ಜೈಪುರ: ಶಾರ್ದೂಲ್ ಠಾಕೂರ್ ಮತ್ತು ಸೂರ್ಯಕುಮಾರ್ ಯಾದವ್ ಅವರ ಸ್ಫೋಟಕ ಬ್ಯಾಟಿಂಗ್ ಮತ್ತು ಬೌಲರ್ಗಳ ಅದ್ಭುತ ಪ್ರದರ್ಶನ ನೆರವಿನಿಂದ ಮುಂಬೈ ತಂಡ ವಿಜಯ್ ಹಜಾರೆ ಟ್ರೋಫಿಯಲ್ಲಿ ಹಿಮಾಚಲ ಪ್ರದೇಶದ ವಿರುದ್ಧ 200 ರನ್ಗಳ ಬೃಹತ್ ಜಯ ಸಾಧಿಸಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ.
ಜೈಪುರದಲ್ಲಿ ನಡೆದ ಮೊದಲ ನಾಲ್ಕು ಪಂದ್ಯಗಳಲ್ಲಿ ಮುಂಬೈ ತಂಡ ಡೆಲ್ಲಿ, ಮಹಾರಾಷ್ಟ್ರ, ಪುದುಚೇರಿ ಮತ್ತು ರಾಜಸ್ಥಾನ್ ವಿರುದ್ಧ ಗೆಲುವು ಸಾಧಿಸಿತ್ತು. ಇಂದು ನಾಡೆ ಸವಾಯ್ ಮಾನ್ಸಿಂಗ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಮಾಡಿ 9 ವಿಕೆಟ್ ನಷ್ಟಕ್ಕೆ 321 ರನ್ ಕಲೆಯಾಕಿತ್ತು. ಶಾರ್ದುಲ್ ಠಾಕೂರ್ 82 ರನ್ಗಳಿಸಿದರೆ, ಸೂರ್ಯ ಕುಮಾರ್ ಯಾದವ್ 91 ಮತ್ತು ಆದಿತ್ಯ ತಾರೆ 83 ರನ್ಗಳಿಸಿದ್ದರು.
ಒಂದು ಹಂತದಲ್ಲಿ ಮುಂಬೈ ಕೇವಲ 4 ಓವರ್ಗಳಲ್ಲಿ 8 ರನ್ಗಳಿಗೆ 3 ವಿಕೆಟ್ ಕಳೆದುಕೊಂಡಿತ್ತು. ಆರಂಭಿಕರಾದ ಪೃಥ್ವಿ ಶಾ(2) , ಯಶಸ್ವಿ ಜೈಸ್ವಾಲ್(2) ಮತ್ತು ನಾಯಕ ಶ್ರೇಯಸ್ ಅಯ್ಯರ್(2) ರನ್ಗಳಿಸಿ ವಿಕೆಟ್ ಒಪ್ಪಿಸಿದ್ದರು. ಆದರೆ, ಸೂರ್ಯ ಕುಮಾರ್ ಯಾದವ್ 75 ಎಸೆತಗಳಲ್ಲಿ 15 ಬೌಂಡರಿ ಸಹಿತ 91 ರನ್ಗಳಿಸಿದ್ದಲ್ಲದೆ, ತಾರೆ ಜೊತೆಗೂಡಿ 99 ರನ್ ಜೊತೆಯಾಟ ನೀಡಿದರು. ತಾರೆ 98 ಎಸೆತಗಳಲ್ಲಿ 6 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 83 ರನ್ಗಳಿಸಿದರು. ಯಾದವ್ ಔಟಾಗುತ್ತಿದ್ದಂತೆ ಬ್ಯಾಟಿಂಗ್ ಬಂದ ಶಾರ್ದುಲ್ ಠಾಕೂರ್ ಕೇವಲ 57 ಎಸೆತಗಳಲ್ಲಿ ತಲಾ 6 ಬೌಂಡರಿ ಮತ್ತು ಸಿಕ್ಸರ್ಗಳ ನೆರವಿನಿಂದ 92 ರನ್ಗಳಿಸಿ ತಂಡದ ಮೊತ್ತವನ್ನು ಹೆಚ್ಚಿಸಿದರು.
-
5⃣ matches
— BCCI Domestic (@BCCIdomestic) March 1, 2021 " class="align-text-top noRightClick twitterSection" data="
5⃣ wins
Mumbai continue their winning run as they beat Himachal by 200 runs to pocket 4⃣ points. 👍👍 @Paytm #VijayHazareTrophy #HPvMUM
Scorecard 👉 https://t.co/YdjpEhnJgK pic.twitter.com/cRr20nv9Z5
">5⃣ matches
— BCCI Domestic (@BCCIdomestic) March 1, 2021
5⃣ wins
Mumbai continue their winning run as they beat Himachal by 200 runs to pocket 4⃣ points. 👍👍 @Paytm #VijayHazareTrophy #HPvMUM
Scorecard 👉 https://t.co/YdjpEhnJgK pic.twitter.com/cRr20nv9Z55⃣ matches
— BCCI Domestic (@BCCIdomestic) March 1, 2021
5⃣ wins
Mumbai continue their winning run as they beat Himachal by 200 runs to pocket 4⃣ points. 👍👍 @Paytm #VijayHazareTrophy #HPvMUM
Scorecard 👉 https://t.co/YdjpEhnJgK pic.twitter.com/cRr20nv9Z5
ಹಿ.ಪ್ರದೇಶದ ರಿಷಿ ಧವ್ 84ಕ್ಕೆ 4, ಪಂಕಜ್ ಜೈಸ್ವಾಲ್ 65ಕ್ಕೆ 3 ವಿಕೆಟ್ ಪಡೆದರು. 322 ರನ್ಗಳ ಗುರಿ ಪಡೆದ ಹಿ. ಪ್ರದೇಶ ಕೂಡ ಕೇವಲ 4 ರನ್ಗಳಾಗುಷ್ಟರಲ್ಲಿ 3 ವಿಕೆಟ್ ಕಳೆದುಕೊಂಡಿತು. ಓಪನರ್ಸ್ ರವಿ ಕುಮಾರ್(3), ಪ್ರಶಾಂತ್ ಚೋಪ್ರಾ(1) ಮತ್ತು ನಿಖಿಲ್ ಗಂಗ್ಟ(0) ಕಡಿಮೆ ರನ್ಗಳಿಗೆ ಔಟಾದರು.
ಇವರ ನಂತರ ಬಂದ ಬ್ಯಾಟ್ಸ್ಮನ್ಗಳಾರೂ ಮುಂಬೈ ಬೌಲಿಂಗ್ಗೆ ಎದುರು ನಿಲ್ಲುವ ತಾಕತ್ತು ತೋರದ ಕಾರಣ ಕೇವಲ 121 ರನ್ಗಳಿಗೆ ಆಲೌಟ್ ಆಗಿ 200 ರನ್ಗಳ ಹೀನಾಯ ಸೋಲು ಕಂಡಿತು. 38 ರನ್ಗಳಿಸಿ ಮಯಾಂಕ್ ಡ್ಯಾಗರ್ ತಂಡದ ಗರಿಷ್ಠ ಸ್ಕೋರರ್ ಎನಿಸಿಕೊಂಡರು.
ಮುಂಬೈ ಪರ ದವಳ್ ಕುಲಕರ್ಣಿ 8ಕ್ಕೆ2, ಸೋಲಂಕಿ 31ಕ್ಕೆ 4, ಮುಲಾನಿ 42ಕ್ಕೆ 3 ವಿಕೆಟ್ ಪಡೆದರು.