ನವದೆಹಲಿ: ಭಾರತದ ಸಂಪೂರ್ಣ ಕ್ರಿಕೆಟ್ ತಂಡ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಅಬ್ಬರಿಸಲು ಕಾಯುತ್ತಿದ್ದರೆ, ಇತ್ತ ಟೆಸ್ಟ್ ತಂಡದ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಹನುಮ ವಿಹಾರಿ ಕೌಂಟಿ ಕ್ರಿಕೆಟ್ ಆಡಲು ಬುಧವಾರ ಇಂಗ್ಲೆಂಡ್ಗೆ ಹಾರಿದ್ದಾರೆ.
ವಿಹಾರಿ ವಾರ್ವಿಕ್ಷೈರ್ ತಂಡದಲ್ಲಿ ಆಡಲಿದ್ದಾರೆ. ದಕ್ಷಿಣ ಆಫ್ರಿಕಾದ ಪೀಟರ್ ಮಲನ್ ವಿಸಾ ಸಮಸ್ಯೆಯಿಂದ ಇಂಗ್ಲೆಂಡ್ಗೆ ತೆರಳಲು ಸಾಧ್ಯವಾಗದಿದ್ದರಿಂದ ವಿದೇಶಿ ಆಟಗಾರನ ಸ್ಥಾನಕ್ಕೆ ವಾರ್ವಿಕ್ಷೈರ್ ಹನುಮ ವಿಹಾರಿಯೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಮೂಲಗಳ ಪ್ರಕಾರ ಭಾರತ ಮತ್ತು ನ್ಯೂಜಿಲ್ಯಾಂಡ್ ನಡುವಿನ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ಗೂ ಮುನ್ನ ವಿಹಾರಿ ಕಡಿಯೆಂದರೂ 3 ಪಂದ್ಯಗಳನ್ನಾಡಲಿದ್ದಾರೆ ಎಂದು ತಿಳಿದು ಬಂದಿದೆ.
ವಿಹಾರಿ ಕೊನೆಯ ಬಾರಿ ಆಸ್ಟ್ರೇಲಿಯಾ ವಿರುದ್ಧದ 3ನೇ ಟೆಸ್ಟ್ನಲ್ಲಿ ಕಾಣಿಸಿಕೊಂಡಿದ್ದರು. ಅಂದು ಭಾರತವನ್ನು ಸೋಲಿನಿಂದ ಪಾರು ಮಾಡಲು ಹ್ಯಾಮ್ಸ್ಟ್ರಿಂಗ್ ನಡುವೆಯೂ ಕೊನೆಯ ದಿನ 161 ಎಸೆತಗಳಲ್ಲಿ 23 ರನ್ ಗಳಿಸಿ ಪಂದ್ಯ ಡ್ರಾ ಆಗಲು ನೆರವಾಗಿದ್ದರು.
2019ರಲ್ಲಿ ವಿಹಾರಿ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡಿದ್ದರು. ನಂತರ 2020ರ ಆವೃತ್ತಿಯಲ್ಲಿ ಒಂದು ಕೋಟಿ ರೂ. ಮೂಲ ಬೆಲೆಯಿದ್ದ ಅವರನ್ನು ಯಾರೂ ಖರೀದಿಸಿರಲಿಲ್ಲ. ಈ ವರ್ಷದ ಹರಾಜಿನಲ್ಲಿ ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ್ ಪೂಜಾರಗೆ ಅವಕಾಶ ಸಿಕ್ಕಿತಾದರೂ ವಿಹಾರಿ ಅನ್ಸೋಲ್ಡ್ ಆಗಿದ್ದಾರೆ.
ಇದನ್ನು ಓದಿ:ಏಕದಿನ ರ‍್ಯಾಂಕಿಂಗ್: ನಾಲ್ಕು ವರ್ಷಗಳ ನಂತರ ಅಗ್ರಪಟ್ಟ ಕಳೆದುಕೊಳ್ಳುವ ಭೀತಿಯಲ್ಲಿ ಕೊಹ್ಲಿ