ನವದೆಹಲಿ: ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿರುವ ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರನ್ನು ಆಸೀಸ್ ತಂಡದ ಮಾಜಿ ವೆಗಿ ಬ್ರೆಟ್ ಲೀ ಅಭಿನಂದಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಬ್ರೆಟ್ ಲೀ, ಧೋನಿ ಅವರ ಮಹೋನ್ನತ ವೃತ್ತಿಜೀವನಕ್ಕೆ ಅಭಿನಂದನೆಗಳು. ನಾವು ಮೈದಾನದಲ್ಲಿ ವೈರಿಗಳಾಗಿದ್ದರೂ ಪರಸ್ಪರ ಗೌರವಿಸುತ್ತೇವೆ ಎಂದಿದ್ದಾರೆ.
-
Congratulations @msdhoni on an outstanding career. We definitely had our battles on the field but upmost respect off it 🙏🏻 pic.twitter.com/XWYpxQ28Rx
— Brett Lee (@BrettLee_58) August 16, 2020 " class="align-text-top noRightClick twitterSection" data="
">Congratulations @msdhoni on an outstanding career. We definitely had our battles on the field but upmost respect off it 🙏🏻 pic.twitter.com/XWYpxQ28Rx
— Brett Lee (@BrettLee_58) August 16, 2020Congratulations @msdhoni on an outstanding career. We definitely had our battles on the field but upmost respect off it 🙏🏻 pic.twitter.com/XWYpxQ28Rx
— Brett Lee (@BrettLee_58) August 16, 2020
ಶನಿವಾರ ಧೋನಿ ತಮ್ಮ ನಿವೃತ್ತಿಯನ್ನು ಇನ್ಸ್ಟಾಗ್ರಾಂನಲ್ಲಿ ಪ್ರಕಟಿಸಿದ್ದರು. ವಿಕೆಟ್ ಕೀಪರ್ - ಬ್ಯಾಟ್ಸ್‌ಮನ್ ಧೋನಿ ಅವರು ವಿಡಿಯೋವನ್ನು ಹಂಚಿಕೊಂಡಿದ್ದರು. ನಿಮ್ಮ ಪ್ರೀತಿ ಮತ್ತು ಬೆಂಬಲಕ್ಕಾಗಿ ತುಂಬಾ ಧನ್ಯವಾದಗಳು. 1929 ಗಂಟೆಯಿಂದ ನನ್ನನ್ನು ನಿವೃತ್ತ ಎಂದು ಪರಿಗಣಿಸಿ. ಔಪಚಾರಿಕ ಪ್ರಕಟಣೆಯ ಪೋಸ್ಟ್ ಅನ್ನು ಓದಿ ಎಂದು ಬರೆದುಕೊಂಡಿದ್ದರು.
2007 ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ಮೊದಲ ಟಿ-20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ಜಯಗಳಿಸಿತ್ತು. ನಂತರ 2011ರ ಐಸಿಸಿ ಏಕದಿನ ವಿಶ್ವಕಪ್ ಟ್ರೋಫಿ ಎತ್ತಿ ಹಿಡಿದಿತ್ತು. 2013 ರಲ್ಲಿ ಇಂಗ್ಲೆಂಡ್‌ನಲ್ಲಿ ಭಾರತ ಐಸಿಸಿ ಚಾಂಪಿಯನ್ಸ್ ಟ್ರೋಫಿಯಯಲ್ಲಿ ಗೆಲುವು ಸಾಧಿಸಿತ್ತು. ಮೂರು ಐಸಿಸಿ ಟ್ರೋಫಿಗಳನ್ನು ಗೆದ್ದ ಏಕೈಕ ನಾಯಕ ಎಂಬ ಹೆಗ್ಗಳಿಕೆಗೆ ಧೋನಿ ಪಾತ್ರರಾಗಿದ್ದರು.