ETV Bharat / sports

ಟಿ-20 ಸರಣಿ : ಧೋನಿ ದಾಖಲೆ ಮುರಿಯಲು ಕೊಹ್ಲಿ - ವಿಲಿಯಮ್ಸನ್ ಪೈಪೋಟಿ - ಧೋನಿ ದಾಖಲೆ ಮುರಿಯಲು ಕೊಹ್ಲಿ-ವಿಲಿಯಮ್ಸನ್ ಪೈಪೋಟಿ

ಭಾರತ ತಂಡದ ನಾಯಕನಾಗಿ ಎಂಎಸ್​ ಧೋನಿ ಟಿ-20 ಕ್ರಿಕೆಟ್​ನಲ್ಲಿ1,112 ರನ್​ಗಳಿಸಿ ಅತಿ ಹೆಚ್ಚು ರನ್​ಗಳಿಸಿರುವ ವಿಶ್ವದ 2ನೇ ನಾಯಕ ಎಂಬ ದಾಖಲೆ ಬರೆದಿದ್ದಾರೆ.

Virat Kohli, Kane Williamson
Virat Kohli, Kane Williamson
author img

By

Published : Jan 23, 2020, 6:39 PM IST

Updated : Jan 23, 2020, 7:53 PM IST

ಆಕ್ಲೆಂಡ್​: ಭಾರತ ಹಾಗೂ ನ್ಯೂಜಿಲ್ಯಾಂಡ್​ ತಂಡಗಳ ನಡುವಿನ 5 ಪಂದ್ಯಗಳ ಟಿ-20 ಸರಣಿ ಶುಕ್ರವಾರ ಆರಂಭವಾಗಲಿದ್ದು, ಭಾರತ ತಂಡದ ನಾಯಕ ಎಂಎಸ್​ ಧೋನಿ ದಾಖಲೆ ಮುರಿಯಲು ಕೊಹ್ಲಿ ಹಾಗೂ ವಿಲಿಯಮ್ಸನ್ ಪೈಪೋಟಿ ನಡೆಸುತ್ತಿದ್ದಾರೆ.

ಭಾರತ ತಂಡದ ನಾಯಕನಾಗಿ ಎಂಎಸ್​ ಧೋನಿ ಟಿ-20 ಕ್ರಿಕೆಟ್​ನಲ್ಲಿ1,112 ರನ್​ಗಳಿಸಿ ಅತಿ ಹೆಚ್ಚು ರನ್​ಗಳಿಸಿರುವ ವಿಶ್ವದ 2ನೇ ನಾಯಕ ಎಂಬ ದಾಖಲೆ ಬರೆದಿದ್ದಾರೆ.

ಶುಕ್ರವಾರ ನಡೆಯಲಿರುವ ಮೊದಲ ಟಿ-20 ಪಂದ್ಯದಲ್ಲಿ ಭಾರತ ತಂಡದ ನಾಯಕ ಹಾಗೂ ನ್ಯೂಜಿಲ್ಯಾಂಡ್​ ತಂಡದ ನಾಯಕ ಧೋನಿ ದಾಖಲೆಯನ್ನು ಮುರಿಯಲು ಪೈಪೋಟಿಗಿಳಿಯಲಿದ್ದಾರೆ. ನಾಯಕನಾಗಿ ವಿಲಿಯಮ್ಸನ್​ 1,083 ರನ್​ ಗಳಿಸಿದ್ದರೆ, ಕೊಹ್ಲಿ1,032 ರನ್​ ಗಳಿಸಿದ್ದಾರೆ.

ವಿಲಿಯಮ್ಸನ್​ ನಾಳಿನ ಪಂದ್ಯದಲ್ಲಿ 30 ರನ್​ಗಳಿಸಿದರೆ ಧೋನಿ ದಾಖಲೆ ಮುರಿಯಲಿದ್ದಾರೆ. ಇನ್ನು ಕೊಹ್ಲಿ ಈ ದಾಖಲೆಗಾಗಿ 81 ರನ್​ ಗಳಿಸಬೇಕಾಗಿದೆ. ದಕ್ಷಿಣ ಆಫ್ರಿಕಾದ ಫಾಫ್​ ಡು ಪ್ಲೆಸಿಸ್​ 1,273 ರನ್​ಗಳೊಂದಿಗೆ ನಾಯಕನಾಗಿ ಅತಿ ಹೆಚ್ಚು ರನ್ ​ಗಳಿಸಿ ಮೊದಲ ಸ್ಥಾನದಲ್ಲಿದ್ದಾರೆ.

ಭಾರತ ತಂಡ ಕಳೆದ ಬಾರಿ ನ್ಯೂಜಿಲ್ಯಾಂಡ್​ ಪ್ರವಾಸ ಕೈಗೊಂಡಿದ್ದಾಗ ಏಕದಿನ ಸರಣಿ ಗೆದ್ದಿತ್ತು. ಆದರೆ ಟಿ-20 ಸರಣಿಯನ್ನು ರೋಹಿತ್​ ಶರ್ಮಾ ನೇತೃತ್ವದ ಭಾರತ ತಂಡ 2-1ರಲ್ಲಿ ಕಳೆದುಕೊಂಡಿತ್ತು.

Intro:Body:Conclusion:
Last Updated : Jan 23, 2020, 7:53 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.