ಕ್ಯಾನ್ಬೆರಾ (ಆಸ್ಟ್ರೇಲಿಯಾ): ಆಸೀಸ್ ವಿರುದ್ಧದ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೊಸ ದಾಖಲೆ ಬರೆದಿದ್ದಾರೆ. ಅತ್ಯಂತ ವೇಗವಾಗಿ 12 ಸಾವಿರ ಏಕದಿನ ರನ್ ದಾಖಲಿಸಿದ ವಿಶ್ವದ ಮೊದಲ ಆಟಗಾರ ಎಂಬ ಕೀರ್ತಿಗೆ ಅವರು ಭಾಜನರಾದರು. ಈ ಮೂಲಕ ಭಾರತದ ಮಾಜಿ ಆಟಗಾರ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಸಾಧನೆ ಮುರಿದಿದ್ದಾರೆ.
-
1️⃣2️⃣,0️⃣0️⃣0️⃣ ODI runs for Virat Kohli 🔥
— ICC (@ICC) December 2, 2020 " class="align-text-top noRightClick twitterSection" data="
He has become the fastest batsman to reach the milestone, in just 242 innings 🤯 #AUSvIND pic.twitter.com/H0XlHjkdNK
">1️⃣2️⃣,0️⃣0️⃣0️⃣ ODI runs for Virat Kohli 🔥
— ICC (@ICC) December 2, 2020
He has become the fastest batsman to reach the milestone, in just 242 innings 🤯 #AUSvIND pic.twitter.com/H0XlHjkdNK1️⃣2️⃣,0️⃣0️⃣0️⃣ ODI runs for Virat Kohli 🔥
— ICC (@ICC) December 2, 2020
He has become the fastest batsman to reach the milestone, in just 242 innings 🤯 #AUSvIND pic.twitter.com/H0XlHjkdNK
ಇಂದು ತಮ್ಮ 251ನೇ ಏಕದಿನ ಪಂದ್ಯವಾಡುತ್ತಿರುವ ನಾಯಕ ಕೊಹ್ಲಿ ಈ ಸಾಧನೆ ಮಾಡಿದರು. ಅಂತರಾಷ್ಟ್ರೀಯ ಏಕದಿನ ಟೂರ್ನಿಯಲ್ಲಿ ತಾವು ಆಡಿರುವ 251 ಪಂದ್ಯದಲ್ಲಿ 43 ಶತಕ, 59 ಅರ್ಧಶತಕ ಬಾರಿಸಿರುವುದಲ್ಲದೆ, 60 ರನ್ಗಳ ಸರಾಸರಿಯಲ್ಲಿ ಬ್ಯಾಟ್ ಬೀಸಿದ್ದಾರೆ.
ಇದಕ್ಕೂ ಮೊದಲು ಸಚಿನ್ ತೆಂಡೂಲ್ಕರ್ ತಮ್ಮ 309ನೇ ಏಕದಿನ ಪಂದ್ಯದಲ್ಲಿ 12 ಸಾವಿರ ರನ್ ದಾಖಲಿಸಿ ಜಗತ್ತಿನ ಗಮನ ಸೆಳೆದಿದ್ದರು. ಇವರ ಜೊತೆಗೆ ಆಸೀಸ್ನ ಮಾಜಿ ನಾಯಕ ರಿಕ್ಕಿ ಪಾಂಟಿಂಗ್ 323ನೇ ಪಂದ್ಯದಲ್ಲಿ 12 ಸಾವಿರ ರನ್ ಗಡಿ ದಾಟಿದ್ದಾರೆ.
ಇದೀಗ ವಿರಾಟ್ ಕೊಹ್ಲಿ ಕೇವಲ 251ನೇ ಪಂದ್ಯದಲ್ಲಿಯೇ 12 ಸಾವಿರ ರನ್ನುಗಳ ಗಡಿ ದಾಟಿ ಮಿಂಚಿನ ವೇಗದಲ್ಲಿ ರನ್ ಗಳಿಸುತ್ತಿರುವ ಆಟಗಾರ ಎನಿಸಿದ್ದಾರೆ.