ಲಂಡನ್: ಅಂತಾರಾಷ್ಟ್ರೀಯ ಕ್ರಿಕೆಟ್ ಸಂಸ್ಥೆ(ಐಸಿಸಿ) ಭಾನುವಾರ ದಶಕದ ಟೆಸ್ಟ್ ತಂಡವನ್ನು ಪ್ರಕಟಿಸಿದೆ. ಈ ತಂಡವನ್ನು ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಮುನ್ನಡೆಸಲಿದ್ದಾರೆ.
2010-20ರ ಅವಧಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಆಧಾರದ ಮೇಲೆ ಐಸಿಸಿ ಈ ತಂಡವನ್ನು ಪ್ರಕಟಿಸಿದೆ. ದಶಕದ ಈ ಟೀಂನಲ್ಲಿ ಭಾರತ ತಂಡದ ಇಬ್ಬರು, ಇಂಗ್ಲೆಂಡ್‌ನ ನಾಲ್ವರು, ಆಸ್ಟ್ರೇಲಿಯಾದ ಇಬ್ಬರು, ನ್ಯೂಜಿಲ್ಯಾಂಡ್, ದಕ್ಷಿಣ ಆಫ್ರಿಕಾ ಮತ್ತು ಶ್ರೀಲಂಕಾ ತಂಡದ ತಲಾ ಒಬ್ಬ ಆಟಗಾರ ಸ್ಥಾನ ಪಡೆದುಕೊಂಡಿದ್ದಾರೆ.
-
Your ICC Men's Test Team of the Decade 🏏
— ICC (@ICC) December 27, 2020 " class="align-text-top noRightClick twitterSection" data="
A line-up that could probably bat for a week! 💥 #ICCAwards pic.twitter.com/Kds4fMUAEG
">Your ICC Men's Test Team of the Decade 🏏
— ICC (@ICC) December 27, 2020
A line-up that could probably bat for a week! 💥 #ICCAwards pic.twitter.com/Kds4fMUAEGYour ICC Men's Test Team of the Decade 🏏
— ICC (@ICC) December 27, 2020
A line-up that could probably bat for a week! 💥 #ICCAwards pic.twitter.com/Kds4fMUAEG
ಓದಿ: ಐಸಿಸಿ ದಶಕದ ಟಿ20 ಮತ್ತು ಏಕದಿನ ತಂಡಕ್ಕೆ ಧೋನಿ ನಾಯಕ... ಕೊಹ್ಲಿ,ರೋಹಿತ್ಗೂ ಸ್ಥಾನ
ದಶಕದ ತಂಡದಲ್ಲಿ ಆರಂಭಿಕರಾಗಿ ಅಲಿಸ್ಟರ್ ಕುಕ್ ಹಾಗೂ ಡೇವಿಡ್ ವಾರ್ನರ್, 3 ಮತ್ತು 4ರಲ್ಲಿ ಕೇನ್ ವಿಲಿಯಮ್ಸನ್ ಮತ್ತು ವಿರಾಟ್ ಕೊಹ್ಲಿ, 5ರಲ್ಲಿ ಸ್ಟೀವ್ ಸ್ಮಿತ್, 6ರಲ್ಲಿ ಕುಮಾರ್ ಸಂಗಕ್ಕಾರ ಬ್ಯಾಟಿಂಗ್ ವಿಭಾಗದಲ್ಲಿ ಅವಕಾಶ ಪಡೆದಿದ್ದಾರೆ.
ಆಲ್ರೌಂಡರ್ ಕೋಟಾದಲ್ಲಿ ಬೆನ್ಸ್ಟೋಕ್ಸ್ , ಸ್ಪಿನ್ನರ್ ವಿಭಾಗದಲ್ಲಿ ರವಿಚಂದ್ರನ್ ಅಶ್ವಿನ್ ಇದ್ದರೆ, ವೇಗಿಗಳಲ್ಲಿ ಡೇಲ್ ಸ್ಟೈನ್, ಜೇಮ್ಸ್ ಆ್ಯಂಡರ್ಸನ್ ಮತ್ತು ಸ್ಟುವರ್ಟ್ ಬ್ರಾಡ್ ಇದ್ದಾರೆ.