ETV Bharat / sports

ಮೂರುಬಾರಿ ಕೈಚೆಲ್ಲಿದರು, ಈ ಸಾರಿ ಕಪ್‌ಗೆ ಮುತ್ತಿಕ್ಕುವರೇ..? ಕೊಹ್ಲಿ ಫುಲ್ ಕಾನ್ಫಿಡೆಂಟ್‌! - ಆರ್‌ಸಿಬಿ

ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಇದುವರೆಗೆ ಪ್ರಶಸ್ತಿಯನ್ನು ಗೆದ್ದಿಲ್ಲ. ಮೊದಲ ಆವೃತ್ತಿಯಿಂದಲೂ ತಂಡದ ಜತೆಗಿರುವ ವಿರಾಟ್ ಕೊಹ್ಲಿ ಬಳಗ ಈ ಸಾರಿ ಕಪ್‌ಗೆ ಮುತ್ತಿಕ್ಕುವರೇ..?

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ
author img

By

Published : Mar 18, 2019, 7:25 PM IST

ಬೆಂಗಳೂರು : ಐಪಿಎಲ್‌ನ 11 ಸೀಸನ್‌ ಮುಗಿದಿದ್ದರೂ ಆರ್‌ಸಿಬಿಗೆ ಮಾತ್ರ ಕಪ್ ಗೆಲ್ಲಲು ಆಗಿಲ್ಲ. ಆದರೆ, ಈ ಸಾರಿ ತವರಿನ ಅಭಿಮಾನಿಗಳ ಆಸೆ ಆರ್‌ಸಿಬಿ ತೀರಿಸಲು ಕ್ಯಾಪ್ಟನ್‌ ವಿರಾಟ್‌ ಕೊಹ್ಲಿ ಮಾತ್ರ ಬೆಂಗಳೂರಿನ ತವರು ನೆಲದಲ್ಲಿ ಸಿಕ್ಕಾಪಟ್ಟೆ ಬೆವರು ಹರಿಸುತ್ತಿದ್ದಾರೆ.

12ನೇ ಐಪಿಎಲ್‌ನಲ್ಲಾದರೂ ಆಸೆ ಈಡೇರುತ್ತಾ ಶಿವಾ :

ಒಂದು ಸಾರಿ ಅಲ್ಲ, ಮೂರು ಬಾರಿ ಆರ್‌ಸಿಬಿ ಐಪಿಎಲ್‌ನಲ್ಲಿ ಫೈನಲ್‌ ತಲುಪಿತ್ತು. ಅದೆಂಥಾ ಬ್ಯಾಡ್‌ಲಕ್‌ ಒಂದುಬಾರಿಯೂ ಕಪ್‌ಗೆ ಮುತ್ತಿಕ್ಕಲಿಲ್ಲ. ಪ್ರತಿ ಸಾರಿ ಅಭಿಮಾನಿಗಳು ಈ ಸಾರಿ ಕಪ್ ನಮ್ದೇ ಅಂತಾ ಹೇಳ್ಕೊಂಡು ಅಭಿಮಾನಪಟ್ಟಿದ್ದೇ ಬಂತು. ಆದರೂ ಫ್ಯಾನ್ಸ್‌ ಆಸೆ ಈಡೇರಿಲ್ಲ. 2009ರಲ್ಲಿ ದಕ್ಷಿಣ ಆಫ್ರಿಕಾದ ಜೋಹಾನ್ಸ್‌ಬರ್ಗ್‌ನಲ್ಲಿ ಡೆಕ್ಕನ್‌ ಚಾರ್ಜರ್ಸ್‌ ವಿರುದ್ಧದ ಫೈನಲ್‌ ಮ್ಯಾಚ್‌ನಲ್ಲಿ ಆರ್‌ಸಿಪಿ ಮೊದಲ ಬಾರಿ ಅಂತಿಮ ಹಣಾಹಣಿಯಲ್ಲಿ ಸೋತಿತ್ತು.

Royal Challengers Bangalore Captain Virat Kohli
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ

ವಿರಾಟ್‌ ಕೊಹ್ಲಿ ಆಗಿನ್ನೂ ಯಂಗ್‌ಸ್ಟರ್. ವಿಶ್ವ ಕ್ರಿಕೆಟ್‌ನಲ್ಲಿ ಅಷ್ಟೊಂದು ಅಚ್ಚೊತ್ತಿರಲಿಲ್ಲ. 2011ರಲ್ಲಿ 2ನೇ ಬಾರಿಗೆ Rcb ಫೈನಲ್‌ ತಲುಪಿತ್ತು. 2ನೇ ವಿಶ್ವಕಪ್‌ ಕ್ರಿಕೆಟ್‌ ಗೆದ್ದ ತಂಡದಲ್ಲಿ ದಿಲ್ಲಿವಾಲಾ ಕೊಹ್ಲಿ ಕೂಡ ಇದ್ದರು. ನಮ್ಮ ಬೆಂಗಳೂರು ತಂಡ ಫೈನಲ್‌ ಗೆದ್ದು ಟ್ರೋಫಿ ಎತ್ತಿ ಹಿಡಿಯಲಾಗಲಿಲ್ಲ. ಧೋನಿ ನೇತೃತ್ವದ ಚೆನ್ನೈ ಸೂಪರ್‌ ಕಿಂಗ್ಸ್‌, ಆರ್‌ಸಿಬಿ ಆಸೆಗೆ ತಣ್ಣೀರೆರಚಿತ್ತು. 2016ರಲ್ಲಿ ಮತ್ತೆ ಇದೇ ಟೀಂ ಅಂತಿಮ ಘಟ್ಟ ತಲುಪಿತ್ತು. ಆರ್‌ಸಿಬಿ ಬ್ಯಾಟ್ಸ್‌ಮೆನಗಳು ನಾಲ್ಕು ಸೆಂಚುರಿ ಸಿಡಿಸಿದ್ದರು. ಆ ಸೀಸನ್‌ನಲ್ಲಿ ಅತೀ ಹೆಚ್ಚು ಸ್ಕೋರ್‌ ಮಾಡಿ ಗಮನ ಸೆಳೆದಿದ್ದವು ಮಲ್ಯ ಕುದುರೆಗಳು. ಆದರೆ, ಹೈದರಾಬಾದ್‌ ಸನ್‌ರೈಸರ್ಸ್‌ ತಂಡದ ಸಾಂಘಿಕ ಶಕ್ತಿ ಮುಂದೆ, ಮತ್ತೆ ಕುಂಟು ಕುದುರೆಗಳಾಗಿಬಿಟ್ಟವು. ಆಗಲೂ ಆರ್‌ಸಿಬಿ ಪ್ಲೇಯರ್ಸ್‌ ಅಷ್ಟೇ ಅಲ್ಲ, ಅಭಿಮಾನಿಗಳೂ ಹ್ಯಾಪ್‌ಮೋರೆ ಹಾಕಬೇಕಾಯಿತು.

ನಿರೀಕ್ಷೆ ಹುಸಿಗೊಳಿಸದಿರಲು ಕಪ್ತಾನ್‌ ಕೊಹ್ಲಿ ಪಣ :

ಈಗ ವರ್ಲ್ಡ್‌ಕಪ್‌ ಟೂರ್ನಿಗೆ ವಿಶ್ವದ ಎಲ್ಲ ಕ್ರಿಕೆಟ್‌ ತಂಡಗಳು ರೆಡಿಯಾಗಿವೆ. ಟೀಂ ಇಂಡಿಯಾ ಈ ಸಾರಿ ವಿಶ್ವಕಪ್‌ನಲ್ಲಿ ಫೆವಿರೇಟ್‌ ಆಗಿದ್ರಿಂದ ಭಾರತೀಯರಲ್ಲಿ ನಿರೀಕ್ಷೆ ಬೆಟ್ಟದಷ್ಟಿದೆ. ಈಗ ಕೊಹ್ಲಿಯೇ ಟೀಂ ಇಂಡಿಯಾ ಲೀಡ್‌ ಮಾಡ್ತಿದ್ದಾರೆ. ಇಂಗ್ಲೆಂಡ್‌ನಲ್ಲಿ ನಡೆಯುವ ವಿಶ್ವಕಪ್‌ ಮಹಾಟೂರ್ನಿಗೂ ಮೊದಲೇ ದೇಶದಲ್ಲಿ ಐಪಿಎಲ್‌ ಕ್ರಿಕೆಟ್‌ ಹಂಗಾಮ ಇದೆ. ಈ ಸಾರಿಯಾದರೂ ಐಪಿಲ್‌ನಲ್ಲಿ ಫೈನಲ್‌ ಕಪ್‌ ಗೆದ್ದು ತವರಿನ ಫ್ಯಾನ್ಸ್‌ಗೆಕೊಹ್ಲಿ ಉಡುಗೊರೆ ಕೊಡ್ತಾರಾ ಅನ್ನೋ ಕಾತರವೂ ಇದೆ.

ಫ್ಯಾನ್ಸ್‌ ನಿರೀಕ್ಷೆ ಹುಸಿಗೊಳಿಸದಿರಲು ಆರ್‌ಸಿಬಿ ಕ್ಯಾಪ್ಟನ್‌ ಪಣ ತೊಟ್ಟಂತಿದೆ. ಹಾಗಾಗಿ ಇವತ್ತು ಬೆಂಗಳೂರಿನ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕೊಹ್ಲಿ ಸಖತಾಗಿಯೇ ಬೆವರು ಸುರಿಸಿದ್ದಾರೆ. ಆರ್‌ಸಿಬಿ ಜರ್ಸಿ ತೊಟ್ಟು ತವರು ಗ್ರೌಂಡ್‌ನಲ್ಲಿ ಪ್ರ್ಯಾಕ್ಟೀಸ್‌ ನಡೆಸುತ್ತಿರುವ ಫೋಟೋಗಳನ್ನ ಕೊಹ್ಲಿ ತಮ್ಮ ಟ್ವಿಟರ್‌ ಖಾತೆನಲ್ಲಿ ಶೇರ್ ಮಾಡ್ಕೊಂಡಿದ್ದಾರೆ. ಮತ್ತೊಂದು ಐಪಿಎಲ್‌ ಸೀಸನ್‌ನಲ್ಲಿ ಆರ್‌ಸಿಬಿ ಪರ ಚಿನ್ನಸ್ವಾಮಿ ಮೈದಾನದಲ್ಲಿ ಮತ್ತೆ ವಾಪಸ್‌ ಆಡುತ್ತಿರುವುದು ಗ್ರೇಟ್‌ ಅನುಭವ. ಈ ಕ್ಷಣಕ್ಕಾಗಿ ಕಾತುರತೆಯಿಂದ ಕಾಯುತ್ತಿದ್ದೇನೆ ಅಂತ ಆರ್‌ಸಿಪಿ ಕಪ್ತಾನ್ ವಿರಾಟ್ ಕೊಹ್ಲಿ ಟ್ವೀಟ್ ಮಾಡಿದ್ದಾರೆ.

ದಿಲ್ಲಿವಾಲಾ 2016ರ ಫಾರ್ಮ್‌ ಕಂಟಿನ್ಯೂ ಮಾಡಿದ್ರೇ ಚಾನ್ಸ್‌ :

ಐಪಿಎಲ್‌ನಲ್ಲಿ 163 ಪಂದ್ಯ ಆಡಿರುವ ಕೊಹ್ಲಿ 4948 ರನ್‌ ಮಾಡಿದ್ದಾರೆ. 130.76 ಸ್ಟ್ರೈಕ್‌ರೇಟ್‌ನಲ್ಲಿ 4 ಸೆಂಚುರಿ ಹಾಗೂ 34 ಹಾಫ್‌ ಸೆಂಚುರಿ ಸಿಡಿಸಿದ್ದಾರೆ. ಐಪಿಎಲ್‌ನ ಕಳೆದ 9 ಸೀಸನ್‌ನಲ್ಲಿ ಪ್ರತಿ ಟೂರ್ನಿಯಲ್ಲೂ ಸರಾಸರಿ 300ಕ್ಕಿಂತಲೂ ಹೆಚ್ಚು ರನ್‌ ಗಳಿಸಿದ್ದಾರೆ. 2016ರ ಸೀಸನ್‌ ಒಂದರಲ್ಲೇ 973 ರನ್‌ ಕೊಹ್ಲಿ ಬ್ಯಾಟ್‌ನಿಂದ ಸಿಡಿದಿದ್ದವು. ಅದೇ ಫಾರ್ಮ್‌ ಈ ಸಾರಿಯೂ ಕೊಹ್ಲಿ ಕಂಟಿನ್ಯೂ ಮಾಡಬೇಕೆಂದು ಫ್ಯಾನ್ಸ್‌ ಬಯಸುತ್ತಿದ್ದಾರೆ. ಈ ಸಾರಿಯಂತೂ ಸಿಮ್ರೋನ್‌ ಹೆಟ್‌ಮೈರ್ ಮತ್ತು ಮಾರ್ಕಸ್‌ ಸ್ಟೊಯ್ನಿಸ್ ಆರ್‌ಸಿಬಿ ಪರ ಆಡುತ್ತಿದ್ದಾರೆ. ಹಾಗಾಗಿ ಐಪಿಎಲ್‌ ಫೈನಲ್‌ನಲ್ಲಿ ಕಪ್‌ ಗೆದ್ದು ದಶಕದಿಂದ ಕಾಯುತ್ತಿರುವ ಅಭಿಮಾನಿಗಳಿಗೆ ಉಡುಗೊರೆಯಾಗಿ ಕೊಹ್ಲಿ ಕೊಟ್ಟರೂ ಅಚ್ಚರಿಯೇನಿಲ್ಲ.

Intro:Body:

Virat Kohli hits the ground running with Royal Challengers Bangalore

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.