ETV Bharat / sports

'ಕೊಹ್ಲಿ-ಬಾಬರ್​ ಅಜಮ್​ ನನಗೆ ಸಚಿನ್​ ತೆಂಡೂಲ್ಕರ್ ಅವರನ್ನು​ ನೆನಪಿಸುತ್ತಿದ್ದಾರೆ'

ಜಿಂಬಾಬ್ವೆ ತಂಡದ ಮಾಜಿ ವೇಗಿ ಪೊಮ್ಮಿ ಎಂಬಾಂಗ್ವಾ ಅವರ ಜತೆ ನಡೆಸಿದ ಇನ್ಸ್ಟಾಗ್ರಾಮ್​ ಸಂವಾದದಲ್ಲಿ ಬಿಷಪ್​, ಈ ಇಬ್ಬರು ವಿಶ್ವದ ಶ್ರೇಷ್ಠ ಬ್ಯಾಟ್ಸ್​ಮನ್​ಗಳ ಬಗ್ಗೆ ಮಾತನಾಡಿದ್ದಾರೆ.

ವಿರಾಟ್​ ಕೊಹ್ಲಿ ಹಾಗೂ ಬಾಬರ್​ ಅಜಮ್
ವಿರಾಟ್​ ಕೊಹ್ಲಿ ಹಾಗೂ ಬಾಬರ್​ ಅಜಮ್
author img

By

Published : Aug 9, 2020, 2:58 PM IST

ನವದೆಹಲಿ​: ಭಾರತ ತಂಡದ ನಾಯಕ ವಿರಾಟ್​ ಕೊಹ್ಲಿ ಹಾಗೂ ಪಾಕಿಸ್ತಾನದ ಯುವ ಬ್ಯಾಟ್ಸ್​ಮನ್​ ಬಾಬರ್​ ಅಜಮ್​ ನನಗೆ ಸಚಿನ್​ ತೆಂಡೂಲ್ಕರ್​ರನ್ನು ನೆನೆಪಿಸುತ್ತಿದ್ದಾರೆ ಎಂದು ವಿಂಡೀಸ್​ ಮಾಜಿ ಬೌಲರ್​ ಇಯಾನ್​ ಬಿಷಪ್ ಹೇಳಿದ್ದಾರೆ.

"ವಿರಾಟ್ ಕೊಹ್ಲಿ, ಬಾಬರ್ ಅಜಮ್, ಸ್ಟ್ರೈಟ್​ಲೈನ್​ನಲ್ಲಿ ಆಡುವುದನ್ನು ಗಮನಿಸಿದರೆ ನನಗೆ ಸಚಿನ್ ತೆಂಡೂಲ್ಕರ್ ನೆನಪಾಗ್ತಾರೆ. ನಾನು ಬೌಲಿಂಗ್​ ಮಾಡಿದ ಅತ್ಯುತ್ತಮ ಬ್ಯಾಟ್ಸ್​ಮನ್​ ಎಂದರೆ ಸಚಿನ್​. ಅವರು ಯಾವಾಗಲೂ ಸ್ಟ್ರೈಟ್​ಲೈನ್​ನಲ್ಲಿಯೇ ಆಡುತ್ತಿದ್ದರು. ಇದೀಗ ಈ ಇಬ್ಬರು ವ್ಯಕ್ತಿಗಳು ಆ ಶೈಲಿಯನ್ನು ಪ್ರಸ್ತುತಪಡಿಸುತ್ತಿದ್ದಾರೆ ಎಂದು ಬಿಷಪ್​ ತಿಳಿಸಿದ್ದಾರೆ.

ಕೊಹ್ಲಿ ಮತ್ತು ಬಾಬರ್​​ರಲ್ಲಿ ಅತ್ಯುತ್ತಮ ಬ್ಯಾಟ್ಸ್​ಮನ್​ ಯಾರು? ಎಂಬುದಕ್ಕೆ ಬಿಷಪ್​, ಪಾಕಿಸ್ತಾನಿ ಬಾಬರ್​ ಉತ್ತಮ ಟಿ20 ಬ್ಯಾಟ್ಸ್​ಮನ್. ಕೊಹ್ಲಿ ಏಕದಿನ ಕ್ರಿಕೆಟ್​ನಲ್ಲಿ ಅತ್ಯುತ್ತಮ ಬ್ಯಾಟ್ಸ್​ಮನ್​ ಎಂದು ಹೇಳಿದರು.

ಬಿಷಪ್ ಭಾರತದ ವೇಗಿ ಬುಮ್ರಾ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. "ಜಸ್ಪ್ರೀತ್ ಬುಮ್ರಾ ಒಂದು ಪೀಳಿಗೆಯ ಪ್ರತಿಭೆ, ಅವರ ಎಲ್ಲಾ ಸ್ವರೂಪಗಳಿಗೆ ಹೊಂದಿಕೊಳ್ಳುವ ಸಾಮರ್ಥ್ಯ ಅದ್ಭುತವಾಗಿದೆ. ಕಗಿಸೊ ರಬಾಡ ಅವರ ಬೌಲಿಂಗ್​ಗೆ ನಾನು ಪ್ರಭಾವಶಾಲಿಯಾಗಿದ್ದೇನೆ. ಪ್ರಸ್ತುತ ನಾನು ನೋಡಿದ ಹಾಗೆ ವೇಗದ ಬೌಲಿಂಗ್ ಮತ್ತೆ ಪ್ರಭಾವಶಾಲಿಯಾಗುತ್ತಿದೆ. ಅದು ನನ್ನನ್ನು ರೋಮಾಂಚನಗೊಳಿಸುತ್ತದೆ "ಎಂದು ಅವರು ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.