ETV Bharat / sports

ವಿರಾಟ್​ ಕೊಹ್ಲಿ 3 ಮಾದರಿ ಕ್ರಿಕಟ್​ನ ಪರಿಪೂರ್ಣ ಕ್ರಿಕೆಟಿಗ:ಜೋ ರೂಟ್

author img

By

Published : Oct 24, 2020, 6:17 PM IST

ವಿಶ್ವ ಕ್ರಿಕೆಟ್‌ನಲ್ಲಿ ಕೊಹ್ಲಿ, ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್, ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ಮತ್ತು ರೂಟ್ ಪ್ರಸ್ತುತ ವಿಶ್ವ ಟೆಸ್ಟ್ ಕ್ರಿಕೆಟ್‌ನಲ್ಲಿ ಪ್ರಮುಖ ಬ್ಯಾಟ್ಸ್‌ಮನ್‌ಗಳು ಎಂದು ಒಪ್ಪಿಕೊಳ್ಳಲಾಗಿದೆ. ಇವರನ್ನು ವಿಶ್ವದ 'ಶ್ರೇಷ್ಠ ನಾಲ್ವರು'(fab four​) ಎಂದಲೂ ಬಣ್ಣಿಸಲಾಗುತ್ತದೆ.

ವಿರಾಟ್ ಕೊಹ್ಲಿ- ಜೋ ರೂಟ್
ವಿರಾಟ್ ಕೊಹ್ಲಿ- ಜೋ ರೂಟ್

ಹೈದರಾಬಾದ್​: ಭಾರತ ತಂಡದ ನಾಯಕ ವಿರಾಟ್ ಕೊಹ್ಲಿಯನ್ನು ಮೂರು ಮಾದರಿಯ ಕ್ರಿಕೆಟ್​ನ ' ಅಂತ್ಯಂತ ಪರಿಪೂರ್ಣ ಆಟಗಾರ' ಎಂದು ಪರಿಗಣಿಸುವುದಾಗಿ ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕ ಜೋ ರೂಟ್ ಹೇಳಿದ್ದಾರೆ.

ವಿರಾಟ್​ ಕೊಹ್ಲಿ ಅವರ ಆಲ್ರೌಂಡರ್​ ಆಟ, ಅದರಲ್ಲೂ ಸೀಮಿತ ಓವರ್​ಗಳ ಕ್ರಿಕೆಟ್‌ನಲ್ಲಿರುವ ಚೇಸಿಂಗ್ ಮಾಡುವ ಅವರ ಸಾಮರ್ಥ್ಯ ಅಸಾಧಾರಣ ಎಂದು ರೂಟ್ ಹೇಳಿದ್ದಾರೆ. ಜೊತೆಗೆ ತಮ್ಮದೇ ದೇಶದ ವಿಕೆಟ್ ಕೀಪರ್ ಬ್ಯಾಟ್ಸ್​ಮನ್​ ಜೋಸ್​ ಬಟ್ಲರ್​ ಪ್ರಸ್ತುತ ವಿಶ್ವದ ಪರಿಪೂರ್ಣ ವೈಟ್ ಬಾಲ್ ಕ್ರಿಕೆಟಿಗ ಎಂದು ಜೋ ರೂಟ್ ಅಭಿಪ್ರಾಯಪಟ್ಟಿದ್ದಾರೆ.

ವಿರಾಟ್ ಕೊಹ್ಲಿ- ಜೋ ರೂಟ್
ವಿರಾಟ್ ಕೊಹ್ಲಿ- ಜೋ ರೂಟ್

ವಿಶ್ವ ಕ್ರಿಕೆಟ್‌ನಲ್ಲಿ ಕೊಹ್ಲಿ, ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್, ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ಮತ್ತು ರೂಟ್ ಪ್ರಸ್ತುತ ವಿಶ್ವ ಟೆಸ್ಟ್ ಕ್ರಿಕೆಟ್‌ನಲ್ಲಿ ಪ್ರಮುಖ ಬ್ಯಾಟ್ಸ್‌ಮನ್‌ಗಳು ಎಂದು ಒಪ್ಪಿಕೊಳ್ಳಲಾಗಿದೆ. ಇವರನ್ನು ವಿಶ್ವದ ' ಅಗ್ರ ನಾಲ್ವರು(fab four) ' ಎಂದಲೂ ಬಣ್ಣಿಸಲಾಗುತ್ತದೆ.

"ಆ ಮೂವರಲ್ಲಿ ವಿರಾಟ್​ ಮೂರು ಮಾದರಿಯ ಕ್ರಿಕೆಟ್​ನಲ್ಲೂ ಪರಿಪೂರ್ಣ ಬ್ಯಾಟ್ಸ್​ಮನ್​ ಆಗಿದ್ದಾರೆ. ಸೀಮಿತ ಓವರ್​ಗಳ ಕ್ರಿಕೆಟ್​ನಲ್ಲಿ ಅವರ ಚೇಸಿಂಗ್ ಮಾಡುವ ಕೌಶಲ್ಯ ಅದ್ಭುತ, ಅವರು ಅಜೇಯರಾಗಿ ಪಂದ್ಯ ಮುಗಿಸುವುದು ಅಸಾಧಾರಣ" ಎಂದು ರೂಟ್ ಕೊಹ್ಲಿ ಸಾಮರ್ಥ್ಯವನ್ನು ವಿವರಿಸಿದ್ದಾರೆ.

ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ

"ಕೊಹ್ಲಿ ಉತ್ತಮ ಆಲ್​ರೌಂಡ್​ ಆಟವನ್ನು ಹೊಂದಿದ್ದಾರೆ. ವೇಗ ಅಥವಾ ಸ್ಪಿನ್​ ಬೌಲಿಂಗ್ ವಿರುದ್ಧ ಅವರು ದುರ್ಬಲ ಎಂದು ಹೇಳಲಾಗದು. 2014ರ ಇಂಗ್ಲೆಂಡ್ ಪ್ರವಾಸದಲ್ಲಿ ಕೊಹ್ಲಿ ಫಾರ್ಮ್​ ಸಮಸ್ಯೆ ಎದುರುಸಿದ್ದರು. ಆದರೆ 2018ರ ಪ್ರವಾಸದಲ್ಲಿ ತುಂಬಾ ರನ್​ಗಳಿಸಿದ್ದರು. ಅವರು ಇದೇ ರೀತಿಯ ಪ್ರದರ್ಶನವನ್ನು ವಿಶ್ವದಾದ್ಯಂತ ತೋರಿದ್ದಾರೆ. ಭಾರತ ತಂಡದ ಭಾರವನ್ನು ತಮ್ಮ ಭುಜದ ಮೇಲೆ ಹೊತ್ತಿದ್ದಾರೆ" ಎಂದು ರೂಟ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

2014 ರ ಇಂಗ್ಲೆಂಡ್ ಪ್ರವಾಸದಲ್ಲಿ 13.5 ಸರಾಸರಿಯಲ್ಲಿ 144 ರನ್​ಗಳಿಸಿದ್ದ ವಿರಾಟ್​ 2018 ರ ಪ್ರವಾಸದಲ್ಲಿ ಅದ್ಭುತವಾಗಿ ಕಮ್​ಬ್ಯಾಕ್ ಮಾಡಿ 3 ವಿಭಾಗದಲ್ಲಿ 894 ರನ್​ಗಳಿಸಿ ಮಿಂಚಿದ್ದರು. ಆದರೆ ಟಿ20 ಸರಣಿಯನ್ನು ಗೆದ್ದಿದ್ದ ಭಾರತ ಏಕದಿನ ಹಾಗೂ ಟೆಸ್ಟ್​ ಸರಣಿಯನ್ನು ಕಳೆದುಕೊಂಡಿತ್ತು.

29 ವರ್ಷದ ರೂಟ್ ತಮ್ಮನ್ನು ಅಗ್ರ ಮೂರು ಬ್ಯಾಟ್ಸ್​ಮನ್​ಗಳಾದ ವಿರಾಟ್, ವಿಲಿಯಮ್ಸನ್ ಹಾಗೂ ಸ್ಮಿತ್​ರೊಂದಿಗೆ ಎಂದಿಗೂ ಹೋಲಿಸಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ. ಏಕೆಂದರೆ ಅವರು ಮೂರು ವಿಭಾಗದ ಕ್ರಿಕೆಟ್​ನಲ್ಲಿ ಹೇಗೆ ಇನ್ನಿಂಗ್ಸ್​ ಕಟ್ಟುತ್ತಾರೆ ಎಂದು ನಾನು ಬಹಳಷ್ಟು ನೋಡಿದ್ದೇನೆ ಎಂದು ಅವರು ಹೋಲಿಕೆಗೆ ನಾನು ಸಮರ್ಥನಲ್ಲ ಎಂದು ಅಬಿಪ್ರಾಯಪಟ್ಟಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.