ಇಂದೋರ್: ಭಾರತದ ಸೀಮಿತ ಓವರ್ಗಳ ತಂಡದ ಕದ ತಟ್ಟುತ್ತಿರುವ ಜಾರ್ಖಂಡ್ ಮತ್ತು ಮುಂಬೈ ಇಂಡಿಯನ್ಸ್ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಇಶಾನ್ ಕಿಶನ್ ಇಂದು ಆರಂಭವಾಗಿರುವ ವಿಜಯ್ ಹಜಾರೆ ಟ್ರೋಫಿಯಲ್ಲಿ ಸ್ಫೋಟಕ ಶತಕ ಸಿಡಿಸಿ ಮಿಂಚಿದ್ದಾರೆ.
ಮಧ್ಯಪ್ರದೇಶದ ವಿರುದ್ಧ ಇಂದೋರ್ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಜಾರ್ಖಂಡ್ ತಂಡದ ನಾಯಕ ಇಶಾನ್ ಕಿಶನ್ ಕೇವಲ 74 ಎಸೆತಗಳಲ್ಲಿ ಶತಕ ಸಿಡಿಸಿದರು. ಒಟ್ಟಾರೆ 94 ಎಸೆತಗಳಲ್ಲಿ 11 ಸಿಕ್ಸರ್ ಹಾಗೂ 19 ಬೌಂಡರಿ ಸಹಿತ 173 ರನ್ ಸಿಡಿಸಿದರು.
-
173 (94) 🤯
— Mumbai Indians (@mipaltan) February 20, 2021 " class="align-text-top noRightClick twitterSection" data="
11 sixes and 19 fours 😯
Jharkhand skipper Ishan Kishan has unleashed himself at the #VijayHazareTrophy 🙌🏻#OneFamily #MumbaiIndians @ishankishan51 pic.twitter.com/NNC4Osqxw6
">173 (94) 🤯
— Mumbai Indians (@mipaltan) February 20, 2021
11 sixes and 19 fours 😯
Jharkhand skipper Ishan Kishan has unleashed himself at the #VijayHazareTrophy 🙌🏻#OneFamily #MumbaiIndians @ishankishan51 pic.twitter.com/NNC4Osqxw6173 (94) 🤯
— Mumbai Indians (@mipaltan) February 20, 2021
11 sixes and 19 fours 😯
Jharkhand skipper Ishan Kishan has unleashed himself at the #VijayHazareTrophy 🙌🏻#OneFamily #MumbaiIndians @ishankishan51 pic.twitter.com/NNC4Osqxw6
ಇನ್ನು ವಿಜಯ್ ಹಜಾರೆ ಟ್ರೋಫಿಯ ಇನ್ನಿಂಗ್ಸ್ವೊಂದರಲ್ಲಿ ಗರಿಷ್ಠ ಸಿಕ್ಸರ್ ಸಿಡಿಸಿದ 3ನೇ ಬ್ಯಾಟ್ಸ್ಮನ್ ಎನಿಸಿಕೊಂಡರು. ಕಳೆದ ಆವೃತ್ತಿಯಲ್ಲಿ ಮುಂಬೈ ತಂಡದ ಯಶಸ್ವಿ ಜೈಸ್ವಾಲ್ 12 ಸಿಕ್ಸರ್ ಸಿಡಿಸಿರುವುದು ಇಲ್ಲಿಯವರೆಗಿನ ದಾಖಲೆಯಾಗಿದೆ. ಇದೀಗ 11 ಸಿಕ್ಸರ್ ಸಿಡಿಸುವ ಮೂಲಕ ಕಿಶನ್ ಕೇರಳದ ವಿಷ್ಣು ವಿನೋದ್ ಜೊತೆ ವಿಜಯ್ ಹಜಾರೆಯಲ್ಲಿ ಗರಿಷ್ಠ ಸಿಕ್ಸರ್ ಸಿಡಿಸಿದ 2ನೇ ಬ್ಯಾಟ್ಸ್ಮನ್ ಎನಿಸಿಕೊಂಡರು.
ಇವರನ್ನು ಹೊರೆತುಪಡಿಸಿದರೆ, ಯೂಸುಫ್ ಪಠಾಣ್(2 ಬಾರಿ), ಎಸ್ ಚಿಟ್ನಿಸ್, ಶ್ರೇಯಸ್ ಅಯ್ಯರ್, ಶಿವಂ ದುಬೆ, ಸಂಜು ಸಾಮ್ಸನ್ ತಲಾ 10 ಸಿಕ್ಸರ್ ಸಿಡಿಸಿದ ದಾಖಲೆ ಹೊಂದಿದ್ದಾರೆ.
ಇದನ್ನು ಓದಿ:ಶ್ರೀಲಂಕಾ ಕ್ರಿಕೆಟ್ ತಂಡದ ಬೌಲಿಂಗ್ ಕೋಚ್ ಆಗಿ ಚಮಿಂದಾ ವಾಸ್