ಮುಂಬೈ: ಟೀಮ್ ಇಂಡಿಯಾ ಆಟಗಾರರಾದ ಶ್ರೇಯಸ್ ಅಯ್ಯರ್ರನ್ನು ಮುಂಬೈ ಕ್ರಿಕೆಟ್ ಅಸೋಸಿಯೇಷನ್, ಮುಂದಿನ ವಿಜಯ್ ಹಜಾರೆ ಟ್ರೋಫಿಗೆ ನಾಯಕನನ್ನಾಗಿ ನೇಮಕ ಮಾಡಿದೆ.
ಟೀಮ್ ಇಂಡಿಯಾ ಟೆಸ್ಟ್ ಆಟಗಾರ ಪೃಥ್ವಿ ಶಾ ಉಪನಾಯಕನಾಗಿ ಆಯ್ಕೆಯಾಗಿದ್ದು, ತಂಡದಲ್ಲಿ ಸೂರ್ಯ ಕುಮಾರ್ ಯಾದವ್, ಯಶಸ್ವಿ ಜೈಸ್ವಾಲ್ ಮತ್ತು ತುಷಾರ್ ದೇಶಪಾಂಡೆ ಅವಕಾಶ ಪಡೆದಿದ್ದಾರೆ.
ಸಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಮೆಂಟ್ನಲ್ಲಿ ಮುಂಬೈ ತಂಡ ಸೂರ್ಯಕುಮಾರ್ ಯಾದವ್ ಅವರ ನೇತೃತ್ವದಲ್ಲಿ ಕೇವಲ ಒಂದು ಜಯ ಸಾಧಿಸಿ ನಾಕೌಟ್ ಹಂತಕ್ಕೆ ಪ್ರವೇಶಿಸುವಲ್ಲಿ ವಿಫಲವಾಗಿತ್ತು. ಹಾಗಾಗಿ ವಿಜಯ್ ಹಜಾರೆ ಟೂರ್ನಿಗೂ ಮುನ್ನ 100 ಆಟಗಾರರನ್ನು ತರಬೇತಿ ಶಿಬಿರಕ್ಕೆ ಆಹ್ವಾನಿಸಿ ಇದೀಗ 20 ಆಟಗಾರರ ತಂಡವನ್ನು ಘೋಷಿಸಿದೆ.
2021ರ ಆವೃತ್ತಿಯ ವಿಜಯ್ ಹಜಾರೆ ಟ್ರೋಫಿ ಫೆಬ್ರವರಿ 20ರಂದು ಆರಂಭವಾಗಲಿದೆ. ಎಲ್ಲಾ ತಂಡಗಳು ಫೆ.13ರಂದು ಟೂರ್ನಿ ನಡೆಯುವ ನಗರಗಳಿಗೆ ಬಂದು ಸೇರಬೇಕಿದ್ದು ಕೋವಿಡ್-19 ಟೆಸ್ಟ್ಗೆ ಒಳಗಾಗಬೇಕಿದೆ. ಜೊತೆಗೆ ಆಯಾ ರಾಜ್ಯ ಸರ್ಕಾರಗಳ ನಿಯಮದಂತೆ ಕ್ವಾರಂಟೈನ್ ಮಾಡಬೇಕಿದೆ.
ಟೂರ್ನಿಯ ಕ್ವಾರ್ಟರ್ ಫೈನಲ್ ಪಂದ್ಯಗಳು ಮಾರ್ಚ್ 8 ಮತ್ತು 9ರಂದು ಹಾಗೂ ಸೆಮಿಫೈನಲ್ ಮಾರ್ಚ್ 11 ಹಾಗೂ ಫೈನಲ್ ಮಾರ್ಚ್ 14ರಂದು ನಡೆಯಲಿದೆ.
ವಿಜಯ್ ಹಜಾರೆ ಟ್ರೋಫಿಗಾಗಿ ಮುಂಬೈ ತಂಡ:
ಶ್ರೇಯಸ್ ಅಯ್ಯರ್ (ನಾಯಕ), ಪೃಥ್ವಿ ಶಾ (ಉಪನಾಯಕ), ಸೂರ್ಯಕುಮಾರ್ ಯಾದವ್, ಯಶಸ್ವಿ ಜೈಸ್ವಾಲ್, ಅಖಿಲ್ ಹೆರ್ವಾಡ್ಕರ್, ಸರ್ಫರಾಜ್ ಖಾನ್, ಚಿನ್ಮಯ್ ಸುತಾರ್, ಆದಿತ್ಯ ತಾರೆ, ಹಾರ್ದಿಕ್ ತಮೋರ್, ಶಿವಂ ದುಬೆ, ಆಕಾಶ್ವರ್ ಪಾರ್ಲಿ ಅಂಕೋಲೇಕರ್, ಸೈರಾಜ್ ಪಾಟೀಲ, ಸುಜಿತ್ ನಾಯಕ್, ತನುಷ್ ಕೋಟಿಯನ್, ಪ್ರಶಾಂತ್ ಸೋಲಂಕಿ, ಧವಳ ಕುಲಕರ್ಣಿ, ತುಷಾರ ದೇಶಪಾಂಡೆ, ಸಿದ್ಧಾರ್ಥ ರೌತ್, ಮತ್ತು ಮೋಹಿತ್ ಅವಸ್ಥಿ
ಇದನ್ನು ಓದಿ:ಸೋಲಿಗೆ ನೆಪಗಳನ್ನ ಹುಡುಕದ ಕೊಹ್ಲಿ ನಾಯಕತ್ವವನ್ನ ಪ್ರೀತಿಸುತ್ತೇನೆ - ಯೋಹಾನ್ ಬ್ಲಾಕ್