ETV Bharat / sports

'ಆಸ್ಟ್ರೇಲಿಯಾ-ಭಾರತ ಬಾಕ್ಸಿಂಗ್ ಡೇ ಟೆಸ್ಟ್​ನಲ್ಲಿ ಪ್ರೇಕ್ಷಕರನ್ನು ಕಾಣತ್ತೇವೆಂಬ ವಿಶ್ವಾಸವಿದೆ' - ಮೆಲ್ಬೋರ್ನ್ ಕ್ರಿಕೆಟ್ ಕ್ಲಬ್

ಆಸ್ಟ್ರೇಲಿಯಾದ ವಿಕ್ಟೋರಿಯಾ ರಾಜ್ಯದ ಸರ್ಕಾರದ ಮುಖ್ಯಸ್ಥ ಡೇನಿಯಲ್ ಆ್ಯಂಡ್ರ್ಯೂಸ್, ಈ ಪಂದ್ಯಕ್ಕೆ ಅಭಿಮಾನಿಗಳು ಹಾಜರಾಗಲು ಸಾಧ್ಯವಾಗುತ್ತದೆ ಎಂಬ ವಿಶ್ವಾಸದಲ್ಲಿದ್ದಾರೆ. ಇದಕ್ಕಾಗಿ ಸರ್ಕಾರ ಕೆಲಸ ಮಾಡುತ್ತಿದೆ ಎಂದಿದ್ದಾರೆ..

ಭಾರತ -ಆಸ್ಟ್ರೇಲಿಯಾ
ಭಾರತ -ಆಸ್ಟ್ರೇಲಿಯಾ
author img

By

Published : Oct 27, 2020, 8:22 PM IST

ಮೆಲ್ಬೋರ್ನ್: ಕೋವಿಡ್​ 19 ವ್ಯಾಪಕವಾಗಿರುವ ಹೊರೆತಾಗಿಯೂ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾಕ್ಸಿಂಗ್ ಡೇ ಟೆಸ್ಟ್​ನಲ್ಲಿ ಪ್ರೇಕ್ಷಕರನ್ನು ಸ್ಟೇಡಿಯಂನಲ್ಲಿ ನೋಡಲಿದ್ದೇವೆ ಎಂದು ವಿಕ್ಟೋರಿಯಾ ಸರ್ಕಾರ ವಿಶ್ವಾಸ ವ್ಯಕ್ತಪಡಿಸಿದೆ.

ಕೋವಿಡ್​ 19 ಬಿಕ್ಕಟ್ಟಿನಿಂದ ವಿಕ್ಟೋರಿಯಾದಲ್ಲಿ ಹೇರಲಾಗಿದ್ದ ಲಾಕ್​ಡೌನ್​ ತೆರವಾಗಿದೆ. ಕೋವಿಡ್ ಪ್ರಕರಣಗಳ ಸಂಖ್ಯೆ ಕೂಡ ಕಡಿಮೆಯಾಗುತ್ತಿದ್ದಂತೆ ರಾಜ್ಯದಲ್ಲಿ ಮತ್ತೆ ಕ್ರೀಡಾ ಚಟುವಟಿಕೆಗಳು ಪುನಾರಂಭಗೊಳ್ಳುತ್ತಿವೆ. ಈ ಮಧ್ಯೆ ಡಿಸೆಂಬರ್​ 26ರಂದು ಭಾರತದ ತಂಡ ಆಸೀಸ್​ ವಿರುದ್ಧ ಬಾಕ್ಸಿಂಗ್ ಡೇ ಟೆಸ್ಟ್​ ಆಡಲಿದೆ.

ಆಸ್ಟ್ರೇಲಿಯಾದ ವಿಕ್ಟೋರಿಯಾ ರಾಜ್ಯದ ಸರ್ಕಾರದ ಮುಖ್ಯಸ್ಥ ಡೇನಿಯಲ್ ಆ್ಯಂಡ್ರ್ಯೂಸ್, ಈ ಪಂದ್ಯಕ್ಕೆ ಅಭಿಮಾನಿಗಳು ಹಾಜರಾಗಲು ಸಾಧ್ಯವಾಗುತ್ತದೆ ಎಂಬ ವಿಶ್ವಾಸದಲ್ಲಿದ್ದಾರೆ. ಇದಕ್ಕಾಗಿ ಸರ್ಕಾರ ಕೆಲಸ ಮಾಡುತ್ತಿದೆ ಎಂದಿದ್ದಾರೆ.

ಭಾರತ -ಆಸ್ಟ್ರೇಲಿಯಾ
ಭಾರತ -ಆಸ್ಟ್ರೇಲಿಯಾ

" ಬಾಕ್ಸಿಂಗ್ ಡೇ ಟೆಸ್ಟ್​ ಸಹಜವಾಗಿ ಎಲ್ಲಾ ಪಂದ್ಯಗಳಿಗಿಂತ ವಿಭಿನ್ನವಾಗಿರುತ್ತದೆ. ಅದು ವರ್ಷದ ಕೊನೆಯ ಪಂದ್ಯವಾಗಿರುತ್ತದೆ. ಹಾಗಾಗಿ, ಬಾಕ್ಸಿಂಗ್ ಡೇ ಟೆಸ್ಟ್​ಗಾಗಿ ನಾವು ಎಂಸಿಜಿಯಲ್ಲಿ ಖಂಡಿತ ಜನಸಂದಣಿಯನ್ನು ಪಡೆಯುತ್ತೇವೆ ಎಂಬ ವಿಶ್ವಾಸವಿದೆ" ಎಂದು ಆ್ಯಂಡ್ರೂಸ್​ ಕ್ರಿಕೆಟ್​ ಆಸ್ಟ್ರೇಲಿಯಾದ ವೆಬ್​ಸೈಟ್​ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಈ ಪಂದ್ಯಕ್ಕೆ ಎಷ್ಟು ದೊಡ್ಡ ಮಟ್ಟದ ಪ್ರೇಕ್ಷಕರು ಆಗಮಿಸುತ್ತಾರೋ ಗೊತ್ತಿಲ್ಲ. ಆದರೆ, ಖಂಡಿತ ಪ್ರೇಕ್ಷಕರಿರುತ್ತಾರೆ ಎನ್ನುವುದು ನನ್ನಲ್ಲಿರುವ ನಂಬಿಕೆ, ಅದಕ್ಕಾಗಿ ನಾವು ಕೆಲಸ ಮಾಡುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ. ಭಾರತ ತಂಡ ಆಸ್ಟ್ರೇಲಿಯಾದ ನೆಲದಲ್ಲಿ 3 ಏಕದಿನ, 3 ಟಿ20 ಹಾಗೂ 4 ಟೆಸ್ಟ್​ ಪಂದ್ಯಗಳನ್ನಾಡಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.