ETV Bharat / sports

ನಾಲ್ಕು ದಿನಗಳ ಟೆಸ್ಟ್​ ಕ್ರಿಕೆಟ್​ಗೆ ನಮ್ಮ ಬೆಂಬಲವಿಲ್ಲ: ಬಿಸಿಸಿಐ ಸ್ಪಷ್ಟನೆ

author img

By

Published : Jan 14, 2020, 4:42 PM IST

ದುಬೈನಲ್ಲಿ ಮಾರ್ಚ್ ತಿಂಗಳಲ್ಲಿ ನಡೆದ ಐಸಿಸಿ ಸಭೆಯಲ್ಲಿ ಈ ವಿಷಯ ಚರ್ಚೆಗೆ ಬಂದಾಗ ನಾಲ್ಕು ದಿನಗಳ ಟೆಸ್ಟ್ ಪಂದ್ಯದ ಐಸಿಸಿ ಪ್ರಸ್ತಾಪವನ್ನು ಬೆಂಬಲಿಸುವುದಿಲ್ಲ ಎಂದು ಬಿಸಿಸಿಐ ಸ್ಪಷ್ಟಪಡಿಸಿದೆ.

BCCI opposes ICC's proposal for 4-day Tests

ಮುಂಬೈ: ಮಾರ್ಚ್​ ತಿಂಗಳಲ್ಲಿ ನಡೆಯುವ ಐಸಿಸಿ ಸಭೆಯಲ್ಲಿ 4 ದಿನಗಳ ಟೆಸ್ಟ್​ ಪ್ರಸ್ತಾಪವನ್ನು ತಾವು ಬೆಂಬಲಿಸುವುದಿಲ್ಲ ಎಂದು ಬಿಸಿಸಿಐ ಸ್ಪಷ್ಟಪಡಿಸಿದೆ.

ಮುಂಬೈನಲ್ಲಿ ನಡೆದ ಕ್ರಿಕೆಟ್ ಆಸ್ಟ್ರೇಲಿಯಾ, ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ, ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ಮತ್ತು ನ್ಯೂಜಿಲೆಂಡ್ ಕ್ರಿಕೆಟ್‌ ಮಂಡಳಿ ಪ್ರತಿನಿಧಿಗಳೊಂದಿಗೆ ನಡೆದ ಅನೌಪಚಾರಿಕ ಸಭೆಯಲ್ಲಿ ಬಿಸಿಸಿಐ 4 ದಿನಗಳ ಟೆಸ್ಟ್​ ಕ್ರಿಕೆಟ್​ಗೆ ತಮ್ಮ ಬೆಂಬಲವಿಲ್ಲ ಎಂದು ಹೇಳಿದೆ.

ಬಿಸಿಸಿಐ ಅಧ್ಯಕ್ಷ ಸೌರವ್​ ಗಂಗೂಲಿ, ಕಾರ್ಯದರ್ಶಿ ಜಯ್​ ಶಾ ಈ ಸಭೆಯಲ್ಲಿ ಪಾಲ್ಗೊಂಡಿದ್ದರು. ಮಾಧ್ಯಮಗಳ ವರದಿಗಳ ಪ್ರಕಾರ, ಇಸಿಬಿ ಮತ್ತು ಸಿಎ ಪ್ರತಿನಿಧಿಗಳೊಂದಿಗಿನ ಸಭೆಯಲ್ಲಿ ಮಾಜಿ ಐಸಿಸಿ ಮತ್ತು ಬಿಸಿಸಿಐ ಅಧ್ಯಕ್ಷ ಎನ್.ಶ್ರೀನಿವಾಸನ್ ಕೂಡ ಹಾಜರಿದ್ದರು ಎಂದು ತಿಳಿದುಬಂದಿದೆ.

ಕಳೆದ ತಿಂಗಳು ಈ ರೀತಿಯ ಟೆಸ್ಟ್ ಬಗ್ಗೆ​ ಆಲೋಚನೆಯನ್ನು ಕ್ರಿಕೆಟ್​ ಆಸ್ಟ್ರೇಲಿಯಾದ ಮುಖ್ಯ ಕಾರ್ಯನಿರ್ವಾಹಕ ಕೆವಿನ್​ ರಾಬರ್ಟ್ಸ್​ ಐಸಿಸಿ ಮುಂದೆ ತಂದಿದ್ದರು. ಆದರೆ ಇದಕ್ಕೆ ದಕ್ಷಿಣ ಆಫ್ರಿಕಾ ಹಾಗೂ ಇಂಂಗ್ಲೆಂಡ್​ ಕ್ರಿಕೆಟ್​ ಮಂಡಳಿಗಳು ಬೆಂಬಲ ನೀಡಿದ್ದವು. ಆದರೆ ಮಾಜಿ ಕ್ರಿಕೆಟಿಗರಾದ ಮೆಕ್​ಗ್ರಾತ್​, ವಾರ್ನ್​, ಸಚಿನ್​, ಸೆಹ್ವಾಗ್​ ಹಾಗೂ ಭಾರತ ತಂಡದ ಹಾಲಿ ನಾಯಕ ಕೊಹ್ಲಿ ವಿರೋಧ ವ್ಯಕ್ತಪಡಿಸಿದ್ದರು.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.