ಸಿಡ್ನಿ (ಆಸ್ಟ್ರೇಲಿಯಾ): ಆಸೀಸ್ ವಿರುದ್ಧ ನಡೆಯುತ್ತಿರುವ ದ್ವಿತೀಯ ಏಕದಿನ ಪಂದ್ಯದಲ್ಲಿ ಮೈದಾನಕ್ಕಿಳಿದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ವಿಶೇಷ ದಾಖಲೆ ಬರೆದಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ ದ್ವಿತೀಯ ಏಕದಿನ ಪಂದ್ಯ ವಿರಾಟ್ ಕೊಹ್ಲಿ ಅವರ 250ನೇ ಏಕದಿನ ಪಂದ್ಯವಾಗಿದೆ. ಈ ಮೂಲಕ ಭಾರತದ ಪರ 250 ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳನ್ನಾಡಿದ 9ನೇ ಕ್ರಿಕೆಟಿಗ ಎನಿಸಿಕೊಂಡಿದ್ದಾರೆ.
ಭಾರತದ ಪರವಾಗಿ ಅತ್ಯಂತ ಹೆಚ್ಚು ಏಕದಿನ ಪಂದ್ಯಗಳನ್ನಾಡಿದ ಆಟಗಾರರ ಪೈಕಿ ಸಚಿನ್ ತೆಂಡೂಲ್ಕರ್ ಮೊದಲನೇ ಸ್ಥಾನದಲ್ಲಿದ್ದು, 463 ಪಂದ್ಯಗಳಲ್ಲಿ ಟೀಂ ಇಂಡಿಯಾವನ್ನು ಪ್ರತಿನಿಧಿಸಿದ್ದಾರೆ. ಮಹೇಂದ್ರ ಸಿಂಗ್ ಧೋನಿ ಎರಡನೇ ಸ್ಥಾನದಲ್ಲಿದ್ದು, 347ಪಂದ್ಯಗಳಾಡಿದ್ದಾರೆ. ರಾಹುಲ್ ದ್ರಾವಿಡ್ 340 ಪಂದ್ಯ, ಮೊಹಮ್ಮದ್ ಅಜರುದ್ಧೀನ್ 334 ಪಂದ್ಯ ಮತ್ತು ಸೌರವ್ ಗಂಗೂಲಿ 308 ಪಂದ್ಯಗಳನ್ನು ಆಡಿದ್ದಾರೆ.