ಮುಂಬೈ: ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ 2019ರ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅಧಿಕ ರನ್ ಗಳಿಸಿದ ಬ್ಯಾಟ್ಸ್ಮನ್ ಎಂಬ ದಾಖಲೆಗೆ ಪಾತ್ರರಾಗಿದ್ದಾರೆ.
ವಿರಾಟ್ ಕೊಹ್ಲಿ ಒಟ್ಟು 44 ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳಿಂದ 2,445 ರನ್ ಗಳಿಸಿ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ. ರೋಹಿತ್ ಶರ್ಮಾ 2,442 ರನ್ ಗಳಿಸಿ ಎರಡನೇ ಸ್ಥಾನದಲ್ಲಿದ್ದಾರೆ. ಆದರೆ ವರ್ಷದ ಏಕದಿನ ಕ್ರಿಕೆಟ್ನಲ್ಲಿ ಅಧಿಕ ರನ್ ದಾಖಲೆಯನ್ನು ರೋಹಿತ್ ಉಳಿಸಿಕೊಂಡಿದ್ದಾರೆ. ರೋಹಿತ್ 2019ರಲ್ಲಿ 1490 ರನ್ ಗಳಿಸಿದ್ದರೆ, ಕೊಹ್ಲಿ 1377 ರನ್ಗಳಿಸಿದ್ದಾರೆ.
31 ವರ್ಷದ ವಿರಾಟ್ ಕೊಹ್ಲಿ 2019ರ ಅಂತಾರಾಷ್ಟ್ರೀಯ ಟಿ-20ಯಲ್ಲಿ 466, ಏಕದಿನ ಕ್ರಿಕೆಟ್ನಲ್ಲಿ 1,377 ಹಾಗೂ ಟೆಸ್ಟ್ ಕ್ರಿಕೆಟ್ನಲ್ಲಿ 612 ರನ್ ಗಳಿಸಿದ್ದಾರೆ. ರೋಹಿತ್ ಏಕದಿನ ಕ್ರಿಕೆಟ್ನಲ್ಲಿ 1,490, ಟೆಸ್ಟ್ ಕ್ರಿಕೆಟ್ನಲ್ಲಿ 556 ರನ್ ಹಾಗೂ ಟಿ-20ಯಲ್ಲಿ 396 ರನ್ ಗಳಿಸಿದ್ದಾರೆ.
ಈ ಪಟ್ಟಿಯಲ್ಲಿ ಪಾಕಿಸ್ತಾನದ ಬಾಬರ್ ಅಜಂ 3ನೇ ಸ್ಥಾನದಲ್ಲಿದ್ದು, 2,082 ರನ್ ಗಳಿಸಿದ್ದಾರೆ. ನಂತರದ ಸ್ಥಾನದಲ್ಲಿರುವ ರಾಸ್ ಟೇಲರ್ 1,820, ರೂಟ್ 1,790 ರನ್ ಗಳಿಸಿದ್ದಾರೆ.