ETV Bharat / sports

ವಿಶ್ವಕಪ್​ 2019: 'ನಂಬರ್​ 1​' ಆಂಗ್ಲರಿಗೆ 'ನಂ10 ಅಫ್ಘಾನಿಸ್ತಾನ' ಸವಾಲ್​... - ನಂ10 ಅಫ್ಘಾನಿಸ್ತಾನ

ವಿಶ್ವಕಪ್​ ಗೆಲ್ಲಲೇಬೇಕೆಂದುಕೊಂಡಿರುವ ಇಂಗ್ಲೆಂಡ್​ ತಂಡಕ್ಕೆ ವಿಶ್ವಕಪ್​ನಲ್ಲಿ ಒಂದು ಪಂದ್ಯವನ್ನಾದರೂ ಗೆಲ್ಲಲೇಬೇಕೆಂದುಕೊಂಡಿರುವ ಅಫ್ಘಾನಿಸ್ತಾನ ತಂಡಗಳು ಇಂದಿನ ಪಂದ್ಯದಲ್ಲಿ ಮುಖಾಮುಖಿಯಾಗುತ್ತಿವೆ.

afg
author img

By

Published : Jun 18, 2019, 12:06 PM IST

Updated : Jun 18, 2019, 12:44 PM IST

ಮ್ಯಾಂಚೆಸ್ಟರ್​: ಏಕದಿನ ಕ್ರಿಕೆಟ್​ನಲ್ಲಿ ನಂಬರ್​ ಒನ್​ ಆಗಿರುವ ಇಂಗ್ಲೆಂಡ್​ ತಂಡಕ್ಕೆ ಶ್ರೇಯಾಂಕದಲ್ಲಿ 10 ನೇ ಸ್ಥಾನದಲ್ಲಿರುವ ಅಫ್ಘಾನಿಸ್ತಾನ ತಂಡ ಇಂದು ವಿಶ್ವಕಪ್​ನ 24 ನೇ ಪಂದ್ಯದಲ್ಲಿ ಸವಾಲೊಡ್ಡಲು ಸಿದ್ದವಾಗಿದೆ.

ವಿಶ್ವಕಪ್​ ಗೆಲ್ಲುವ ನೆಚ್ಚಿನ ತಂಡವಾಗಿರುವ ಇಂಗ್ಲೆಂಡ್​ ತಂಡಕ್ಕೆ ಕ್ರಿಕೆಟ್​ ಶಿಶು ಪ್ರಬಲ ಎದುರಾಳಿಯಾಗದಿದ್ದರೂ, ಸ್ಪಿನ್​ ಸ್ನೇಹಿ ಪಿಚ್​ ಹೊಂದಿರುವ ಒಲ್ಡ್​ ಟ್ರಾಫೋರ್ಡ್​ ಕ್ರೀಡಾಂಗಣದಲ್ಲಿ ಅಫ್ಘಾನಿಸ್ತಾನವನ್ನು ಕಡೆಗಣಿಸುವಂತಿಲ್ಲ. ಏಕದಿನ ಕ್ರಿಕೆಟ್​ ಬೌಲಿಂಗ್​ ಶ್ರೇಯಾಂಕದಲ್ಲಿ 3ನೇ ಸ್ಥಾನದಲ್ಲಿರುವ ರಶೀದ್​ ಖಾನ್​,12 ನೇ ಸ್ಥಾನದಲ್ಲಿ ಮುಜೀಬ್​ ಉರ್​ ರಹಮಾನ್​ ಹಾಗೂ ನಬಿ ಇಂಗ್ಲೆಂಡ್​ ತಂಡವನ್ನು ಕಾಡಲು ತಯಾರಿದ್ದಾರೆ. ಆದರೆ, ವೇಗದ ಬೌಲಿಂಗ್ ತೀರಾ ಕಳಪೆಯಾಗಿರುವುದರಿಂದ ಇಂಗ್ಲೆಂಡ್​ಗೆ ಧನಾತ್ಮಕ ಲಾಭವಾಗಲಿದೆ. ಬ್ಯಾಟಿಂಗ್​ನಲ್ಲಿ ವಿಭಾಗದಲ್ಲಿ ನಜೀಬುಲ್ಲಾ, ನೂರ್​ ಅಲಿ ಜಾಡ್ರನ್​, ಶಾಹಿದಿ​, ರಹಮತ್​ ಶಾ ರಂತಹ ಅನುಭವಿಗಳಿದ್ದಾರೆ.

afghanistan-challenged-to-no-dot-1-england
ಅಫ್ಘಾನಿಸ್ತಾನ vs ಇಂಗ್ಲೆಂಡ್​

ಇಂಗ್ಲೆಂಡ್​ ತಂಡಕ್ಕೆ ಜಾಸನ್​ ರಾಯ್​ ಅಲಭ್ಯತೆ ಹಿನ್ನಡೆಯಾಗಲಿದೆ. ಆದರೆ ಉತ್ತಮ ಫಾರ್ಮ್​ನಲ್ಲಿರುವ ಜೋ ರೂಟ್​, ಬೈರ್ಸ್ಟೋವ್​ ಹಾಗೂ ಸ್ಟೋಕ್ಸ್​ ಉತ್ತಮ ಫಾರ್ಮ್​ನಲ್ಲಿದ್ದರೆ, ಬಟ್ಲರ್​ ತಮ್ಮ ಫಿನಿಶಿಂಗ್​ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸುತ್ತಿರುವುದರಿಂದ ಇಂಗ್ಲೆಂಡ್​ ಬ್ಯಾಟಿಂಗ್​ ವಿಭಾಗದಲ್ಲಿ ಯಾವುದೇ ಸಮಸ್ಯೆ ಇಲ್ಲ. ಬೌಲಿಂಗ್​ ವಿಭಾಗದಲ್ಲಿ ಜೋಫ್ರಾ ಆರ್ಚರ್​, ಮಾರ್ಕ್​ ವುಡ್​, ವೋಕ್ಸ್​ ರಂತಹ ಶ್ರೇಷ್ಠರಿಂದ ಕೂಡಿದ್ದು, ಅಫ್ಘನ್ನರ ವಿರುದ್ಧ ದಾಖಲೆಯ ಜಯಕ್ಕಾಗಿ ಇಂಗ್ಲೆಂಡ್​ ಕಾದು ಕುಳಿತಿದೆ.

2019ರ ವಿಶ್ವಕಪ್​ನಲ್ಲಿ ಸಾಧನೆ:

ಇಂಗ್ಲೆಂಡ್​ 4 ಪಂದ್ಯಗಳನ್ನಾಡಿದ್ದು, 3 ಗೆಲುವು, 1 ಪಂದ್ಯದಲ್ಲಿ ಸೋಲುಕಂಡಿದ್ದು ಅಂಕಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ. ಅಫ್ಘಾನಿಸ್ತಾನ ಆಡಿರುವ 4 ಪಂದ್ಯಗಳಲ್ಲೂ ಸೋಲುಕಂಡಿದ್ದು ಕೊನೆಯ ಸ್ಥಾನದಲ್ಲಿದೆ.

ಮುಖಾಮುಖಿ:

ಎರಡೂ ತಂಡಗಳು 50 ಓವರ್​ಗಳ ಫಾರ್ಮೆಟ್​ನಲ್ಲಿ ಒಮ್ಮೆ ಮಾತ್ರ ಮುಖಾಮುಖಿಯಾಗಿವೆ. 2015ರ ವಿಶ್ವಕಪ್​ ಆವೃತ್ತಿಯಲ್ಲಿ ಇಂಗ್ಲೆಂಡ್​ ಅಫ್ಘಾನಿಸ್ತಾನ ತಂಡವನ್ನು 9 ವಿಕೆಟ್​ಗಳಿಂದ ಮಣಿಸಿತ್ತು.

ಸಂಭಾವ್ಯ ತಂಡಗಳು
ಅಫ್ಘಾನಿಸ್ತಾನ:

ಹಜರತುಲ್ಲಾ ಜಾಝೈ, ನೂರ್ ಅಲಿ ಜಾಡ್ರನ್, ರಹಮತ್​ ಷಾ, ಹಶ್ಮಾತುಲ್ಲಾ ಶಾಹಿದಿ, ಅಸ್ಗರ್ ಅಫ್ಘಾನ್, ಗುಲ್ಬಾದಿನ್ ನ ಯಿಬ್ (ಕ್ಯಾ), ಮೊಹಮ್ಮದ್ ನಬಿ, ಇಕ್ರಮ್ ಅಲಿ ಖಿಲ್ (ವಿ.ಕೀ), ರಶೀದ್ ಖಾನ್, ಅಫ್ತಾಬ್ ಆಲಂ, ಹಮೀದ್ ಹಸನ್

ಇಂಗ್ಲೆಂಡ್​:

ಇಯಾನ್​ ಮಾರ್ಗನ್​(ನಾಯಕ), ಜೇಮ್ಸ್​ ವಿನ್ಸ್​, ಜಾನಿ ಬೈರ್ಸ್ಟೋವ್, ಜೋ ರೂಟ್​, ಬೆನ್​ ಸ್ಟೋಕ್ಸ್​, ಜಾಸ್​ ಬಟ್ಲರ್​, ಕ್ರಿಸ್​ ವೋಕ್ಸ್​, ಲೈಮ್ ಫ್ಲಂಕೇಟ್​, ಜೋಫ್ರಾ ಆರ್ಚರ್, ಆದಿಲ್​ ರಶೀದ್​, ಮಾರ್ಕ್​ ವುಡ್

Intro:Body:Conclusion:
Last Updated : Jun 18, 2019, 12:44 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.