ETV Bharat / sports

ಮುಂಬೈ ವಿರುದ್ಧ ಕರ್ನಾಟಕಕ್ಕೆ 9 ರನ್​ಗಳ ರೋಚಕ ಜಯ: ಅಂಕಪಟ್ಟಿಯಲ್ಲಿ ಅಗ್ರಸ್ಥಾನ - ಮನೀಷ್​ ಪಾಂಡೆ ಸುದ್ದಿ

ವಿಜಯ್​ ಹಜಾರೆ ಟ್ರೋಫಿ ಚಾಂಪಿಯನ್​ ಮುಂಬೈ ತಂಡವನ್ನು 9 ರನ್​ಗಳಿಂದ ಮಣಿಸಿದ ಕರ್ನಾಟಕ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.

Vijay Hazare
author img

By

Published : Oct 10, 2019, 7:41 PM IST

ಬೆಂಗಳೂರು: ಹಾಲಿ ವಿಜಯ ಹಜಾರೆ ಚಾಂಪಿಯನ್​ ಮುಂಬೈ ತಂಡ ಶಿವಂ ದುಬೆಯ ಸ್ಫೋಟಕ ಶತಕದ ಹೊರತಾಗಿಯೂ ಕರ್ನಾಟಕ ತಂಡದ ಮುಂದೆ ಮಂಡಿಯೂರಿದೆ.

ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್​ ಮಾಡಿದ ಕರ್ನಾಟಕ ತಂಡ 50 ಓವರ್​ಗಳಲ್ಲಿ 312 ರನ್​ಗಳಿಸಿತು. ಆರಂಭಿಕರಾಗಿ ಕಣಕ್ಕಿಳಿದ ರಾಹುಲ್​ 58, ದೇವದತ್​ ಪಡಿಕ್ಕಲ್​ 79, ಮನೀಷ್ ಪಾಂಡೆ 62, ರೋಹನ್​ ಕದಂ 32, ಶರತ್​ ಬಿಆರ್​ 28, ಕೆ ಗೌತಮ್ 22, ಹಾಗೂ ಮಿಥುನ್​ 14 ರನ್​ಗಳಿಸಿ 312 ರನ್​ಗಳ ಬೃಹತ್​ ಮೊತ್ತಕ್ಕೆ ಕಾರಣರಾದರು.

313 ರನ್​ಗಳ ಕಠಿಣ ಗುರಿ ಬೆನ್ನತ್ತಿದ ಮುಂಬೈ ತಂಡ 48.1 ಓವರ್​ಗಳಲ್ಲಿ ಆಲೌಟ್ ಆಗುವ ಮೂಲಕ ಕೇವಲ 9 ರನ್​ಗಳಿಂದ ಸೋಲೊಪ್ಪಿಕೊಂಡಿತು.

ಕೇವಲ 58 ಎಸೆತಗಳಲ್ಲಿ ಶತಕ ಪೂರೈಸಿದ ಶಿವ ದುಬೆ 68 ಎಸೆತಗಳಲ್ಲಿ 10 ಸಿಕ್ಸರ್​ ಹಾಗೂ 7 ಬೌಂಡ​ರಿ ನೆರವಿನಿಂದ 118 ರನ್​ಗಳಿಸಿ ಗೆಲುವಿಗಾಗಿ ಏಕಾಂಗಿ ಹೋರಾಟ ನಡೆಸಿ ವಿಫಲರಾದರು. ಪ್ರಮುಖ ಬ್ಯಾಟ್ಸ್​ಮನ್​ಗಳಾದ ಅಯ್ಯರ್​ (11), ಸಿದ್ದಾರ್ಥ್​ ಲಾಡ್​(34), ಆದಿತ್ಯ ತರೆ(32), ಸೂರ್ಯಕುಮಾರ್​ ಯಾದವ್​(26) ರನ್​ ಗಳಿಸಲು ವಿಫಲರಾಗಿದ್ದು ತಂಡದ ಸೋಲಿಗೆ ಕಾರಣವಾಯಿತು.

ಅತ್ಯುತ್ತಮ ಬೌಲಿಂಗ್​ ಪ್ರದರ್ಶನ ತೋರಿದ ಮಿಥುನ್​ 3 ವಿಕೆಟ್, ಕೆ ಗೌತಮ್​3​, ಪ್ರಸಿದ್​ ಕೃಷ್ಣ 2, ರೋನಿತ್​ ಹಾಗೂ ಶ್ರೇಯಸ್​ ಗೋಪಾಲ್​ ತಲಾ ಒಂದು ವಿಕೆಟ್​ ಪಡೆದು ಮಿಂಚಿದರು.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.