ಮ್ಯಾಂಚೆಸ್ಟರ್: ಐಸಿಸಿ ಏಕದಿನ ವಿಶ್ವಕಪ್ನ ಮೊದಲ ಸೆಮಿಫೈನಲ್ನಲ್ಲಿ ಭಾರತ-ನ್ಯೂಜಿಲ್ಯಾಂಡ್ ತಂಡ ಸೆಣಸಾಟ ನಡೆಸುತ್ತಿದ್ದು, ಕೊಹ್ಲಿ ಪಡೆ 5 ವಿಕೆಟ್ ಕಳೆದುಕೊಂಡು ತೀವ್ರ ಸಂಕಷ್ಟಕ್ಕೊಳಗಾಗಿದೆ. ಈ ಮಧ್ಯೆ ಅಂಪೈರ್ ತಪ್ಪಿನಿಂದಾಗಿ ಕೊಹ್ಲಿ ವಿಕೆಟ್ ಒಪ್ಪಿಸಿದ್ದು ಅಸಮಾಧಾನಕ್ಕೆ ಕಾರಣವಾಗಿದೆ.
ಆರಂಭದಲ್ಲೇ ರೋಹಿತ್ ಶರ್ಮಾ ವಿಕೆಟ್ ಬೀಳುತ್ತಿದ್ದಂತೆ ಕ್ರೀಸಿಗೆ ಆಗಮಿಸಿದ ಕ್ಯಾಪ್ಟನ್ ವಿರಾಟ್ ಕೊಹ್ಲಿ ಕೂಡ 1ರನ್ಗಳಿಕೆ ಮಾಡಿ ವಿವಾದಿತ ಎಲ್ಬಿ ಬಲೆಗೆ ಸಿಲುಕಿ ಮೈದಾನದಿಂದ ಹೊರನಡೆಯುವಂತಾಯ್ತು.
ನ್ಯೂಜಿಲ್ಯಾಂಡ್ನ ಟ್ರೆಂಟ್ ಬೌಲ್ಟ್ ಬೌಲಿಂಗ್ ಮಾಡುತ್ತಿದ್ದಾಗ ಅವರು ಎಸೆದ ಚೆಂಡು ವಿಕೆಟ್ನ ತುದಿಗೆ ಮಾತ್ರ ಬಡಿದಿತ್ತು. ಈ ವೇಳೆ ಕೆಎಲ್ ರಾಹುಲ್ ಜೊತೆಗೆ ಸಮಾಲೋಚನೆ ನಡೆಸಿದ್ದ ವಿರಾಟ್, ಥರ್ಡ್ ಅಂಪೈರ್ ಡಿಆರ್‌ಎಸ್ ಮೊರೆ ಹೋದರು. ಥರ್ಡ್ ಅಂಪೈರ್ ತೀರ್ಪು ಪರಿಶೀಲನೆ ನಡೆಸಿದಾಗ ಚೆಂಡು ವಿಕೆಟ್ ತುದಿಯಲ್ಲಿ ಬೇಲ್ಸ್‌ಗಷ್ಟೇ ಬಡಿದಿತ್ತು. ಆದರೆ ಆನ್ ಫೀಲ್ಡ್ ಅಂಪೈರ್ ಔಟ್ ನೀಡಿದ್ದರಿಂದ ಅಂಪೈರ್ ಕಾಲ್ ತೀರ್ಪನ್ನು ಕಾಯ್ದುಕೊಳ್ಳಲಾಯಿತು. ಈ ತೀರ್ಪಿಗೆ ವಿರಾಟ್ ಕೊಹ್ಲಿ ಆಕ್ರೋಶ ವ್ಯಕ್ತಪಡಿಸುತ್ತಲೇ ಪೆವಿಲಿಯನ್‌ಗೆ ಹಿಂತಿರುಗಿದರು.
-
Chahal LBW decision given NOT OUT as UMPIRE CALL
— Peter Jole (Punit) (@peter_jole) July 10, 2019 " class="align-text-top noRightClick twitterSection" data="
KOHLI GIVEN OUT
Biased total biased umpires
All umpires call were given NOT OUT against NZ
Against KOHLI umpires giving OUT
So biased
Bumrah given 2 LBW as NOT OUT
Umpires doesn't want India to win
Williamson was OUT to
">Chahal LBW decision given NOT OUT as UMPIRE CALL
— Peter Jole (Punit) (@peter_jole) July 10, 2019
KOHLI GIVEN OUT
Biased total biased umpires
All umpires call were given NOT OUT against NZ
Against KOHLI umpires giving OUT
So biased
Bumrah given 2 LBW as NOT OUT
Umpires doesn't want India to win
Williamson was OUT toChahal LBW decision given NOT OUT as UMPIRE CALL
— Peter Jole (Punit) (@peter_jole) July 10, 2019
KOHLI GIVEN OUT
Biased total biased umpires
All umpires call were given NOT OUT against NZ
Against KOHLI umpires giving OUT
So biased
Bumrah given 2 LBW as NOT OUT
Umpires doesn't want India to win
Williamson was OUT to
ವಿರಾಟ್ ಕೊಹ್ಲಿ ಔಟ್ ಎಂದು ತೀರ್ಪು ನೀಡಿರುವ ಅಂಪೈರ್ ಹಾಗೂ ಡಿಆರ್‌ಎಸ್ ವಿರುದ್ಧ ಕ್ರೀಡಾಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.