ನವದೆಹಲಿ: ಭಾರತ ಕ್ರಿಕೆಟ್ ತಂಡದ ಬ್ಯಾಟಿಂಗ್ ಮಾಂತ್ರಿಕ ರಾಹುಲ್ ದ್ರಾವಿಡ್ ಅವರ ಒಂದು ಜಾಹೀರಾತು ಇಂಟರ್ನೆಟ್ನಲ್ಲಿ ಸಂಚಲನ ಸೃಷ್ಟಿಸಿದೆ. ಇದಕ್ಕೆ ಜನಸಾಮಾನ್ಯರಿಂದ ಹಿಡಿದು ಸ್ಟಾರ್ ನಟ, ಕ್ರಿಕೆಟಿಗರ ತನಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಭಾರತ ತಂಡದ ಮಾಜಿ ವೇಗದ ಬೌಲರ್ ಹಾಗೂ ಕನ್ನಡಿಗ ವೆಂಕಟೇಶ್ ಪ್ರಸಾದ್ ಕೂಡ ಇದಕ್ಕೆ ಪ್ರತಿಕ್ರಿಯೆ ವ್ಯಕ್ತಪಡಿಸಿ, ಟ್ವೀಟ್ ಒಂದನ್ನು ಹಾಕಿದ್ದರು. ಅದಕ್ಕೆ ಪಾಕಿಸ್ತಾನದ ಪತ್ರಕರ್ತ ಕುಚೋದ್ಯವಾಡಿದ್ದ. ಈತನ ಉದ್ಧಟತನದ ಟ್ವೀಟ್ಗೆ ವೆಂಕಟೇಶ್ ಪ್ರಸಾದ್ ಉದಾಹರಣೆ ಸಹಿತ ಉತ್ತರ ನೀಡಿ, ಕೆಣಕಿದ ಪಾಕ್ ಪತ್ರಕರ್ತ ಬಾಯಿ ಮುಚ್ಚುವಂತಾಗಿದೆ.
-
Me to Aamir Sohail in Bangalore at 14.5- #IndiraNagarkaGunda hoon main 😊 pic.twitter.com/uF7xaPeTPl
— Venkatesh Prasad (@venkateshprasad) April 11, 2021 " class="align-text-top noRightClick twitterSection" data="
">Me to Aamir Sohail in Bangalore at 14.5- #IndiraNagarkaGunda hoon main 😊 pic.twitter.com/uF7xaPeTPl
— Venkatesh Prasad (@venkateshprasad) April 11, 2021Me to Aamir Sohail in Bangalore at 14.5- #IndiraNagarkaGunda hoon main 😊 pic.twitter.com/uF7xaPeTPl
— Venkatesh Prasad (@venkateshprasad) April 11, 2021
ಲೆಗ್ ಕಟರ್ ಹಾಗೂ ಆಫ್ ಕಟರ್ಸ್ಗಳನ್ನು ಕರಗತ ಮಾಡಿಕೊಂಡಿದ್ದ ವಿಶ್ವದ ಕೆಲವೇ ಕೆಲವು ಬೌಲರ್ಗಳಲ್ಲಿ ಒಬ್ಬರಾದ ವೆಂಕಟೇಶ್ ಪ್ರಸಾದ್, ಭಾರತ ಕ್ರಿಕೆಟ್ ತಂಡಕ್ಕೆ 1994ರಲ್ಲಿ ಪದಾರ್ಪಣೆ ಮಾಡಿದ್ದರು. 1996ರ ವಿಶ್ವಕಪ್ನಲ್ಲಿ ಭಾರತ ತಂಡ ಸೆಮಿಫೈನಲ್ ಅವರು ಪ್ರವೇಶಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ಅದೇ ಟೂರ್ನಿಯಲ್ಲಿ ಪಾಕಿಸ್ತಾನ ಬ್ಯಾಟ್ಸ್ಮನ್ ಅಮೀರ್ ಸೊಹೈಲ್ ಬೌಂಡರಿ ಬಾರಿಸಿ ವೆಂಕಟೇಶ್ ಪ್ರಸಾದ್ರನ್ನು ಹೀಯಾಳಿಸಿದ್ದರು. ಆದರೆ, ನಂತರದ ಎಸೆತದಲ್ಲಿ ಅವರನ್ನು ಬೌಲ್ಡ್ ಮಾಡುವ ಮೂಲಕ ಸೇಡು ತೀರಿಸಿಕೊಂಡಿದ್ದರು. ಇದು ಕ್ರಿಕೆಟ್ ಇತಿಹಾಸದಲ್ಲೇ ಅತ್ಯುತ್ತಮ ತಿರುಗೇಟು ನೀಡಿದ ಕ್ಷಣವಾಗಿದೆ. ನಿಜಕ್ಕೂ ವೆಂಕಿ ಆ ಬಾಲನ್ನು ಬೆಂಕಿಯಂತೆ ಎಸೆದಿದ್ದರು. ಈ ವಿಡಿಯೋ ಹಂಚಿಕೊಂಡು 'ಇಂದಿರಾ ನಗರ್ಕಾ ಗೂಂಡಾ ಹೂ ಮೇ' ಎಂದು ಹ್ಯಾಶ್ಟ್ಯಾಗ್ ಜೊತೆಗೆ ಹಂಚಿಕೊಂಡಿದ್ದರು.
-
Nahi Najeeb Bhai. Had reserved some achievements for later. In the very next World cup in Eng in 1999 , took 5/27 at Manchester against Pakistan and they were unable to chase 228. God bless you.
— Venkatesh Prasad (@venkateshprasad) April 11, 2021 " class="align-text-top noRightClick twitterSection" data="
">Nahi Najeeb Bhai. Had reserved some achievements for later. In the very next World cup in Eng in 1999 , took 5/27 at Manchester against Pakistan and they were unable to chase 228. God bless you.
— Venkatesh Prasad (@venkateshprasad) April 11, 2021Nahi Najeeb Bhai. Had reserved some achievements for later. In the very next World cup in Eng in 1999 , took 5/27 at Manchester against Pakistan and they were unable to chase 228. God bless you.
— Venkatesh Prasad (@venkateshprasad) April 11, 2021
ಈ ವಿಡಿಯೋಗೆ ಪಾಕ್ ಪತ್ರಕರ್ತ ನಜೀಬ್ ಉಲ್ ಹಸೈನ್ ಎಂಬಾತ, ವೃತ್ತಿ ಜೀವನದಲ್ಲಿ ಇದೊಂದೇ ಸಾಧನೆ ಎಂದು ಕೆಣಕುವ ರೀತಿಯಲ್ಲಿ ರಿಟ್ವೀಟ್ ಮಾಡಿದ್ದರು.
ಇದಕ್ಕೆ ಮುಟ್ಟಿಕೊಳ್ಳುವಂತೆ ಟ್ವೀಟ್ ಮೂಲಕವೇ ಪ್ರತಿಕ್ರಿಯಿಸಿದ ವೆಂಕಿ, ಇಲ್ಲ ನಜೀಬ್ ಅವರೇ, ಇದಾದ ಬಳಿಕವೂ ಕೆಲ ಸಾಧನೆಯನ್ನು ನಾನು ಮಾಡಿದ್ದೇನೆ. ಇದಾದ ಬಳಿಕ ಇಂಗ್ಲೆಂಡ್ನಲ್ಲಿ ನಡೆದ ಮುಂದಿನ 1999ರ ವಿಶ್ವಕಪ್ನಲ್ಲಿ ಪಾಕ್ ವಿರುದ್ಧ ಮ್ಯಾಂಚೆಸ್ಟರ್‌ನಲ್ಲಿ 27 ರನ್ಗಳಿಗೆ 5 ವಿಕೆಟ್ ಪಡೆದಿದ್ದೇನೆ. ಇದರಿಂದಾಗಿ ಭಾರತ ನೀಡಿದ್ದ 228 ರನ್ಗಳ ಗುರಿ ತಲುಪಲು ಪಾಕಿಸ್ತಾನಕ್ಕೆ ಸಾಧ್ಯವಾಗಿಲ್ಲ ಎಂದು ತಿರುಗೇಟು ಕೊಟ್ಟ ಟ್ವೀಟ್ ಸಾಕಷ್ಟು ವೈರಲ್ ಆಗಿದೆ.
-
Happy birthday to one of India's finest fast bowlers, Venkatesh Prasad 🎉
— #CWC11Rewind (@cricketworldcup) August 5, 2020 " class="align-text-top noRightClick twitterSection" data="
How many of you remember his face-off with Aamer Sohail in the 1996 Men's CWC? pic.twitter.com/Xp3yhNbnW2
">Happy birthday to one of India's finest fast bowlers, Venkatesh Prasad 🎉
— #CWC11Rewind (@cricketworldcup) August 5, 2020
How many of you remember his face-off with Aamer Sohail in the 1996 Men's CWC? pic.twitter.com/Xp3yhNbnW2Happy birthday to one of India's finest fast bowlers, Venkatesh Prasad 🎉
— #CWC11Rewind (@cricketworldcup) August 5, 2020
How many of you remember his face-off with Aamer Sohail in the 1996 Men's CWC? pic.twitter.com/Xp3yhNbnW2
ವೆಂಕಟೇಶ್ ಪ್ರಸಾದ್ ಸಾಧನೆ:
ವೆಂಕಿ ಭಾರತದ ಪರ 33 ಟೆಸ್ಟ್ ಹಾಗೂ 161 ಏಕದಿನ ಪಂದ್ಯಗಳನ್ನಾಡಿದ್ದಾರೆ. ಟೆಸ್ಟ್ನಲ್ಲಿ 96 ಹಾಗೂ ಏಕದಿನ ಕ್ರಿಕೆಟ್ನಲ್ಲಿ 196 ವಿಕೆಟ್ ಪಡೆದಿದ್ದಾರೆ.