ETV Bharat / sports

ಹಜಾರೆ ಫೈನಲ್‌ನಲ್ಲಿ ದಿಗ್ಗಜರ ದಂಗಲ್‌: ಪ್ರಶಸ್ತಿಗಾಗಿ ಕರ್ನಾಟಕ,ತಮಿಳುನಾಡು ಪೈಪೋಟಿ - ವಿಜಯ್ ಹಜಾರೆ ಫೈನಲ್​ ಲೇಟೆಸ್ಟ್ ಸುದ್ದಿ

ಲೀಗ್​ ಹಂತದಲ್ಲಿ ಎದುರಾಳಿಗಳ ಮೇಲೆ ಸವಾರಿ ನಡೆಸಿದ್ದ ಮನೀಷ್ ಪಾಂಡೆ ನೇತೃತ್ವದ ಕರ್ನಾಟಕ ತಂಡ ಹಾಗೂ ದಿನೇಶ್ ಕಾರ್ತಿಕ್ ನಾಯಕತ್ವದ ತಮಿಳುನಾಡು ನಿರ್ಣಾಯಕ ಹೋರಾಟ ನಡೆಸಲಿವೆ.

ವಿಜಯ್ ಹಜಾರೆ ಟ್ರೋಫಿ
author img

By

Published : Oct 25, 2019, 9:12 AM IST

ಬೆಂಗಳೂರು: ವಿಜಯ್ ಹಜಾರೆ ಟ್ರೋಫಿ ಕೊನೆಯ ಘಟ್ಟ ತಲುಪಿದ್ದು, ಇಂದು ಬೆಂಗಳೂರಿನ ಚಿನ್ನಸ್ವಾಮಿ ಮೈದಾನಲ್ಲಿ ಪ್ರಶಸ್ತಿ ಸುತ್ತಿನ ಸೆಣಸಾಟ ನಡೆಯಲಿದೆ.

ಲೀಗ್​ ಹಂತದಲ್ಲಿ ಎದುರಾಳಿಗಳ ಮೇಲೆ ಸವಾರಿ ನಡೆಸಿದ್ದ ಮನೀಷ್ ಪಾಂಡೆ ನೇತೃತ್ವದ ಕರ್ನಾಟಕ ತಂಡ ಹಾಗೂ ದಿನೇಶ್ ಕಾರ್ತಿಕ್ ನಾಯಕತ್ವದ ತಮಿಳುನಾಡು ಫೈನಲ್ ಫೈಟ್ ನಡೆಸಲಿವೆ. ಈಗಾಗಲೇ ಟಾಸ್​ ಗೆದ್ದಿರುವ ಕರ್ನಾಟಕ ಫೀಲ್ಡಿಂಗ್ ಆಯ್ದುಕೊಂಡಿದೆ.

  • Karnataka has won the toss and opted to field first against Tamil Nadu in the final of Vijay Hazare Trophy final. #VijayHazareTrophy #KARvTN

    — Karnataka Ranji Team/ ಕರ್ನಾಟಕ ರಣಜಿ ತಂಡ (@RanjiKarnataka) 25 October 2019 " class="align-text-top noRightClick twitterSection" data=" ">

ಪುದುಚೇರಿ ತಂಡವನ್ನು ಸೆಮೀಸ್​ನಲ್ಲಿ ಸೋಲಿಸಿ ಅರ್ಹವಾಗಿಯೇ ಕರ್ನಾಟಕ ತಂಡ ಫೈನಲ್​ಗೆ ಲಗ್ಗೆ ಇಟ್ಟಿತ್ತು. ಅತ್ತ ತಮಿಳುನಾಡು ಮಳೆ ಬಾಧಿತ ಪಂದ್ಯದಲ್ಲಿ ಅದೃಷ್ಟದ ಮೂಲಕ ಗುಜರಾತ್ ಸೋಲಿಸಿ ಉಪಾಂತ್ಯ ಪ್ರವೇಶಿಸಿದೆ. ಎರಡೂ ತಂಡದಲ್ಲಿ ಬಲಿಷ್ಠ ಆಟಗಾರರ ದಂಡೇ ಇದೆ. ಹೀಗಾಗಿ ಅಂತಿಮ ಸುತ್ತಿನ ಸೆಣಸಾಟ ರೋಚಕತೆಯಿಂದ ಕೂಡಿರಲಿದೆ. ಬೆಂಗಳೂರು ಪಿಚ್ ಎಂದಿನಂತೆ ಬ್ಯಾಟ್ಸ್​ಮನ್​ಗಳಿಗೆ ಪೂರಕವಾಗಿಯೇ ಇರಲಿದ್ದು, ರನ್​ ಪ್ರಮಾಣ ಹೆಚ್ಚಿರಲಿದೆ. ಎರಡನೇ ಬ್ಯಾಟಿಂಗ್ ನಡೆಸುವ ತಂಡ ಗೆಲ್ಲುವ ಸಾಧ್ಯತೆ ಹೆಚ್ಚು.

ಹೇಗಿದೆ ನಮ್ಮ ಹುಡುಗ್ರ ತಂಡ?

ಅಂತಾರಾಷ್ಟ್ರೀಯ ಕ್ರಿಕೆಟ್ ಅನುಭವವಿರುವ ಕೆ.ಎಲ್​.ರಾಹುಲ್, ಕರುಣ್ ನಾಯರ್, ಮನೀಷ್ ಪಾಂಡೆ, ಮಯಾಂಕ್ ಅಗರ್ವಾಲ್​​ ಜೊತೆಗೆ ಶ್ರೇಯಸ್ ಗೋಪಾಲ್, ದೇವದತ್​ ಪಡಿಕ್ಕಲ್ ತಂಡಲ್ಲಿದ್ದಾರೆ.

ತಮಿಳುನಾಡಿನ ಬಲ ಏನು?

ತಮಿಳುನಾಡು ತಂಡದಲ್ಲೂ ಅಂತಾರಾಷ್ಟ್ರೀ ಕ್ರಿಕೆಟ್ ಅನುಭವಿರುವ ಆಟಗಾರರಿದ್ದಾರೆ. ನಾಯಕ ದಿನೇಶ್ ಕಾರ್ತಿಕ್, ವಿಜಯ್ ಶಂಕರ್, ಮುರಳಿ ವಿಜಯ್, ಆರ್​.ಅಶ್ವಿನ್, ವಾಷಿಂಗ್ಟನ್ ಸುಂದರ್ ಮಾತ್ರವಲ್ಲದೆ ಬಾಬಾ ಅಪರಾಜಿತ್, ಅಭಿನವ್ ಮುಕುಂದ್, ಮುರುಗನ್ ಅಶ್ವಿನ್ ತಂಡದ ಶಕ್ತಿ.

ಕರ್ನಾಟಕ ತಂಡ ಈವರೆಗೆ ಮೂರು ಬಾರಿ ವಿಜಯ್ ಹಜಾರೆ ಪ್ರಶಸ್ತಿಗೆ ಮುತ್ತಿಕ್ಕಿದ್ದರೆ, ತಮಿಳುನಾಡು ಐದು ಬಾರಿ ಫೈನಲ್ ಗೆದ್ದು ಬೀಗಿದೆ. ಈ ಅಂಕಿಅಂಶ ನೆರೆ ರಾಜ್ಯದ ಪರವಾಗಿದ್ದರೂ ಅತ್ಯುತ್ತಮ ಆಟವೇ ಇಂದಿನ ಹಣಾಹಣಿಯ ವಿಜೇತರು ಯಾರೆಂದು ನಿರ್ಧರಿಸಲಿದೆ. ತ.ನಾಡು ಕೊನೆಯದಾಗಿ 2009-10 ಚಾಂಪಿಯನ್ ಆಗಿ ಹೊರಹೊಮ್ಮಿದ್ದರೆ, ಕರ್ನಾಟಕ 2017-18ರಲ್ಲಿ ಅಂತಿಮ ಸೆಣಸಾಟದಲ್ಲಿ ಗೆದ್ದಿತ್ತು.

ಕರ್ನಾಟಕ ತಂಡದ ಬಲ ಇವರು!

ಕರ್ನಾಟಕ ತಂಡದಲ್ಲಿ ದೇವದತ್ತ ಪಡಿಕ್ಕಲ್(598 ರನ್) ಹಾಗೂ ಕೆ.ಎಲ್​.ರಾಹುಲ್(546 ರನ್​) ಗಳಿಕೆ ಈ ಬಾರಿಯ ವಿಜಯ್ ಹಜಾರೆ ಟ್ರೋಫಿಯ ಹೈಲೈಟ್. ಇವರ ಜೊತೆಯಲ್ಲಿ ನಾಯಕ ಮನೀಷ್ ಪಾಂಡೆ ಸಹ ಉತ್ತಮವಾಗಿ ಬ್ಯಾಟ್ ಬೀಸುತ್ತಿದ್ದಾರೆ.

ತ.ನಾಡು ತಂಡದ ಕಥೆ ಏನು?
ಬಾಬಾ ಅಪರಾಜಿತ್(480 ರನ್) ಹಾಗೂ ಅಭಿನವ್ ಮುಕುಂದ್(440 ರನ್) ಗಳಿಕೆ ಮಾಡಿದ್ದಾರೆ. ಮುರಳಿ ವಿಜಯ್ ಸಹ ಉತ್ತಮ ಫಾರ್ಮ್​ನಲ್ಲಿದ್ದಾರೆ. ನಾಯಕ ದಿನೇಶ್ ಕಾರ್ತಿಕ್ ಟೂರ್ನಿಯುದ್ದಕ್ಕೂ ತಮ್ಮ ಅನುಭವದ ಮೂಲಕ ತಂಡ ಮುನ್ನಡೆಸಿದ್ದು, ಫಿನಿಶರ್ ರೋಲ್ ಉತ್ತಮವಾಗಿ ನಿಭಾಯಿಸಿದ್ದಾರೆ. ಆಲ್​ರೌಂಡರ್ ವಿಜಯ್ ಶಂಕರ್ ಹಾಗೂ ಶಾರುಖ್​ ಖಾನ್ ಮಿಂಚಿನ ಪ್ರದರ್ಶನ ನೀಡಿದ್ದಾರೆ.

ತಂಡಗಳ ಹಿನ್ನೆಲೆ ಹೇಗಿದೆ?
ಕರ್ನಾಟಕ ತಂಡ ಒಟ್ಟಾರೆ 8 ಪಂದ್ಯಗಳಲ್ಲಿ 7 ಗೆದ್ದು 1ರಲ್ಲಿ ಸೋಲನುಭವಿಸಿದೆ. ತ.ನಾಡು 9 ಪಂದ್ಯದಲ್ಲಿ ಎಲ್ಲ 9 ಪಂದ್ಯವನ್ನೂ ಗೆದ್ದು ಅಜೇಯವಾಗಿ ಫೈನಲ್ ಪ್ರವೇಶಿಸಿದೆ.

ಪಂದ್ಯ ವೀಕ್ಷಣೆಗೆ ಉಚಿತ ಪ್ರವೇಶ:
ಬೆಂಗಳೂರಿನ ಚಿನ್ನಸ್ವಾಮಿಯಲ್ಲಿ ನಡೆಯಲಿರುವ ವಿಜಯ್ ಹಜಾರೆ ಟ್ರೋಫಿಯ ಫೈನಲ್​ ಪಂದ್ಯಕ್ಕೆ ಗೇಟ್​ ನಂ.15ರಲ್ಲಿ ಉಚಿತ ಪ್ರವೇಶವಿರಲಿದೆ. ಪಂದ್ಯ ಬೆಳಗ್ಗೆ 9 ಗಂಟೆಗೆ ಆರಂಭವಾಗಲಿದೆ.

  • Vijay Hazare Trophy final between Karnataka and Tamil Nadu will begin in about an hour (9.00 AM) at M. Chinnaswamy Stadium. FREE ENTRY via Gate 15 & LIVE on SS2 & Hotstar. Please come to the stadium & support the game. ದಯವಿಟ್ಟು ಕ್ರೀಡಾಂಗಣಕ್ಕೆ ಬನ್ನಿ ಮತ್ತು ಕರ್ನಾಟಕ ತಂಡವನ್ನು ಬೆಂಬಲಿಸಿ.

ಕರ್ನಾಟಕ ತಂಡ:

ಮನೀಶ್ ಪಾಂಡೆ (ನಾyಕ), ಕೆ.ಎಲ್​. ರಾಹುಲ್ ಕರುಣ್ ನಾಯರ್, ದೇವದತ್ ಪಡಿಕ್ಕಲ್, ಮಯಾಂಕ್ ಅಗರ್ವಾಲ್, ರೋಹನ್ ಕದಮ್, ಪ್ರವೀಣ್ ದುಬೆ, ಕೃಷ್ಣಪ್ಪ ಗೌತಮ್, ವಾಸುಕಿ ಕೃಷ್ಣಸ್ವಾಮಿ ಕೌಶಿಕ್, ಪ್ರತೀಕ್ ಜೈನ್, ಮಿಥುನ್ ಅಭಿಮನ್ಯು

ತಮಿಳುನಾಡು ತಂಡ:

ದಿನೇಶ್ ಕಾರ್ತಿಕ್(ನಾಯಕ), ಅಭಿನವ್ ಮುಕುಂದ್, ಮುರಳಿ ವಿಜಯ್,ಬಾಬಾ ಅಪರಾಜಿತ್,ವಿಜಯ್ ಶಂಕರ್, ವಾಷಿಂಗ್ಟನ್ ಸುಂದರ್, ಶಾರುಖ್ ಖಾನ್, ಆರ್​ ಅಶ್ವಿನ್,ಎಂ.ಮೊಹಮ್ಮದ್, ಟಿ.ನಟರಾಜನ್, ಮುರುಗನ್ ಅಶ್ವಿನ್

Intro:Body:

ಲೀಗ್​ ಹಂತದಲ್ಲಿ ಎದುರಾಳಿಗಳ ಮೇಲೆ ಸವಾರಿ ನಡೆಸಿದ್ದ ಮನೀಷ್ ಪಾಂಡೆ ನೇತೃತ್ವದ ಕರ್ನಾಟಕ ತಂಡ ಹಾಗೂ ದಿನೇಶ್ ಕಾರ್ತಿಕ್ ನಾಯಕತ್ವದ ತಮಿಳುನಾಡು ಫೈನಲ್ ಫೈಟ್ ನಡೆಸಲಿವೆ.

ಪುದುಚೇರಿ ತಂಡವನ್ನು ಸೆಮೀಸ್​ನಲ್ಲಿ ಸೋಲಿಸಿ ಅರ್ಹವಾಗಿಯೇ ಕರ್ನಾಟಕ ತಂಡ ಫೈನಲ್​ಗೆ ಲಗ್ಗೆ ಇಟ್ಟಿತ್ತು. ಅತ್ತ ತಮಿಳುನಾಡು ಮಳೆ ಬಾಧಿತ ಪಂದ್ಯದಲ್ಲಿ ಅದೃಷ್ಟದ ಮೂಲಕ ಗುಜರಾತ್ ಸೋಲಿಸಿ ಉಪಾಂತ್ಯ ಪ್ರವೇಶಿಸಿದೆ. ಎರಡೂ ತಂಡದಲ್ಲಿ ಬಲಿಷ್ಠ ಆಟಗಾರರ ದಂಡೇ ಇದೆ. ಹೀಗಾಗಿ ಅಂತಿಮ ಸುತ್ತಿನ ಸೆಣಸಾಟ ರೋಚಕತೆಯಿಂದ ಕೂಡಿರಲಿದೆ.

ಹೇಗಿದೆ ನಮ್ಮ ಹುಡುಗ್ರ ತಂಡ..?

ಅಂತಾರಾಷ್ಟ್ರೀಯ ಕ್ರಿಕೆಟ್ ಅನುಭವವಿರುವ ಕೆ.ಎಲ್​.ರಾಹುಲ್, ಕರುಣ್ ನಾಯರ್, ಮನೀಷ್ ಪಾಂಡೆ, ಮಯಾಂಕ್ ಅಗರ್ವಾಲ್​​ ಜೊತೆಗೆ ಶ್ರೇಯಸ್ ಗೋಪಾಲ್, ದೇವದತ್​ ಪಡಿಕ್ಕಲ್ ತಂಡಲ್ಲಿದ್ದಾರೆ. 

ತಮಿಳುನಾಡಿನ ಬಲ ಏನು..?

ತಮಿಳುನಾಡು ತಂಡದಲ್ಲೂ ಅಂತಾರಾಷ್ಟ್ರೀ ಕ್ರಿಕೆಟ್ ಅನುಭವಿರುವ ಆಟಗಾರರಿದ್ದಾರೆ. ನಾಯಕ ದಿನೇಶ್ ಕಾರ್ತಿಕ್, ವಿಜಯ್ ಶಂಕರ್, ಮುರಳಿ ವಿಜಯ್, ಆರ್​.ಅಶ್ವಿನ್, ವಾಷಿಂಗ್ಟನ್ ಸುಂದರ್ ಮಾತ್ರವಲ್ಲದೆ ಬಾಬಾ ಅಪರಾಜಿತ್, ಅಭಿನವ್ ಮುಕುಂದ್, ಮುರುಗನ್ ಅಶ್ವಿನ್ ತಂಡ ಶಕ್ತಿ.

ಕರ್ನಾಟಕ ತಂಡ ಈವರೆಗೆ ಮೂರು ಬಾರಿ ವಿಜಯ್ ಹಜಾರೆ ಪ್ರಶಸ್ತಿಗೆ ಮುತ್ತಿಕ್ಕಿದ್ದರೆ, ತಮಿಳುನಾಡು ಐದು ಬಾರಿ ಫೈನಲ್ ಗೆದ್ದು ಬೀಗಿದೆ. ಈ ಅಂಕಿ-ಅಂಶ ನೆರೆರಾಜ್ಯದ ಪರವಾಗಿದ್ದರೂ ಅತ್ಯುತ್ತಮ ಆಟವೇ ಇಂದಿನ ಹಣಾಹಣಿಯ ವಿಜೇತತರು ಯಾರೆಂದು ನಿರ್ಧರಿಸಲಿದೆ. ತ.ನಾಡು ಕೊನೆಯದಾಗಿ 2009-10 ಚಾಂಪಿಯನ್ ಆಗಿ ಹೊರಹೊಮ್ಮಿದ್ದರೆ, ಕರ್ನಾಟಕ 2017-18ರಲ್ಲಿ ಅಂತಿಮ ಸೆಣಸಾಟದಲ್ಲಿ ಗೆದ್ದಿತ್ತು.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.