್ದ ಕ್ಯಾಪ್ಟನ್ ವಿರಾಟ್ ಕೊಹ್ಲಿ, ಆಸೀಸ್ ತಂಡವನ್ನ 242ರನ್‌ಗೆ ಕಟ್ಟಿ ಹಾಕಿದ್ದರು. 8ರನ್‌ನಿಂದ ಭಾರತ ಗೆಲ್ಲಲು ಕೊಹ್ಲಿ ಮುಖ್ಯ ಪಾತ್ರವಹಿಸಿದ್ದರು. ಆದರೆ, ಅದರ ಸಂಪೂರ್ಣ ಕ್ರೆಡಿಟ್ ತೆಗೆದುಕೊಳ್ಳೋದಕ್ಕೆ ಮಾತ್ರ ಕೊಹ್ಲಿ ಇಷ್ಟಪಡುತ್ತಿಲ್ಲ. 'ನಾನು ಯಾವಾಗ ಬ್ಯಾಟ್ ಮಾಡಲು ತೆರಳಿದೆನೋ.. ಆಗ ತಂಡ ಸಂಕಷ್ಟಕ್ಕೆ ಸಿಲುಕಿತ್ತು. ಆಗ ನನಗೆ ಬೇರೆ ಆಯ್ಕೆಯೇ ಇರಲಿಲ್ಲ. ಹಾಗಾಗಿ ನಾನು ನೆಲಕಚ್ಚಿ ಆಡಿ ಇನ್ನಿಂಗ್ಸ್ ಕಟ್ಟಿದೆ. ಕೊನೆಯ ಓವರ್‌ನಲ್ಲಿ ಆಸೀಸ್ ಗೆಲ್ಲಲು 11 ರನ್ ಬೇಕಿತ್ತು. ಆದರೆ, ವೇಗದ ಬೌಲರ್ ವಿಜಯ್ ಶಂಕರ್, ಆಸೀಸ್‌ನ 2 ವಿಕೆಟ್ ಕಿತ್ತರು. ವಿಜಯ್‌ಗೆ ನಿರ್ಣಾಯಕ ಓವರ್‌ನ ಬಾಲ್ ಮಾಡಲು ಕೊಟ್ಟು ಕೊಹ್ಲಿ ಅದರಲ್ಲೂ ಕ್ಲಿಕ್ ಆಗಿದ್ದರು.
ವಿಜಯ್ ವಿಕೆಟ್ ಟು ವಿಕೆಟ್ ಬೌಲ್ ಮಾಡಿ ಸಕ್ಸಸಾದರು. ಉಪ ನಾಯಕ ರೋಹಿತ್ ಜತೆ ಯಾವಾಗಲೂ ಮಾತಾಡಲು ನೈಸಾಗಿರುತ್ತೆ. ಬೌಲರ್‌ನಿಂದ ಬಹಳ ದೂರವಿದ್ದರೂ ಧೋನಿ ಬಂದು ಬೌಲರ್‌ಗೆ ಸಲಹೆ ನೀಡ್ತಾರೆ. ಇವರೆಲ್ಲರೂ ನನಗೆ ಒಂದೇ. ಮತ್ತು ಗೆಲುವಿನಲ್ಲಿ ಇವರೆಲ್ಲರ ಪಾತ್ರವೂ ಅಷ್ಟೇ ಮುಖ್ಯ. 29 ರನ್ ಕೊಟ್ಟು 2 ವಿಕೆಟ್ ಕಿತ್ತಿರುವ ಬೂಮ್ರಾ ರೀತಿಯ ಬಾಲರ್‌ನ ತಂಡದಲ್ಲಿ ಹೊಂದಿರುವುದೇ ಸಂತೋಷ. ಒಂದೇ ಓವರ್‌ನಲ್ಲಿ 2 ವಿಕೆಟ್ ಕಿತ್ತಿರುವ ಬೂಮ್ರಾ ಒಬ್ಬ ಚಾಂಪಿಯನ್ ಅಂತ ಕೊಹ್ಲಿ ಹೇಳಿಕೊಂಡಿದ್ದಾರೆ. ತಂಡದ ಸ್ಫೂರ್ತಿಯೇ ಗೆಲುವಿಗೆ ಕಾರಣ ಎಂದಿದ್ದಾರೆ ಕ್ಯಾಪ್ಟನ್.
ವಿರಾಟ್ ಕೊಹ್ಲಿಯಿಂದಾಗಿಯೇ ಪಂದ್ಯ ಸೋತೆವು :
ಸೋಲಿನ ಬಳಿಕ ಆಸೀಸ್ ಕ್ಯಾಪ್ಟನ್ ಆ್ಯರೋನ್ ಫಿಂಚ್, ವಿರಾಟ್ ಕೊಹ್ಲಿ ಆಟವೇ ತಮ್ಮ ಸೋಲಿಗೆ ಕಾರಣವಾಯಿತು ಅಂತಾ ಹೇಳಿದ್ದರು. ನಮ್ಮ ಆರಂಭಿಕರು 80-100 ರನ್ ಪೇರಿಸಿದ್ದರೆ, ಖಂಡಿತಾ ನಾವು ಗೆಲ್ಲುತ್ತಿದ್ದೆವು. ಆದರೆ, ನಾವು ಆರಂಭಿಕರಿಂದ 30 ರಿಂದ 40 ರನ್ ಪೇರಿಸಲಷ್ಟೇ ಸಾಧ್ಯವಾಯಿತು. ಆದರೆ, ಟೀಂ ಇಂಡಿಯಾ ಆರಂಭಿಕ ಜೋಡಿ 100 ಮಾಡಿತು. ಇದೇ ಪಂದ್ಯದ ಸೋಲಿಗೆ ಕಾರಣವಾಯಿತು ಅಂತ ಹೇಳಿದ್ದರು. ಏನೇ ಸಾಧನೆ ಮಾಡಿದ್ದರೂ ಅದರ ಬಗ್ಗೆ ಹೇಳಿಕೊಳ್ಳದ ವಿರಾಟ್ ಕೊಹ್ಲಿ ಮಾತ್ರ ತಂಡದ ಸ್ಫೂರ್ತಿಯನ್ನ ಹೊಗಳಿದ್ದಾರೆ. ಆ ಮೂಲಕ ಒಳ್ಳೇ ನಾಯಕತ್ವ ತೋರಿಸಿಕೊಟ್ಟಿದ್ದಾರೆ.