ಮೊಹಾಲಿ: ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ದ.ಆಫ್ರಿಕಾ ವಿರುದ್ಧ 72 ರನ್ ಬಾರಿಸುವ ಮೂಲಕ ಟಿ20 ಕ್ರಿಕೆಟ್ನಲ್ಲಿ ಅತಿ ಹೆಚ್ಚು ರನ್ಗಳಿಸಿದ ಬ್ಯಾಟ್ಸ್ಮನ್ ಎಂಬ ದಾಖಲೆಗೆ ಪಾತ್ರರಾದರು.
ಮೊಹಾಲಿ ಪಂದ್ಯಕ್ಕೂ ಮುನ್ನ ಟಿ20 ಕ್ರಿಕೆಟ್ನಲ್ಲಿ ಹಿಟ್ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ 2422 ರನ್ಗಳಿಸಿ ಗರಿಷ್ಠ ಸ್ಕೋರರ್ ಆಗಿದ್ದರು. ರೋಹಿತ್ ಈ ಪಂದ್ಯದಲ್ಲಿ ಕೇವಲ 12 ರನ್ಗಳಿಗೆ ಔಟಾಗುವ ಮೂಲಕ ತಮ್ಮ ಮೊತ್ತವನ್ನ 2434 ಕ್ಕೇರಿಸಿಕೊಂಡಿದ್ದರು.
ರೋಹಿತ್ಗಿಂತ 53 ರನ್ ಹಿಂದಿದ್ದ ಕೊಹ್ಲಿ(2369) ಇಂದಿನ ಪಂದ್ಯದಲ್ಲಿ 72 ರನ್ಗಳಿಸಿ ಟಿ20 ಕ್ರಿಕೆಟ್ನಲ್ಲಿ 2441 ರನ್ಗಳಿಗೆ ಏರಿಸಿಕೊಳ್ಳುವ ಮೂಲಕ ಟಿ20 ಕ್ರಿಕೆಟ್ನಲ್ಲಿ ಹೆಚ್ಚು ರನ್ಗಳಿಸಿರುವ ಬ್ಯಾಟ್ಸ್ಮನ್ ಎನಿಸಿಕೊಂಡರು.
ಟಿ20 ಕ್ರಿಕೆಟ್ನ ಟಾಪ್ 5 ಸ್ಕೋರರ್ಸ್:
- ವಿರಾಟ್ ಕೊಹ್ಲಿ-2441
- ರೋಹಿತ್ ಶರ್ಮಾ-2434
- ಮಾರ್ಟಿನ್ ಗಪ್ಟಿಲ್ (2283)
- ಶೋಯಬ್ ಮಲಿಕ್(2263)
- ಬ್ರೆಂಡನ್ ಮೆಕಲಮ್ (2283)
-
Another record broken!
— ICC (@ICC) September 18, 2019 " class="align-text-top noRightClick twitterSection" data="
Virat Kohli has now scored more runs in men's T20Is than any other cricketer 👏 👏 pic.twitter.com/1fBBGJjyOQ
">Another record broken!
— ICC (@ICC) September 18, 2019
Virat Kohli has now scored more runs in men's T20Is than any other cricketer 👏 👏 pic.twitter.com/1fBBGJjyOQAnother record broken!
— ICC (@ICC) September 18, 2019
Virat Kohli has now scored more runs in men's T20Is than any other cricketer 👏 👏 pic.twitter.com/1fBBGJjyOQ
-
ಅತ್ಯಧಿಕ 50+ ರನ್ ಬಾರಿಸಿದ ಬ್ಯಾಟ್ಸ್ಮನ್
ವಿರಾಟ್ ಕೊಹ್ಲಿ ಟಿ20 ಕ್ರಿಕೆಟ್ನಲ್ಲಿ ತಮ್ಮ 22ನೇ ಅರ್ಧಶತಕ ಪೂರ್ತಿಗೊಳಿಸುವ ಮೂಲಕ ಚುಟುಕು ಕ್ರಿಕೆಟ್ನಲ್ಲಿ ಅತಿ ಹೆಚ್ಚು 50 ಅಥವಾ ಅದಕ್ಕಿಂತಾ ಹೆಚ್ಚು ರನ್ಗಳಿಸಿದ ಬ್ಯಾಟ್ಸ್ಮನ್ ಎನಿಸಿಕೊಂಡರು. ಈ ಮೊದಲು ಕೊಹ್ಲಿ ರೋಹಿತ್(21) ಜೊತೆ ಮೊದಲ ಸ್ಥಾನ ಹಂಚಿಕೊಂಡಿದ್ದರು.
ಟಿ20 ಕ್ರಿಕೆಟ್ನಲ್ಲಿ ಹೆಚ್ಚು 50+ ರನ್ ಬಾರಿಸಿರುವವರು
- ವಿರಾಟ್ ಕೊಹ್ಲಿ -22
- ರೋಹಿತ್ ಶರ್ಮಾ- 21
- ಮಾರ್ಟಿನ್ ಗಪ್ಟಿಲ್ -16
- ಮೆಕ್ಕಲಮ್-ಗೇಲ್- 15
- ದಿಲ್ಶನ್ - 14