ಕ್ರಿಕಟಿಗ ವಿರಾಟ್ ಕೊಹ್ಲಿ ಅಂದ್ರೆ ಅಭಿಮಾನಿಗಳಿಗೆ ಎಲ್ಲಿಲ್ಲದ ಪ್ರೀತಿ, ಅಭಿಮಾನ. ಅವರ ಆಟವನ್ನು ನೋಡಿ ಎಂಜಾಯ್ ಮಾಡುವ ಫ್ಯಾನ್ಸ್, ವಿವಿಧ ರೀತಿಯಲ್ಲಿ ತಮ್ಮ ಅಭಿಮಾನವನ್ನು ತೋರಿಸುತ್ತಾರೆ. ಕೆಲವರು ಕೊಹ್ಲಿ ಚಿತ್ರವಿರುವ ಬಟ್ಟೆಯನ್ನು ಧರಿಸಿ ಅಭಿಮಾನ ವ್ಯಕ್ತ ಪಡಿಸಿದ್ರೆ, ಇನ್ನು ಕೆಲವರು ತಮ್ಮ ಮೈ ಮೇಲೆ ಟ್ಯಾಟೂ ಹಾಕಿಸಿಕೊಂಡಿ ಅಭಿಮಾನ ವ್ಯಕ್ತಪಡಿಸುತ್ತಾರೆ. ಆದ್ರೆ ಇಲ್ಲೊಬ್ಬ ಅಭಿಮಾನಿ ವಿಶೇಷವಾದ ಕೇಶ ವಿನ್ಯಾಸ ಮಾಡಿಕೊಂಡು ಎಲ್ಲರ ಗಮನ ಸೆಳೆದಿದ್ದಾನೆ.
![Virat Kohli Fan Unique Hairstyle](https://etvbharatimages.akamaized.net/etvbharat/prod-images/5725831_thumb.png)
ಹೌದು ಕೊಹ್ಲಿಯ ಕಟ್ಟಾ ಅಭಿಮಾನಿಯಾಗಿರುವ ಚಿರಾಗ್ ಕಿಲಾರೆ ಎಂಬುವವರು ತಮ್ಮ ತಲೆಯಲ್ಲಿ ವಿರಾಟ್ ಕೊಹ್ಲಿ ಚಿತ್ರವಿರುವ ಕೇಶ ವಿನ್ಯಾಸ ಮಾಡಿಕೊಂಡು ಸ್ಟೇಡಿಯಂಗೆ ಎಂಟ್ರಿಕೊಟ್ಟಿದ್ದರು. ಮೊನ್ನೆ ಮಂಗಳವಾರ ನಡೆದ ಆಸ್ಟ್ರೇಲಿಯಾ-ಇಂಡಿಯಾ ಮ್ಯಾಚ್ನಲ್ಲಿ ಚಿರಾಗ್ ಎಲ್ಲರ ಗಮನ ಸೆಳೆದಿದ್ದಾರೆ. ತನ್ನ ತಲೆಯ ಹಿಂಬದಿಯಲ್ಲಿ ಕೊಹ್ಲಿ ಚಿತ್ರವನ್ನು ಬಿಡಿಸಿಕೊಂಡಿದ್ದಾರೆ. ಈ ಕೇಶ ವಿನ್ಯಾಸ ಮಾಡಿಸಲು ಆರು ಗಂಟೆ ಬೇಕಾಯಿತಂತೆ.
![Virat Kohli Fan Unique Hairstyle](https://etvbharatimages.akamaized.net/etvbharat/prod-images/5725831_thumb66.jpg)
ಇನ್ನು ವಿರಾಟ್ ಕೊಹ್ಲಿ ಬಗ್ಗೆ ಮಾತನಾಡಿರುವ ಚಿರಾಗ್, ನಾನು ಕೊಹ್ಲಿಯ ದೊಡ್ಡ ಅಭಿಮಾನಿ. ಜೀವನದಲ್ಲಿ ಒಮ್ಮೆಯಾದ್ರೂ ಕೊಹ್ಲಿಯನ್ನು ನೇರವಾಗಿ ಭೇಟಿ ಮಾಡಬೇಕು. ಅಲ್ಲದೇ ಭೇಟಿ ಮಾಡಿದ ಮೊದಲ ಕ್ಷಣವೇ ಅವರ ಕಾಲಿಗೆ ಬಿದ್ದು ನಮಸ್ಕರಿಸಬೇಕು ಅಂದಿದ್ದಾರೆ.
![Virat Kohli Fan Unique Hairstyle](https://etvbharatimages.akamaized.net/etvbharat/prod-images/5725831_thumb4.png)
ಕೊಹ್ಲಿ ಆಡಿದ ಎಲ್ಲ ಮ್ಯಾಚ್ಗಳನ್ನು ಚಿರಾಗ್ ನೋಡಿದ್ದಾರಂತೆ. ವಿರಾಟ್ ಅಂಡರ್ 19ನಲ್ಲಿ ಕ್ಯಾಪ್ಟನ್ ಆಗಿದ್ದಾಗಿಂದಲೂ ಇವರ ಮ್ಯಾಚ್ಗಳನ್ನು ಚಿರಾಗ್ ನೋಡಿದ್ದಾರಂತೆ.