ETV Bharat / sports

ಜೂನಿಯರ್​ ವಿಶ್ವಕಪ್​: ಪಾಕಿಸ್ತಾನ ಸದೆಬಡಿಯಲು ಯಂಗ್​ ಟೈಗರ್ಸ್​ ಸಿದ್ದ... - ಕಿರಿಯರ ವಿಶ್ವಕಪ್​

ಟೂರ್ನಿಯಲ್ಲಿ ಸೋಲನ್ನೇ  ಕಾಣದ ಎರಡು ತಂಡಗಳು ಇದೇ ಮುಖಾಮುಖಿಯಾಗುತ್ತಿವೆ. ಆದರೆ ಭಾರತ ತಂಡ ಶ್ರೀಲಂಕಾ ,ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್​ನಂತಹ ತಂಡಗಳನ್ನು ಸೋಲಿಸಿದ್ದರೆ, ಪಾಕ್ ತಂಡ​ ಜಿಂಬಾಬ್ವೆ, ಅಫ್ಘಾನಿಸ್ತಾನ, ಸ್ಕಾಟ್ಲೆಂಡ್ ತಂಗಳನ್ನು ಮಣಿಸಿ ಸೆಮಿಫೈನಲ್​ ಪ್ರವೇಶಿಸಿದೆ.

Under-19 World Cup 2020
Under-19 World Cup 2020
author img

By

Published : Feb 3, 2020, 7:56 PM IST

ಪೊಚೆಫ್‌ಸ್ಟ್ರೂಮ್: 4 ಬಾರಿಯ ಚಾಂಪಿಯನ್​ ಭಾರತ ತಂಡ ಮಂಗಳವಾರ ನಡೆಯುವ ಸೆಮಿಫೈನಲ್​ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಸೆಣಸಾಡಲಿದೆ.

ಸತತ ಮೂರು ವಿಶ್ವಕಪ್​ಗಳಲ್ಲಿ ಸೆಮಿಫೈನಲ್​ ಪ್ರವೇಶಿಸಿರುವ ಭಾರತ ತಂಡ ಸತತ ಎರಡನೇ ಬಾರಿ ಸೆಮಿಫೈನಲ್​ ಪ್ರವೇಶಿಸಿರುವ ಪಾಕ್​ ತಂಡದ ವಿರುದ್ಧ ಫೈನಲ್​ ಪಂದ್ಯಕ್ಕಾಗಿ ಮಂಗಳವಾರ ಸೆಣಸಾಡಲಿದೆ.

ಟೂರ್ನಿಯಲ್ಲಿ ಸೋಲನ್ನೇ ಕಾಣದ ಎರಡು ತಂಡಗಳು ಇದೇ ಮುಖಾಮುಖಿಯಾಗುತ್ತಿವೆ. ಆದರೆ ಭಾರತ ತಂಡ ಶ್ರೀಲಂಕಾ ,ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್​ನಂತಹ ತಂಡಗಳನ್ನು ಸೋಲಿಸಿದ್ದರೆ, ಪಾಕ್​ ಜಿಂಬಾಬ್ವೆ, ಅಫ್ಘಾನಿಸ್ತಾನ, ಸ್ಕಾಟ್ಲೆಂಡ್ ತಂಗಳನ್ನು ಮಣಿಸಿ ಸೆಮಿಫೈನಲ್​ ಪ್ರವೇಶಿಸಿದೆ.

ಎರಡು ತಂಡಗಳು ಬೌಲಿಂಗ್​ ಘಟಕ ಉತ್ತಮವಾಗಿದೆ. ಆದರೆ ಭಾರತದ ಬ್ಯಾಟಿಂಗ್​ ಮಾತ್ರ ಪಾಕಿಸ್ತಾನಕ್ಕಿಂತ ಬಲಿಷ್ಠವಾಗಿದ್ದು ಸೆಮಿಫೈನಲ್​ನಲ್ಲಿ ಭಾರತವೇ ಗೆಲ್ಲುವ ನೆಚ್ಚಿನ ತಂಡವಾಗಿದೆ.

ವಿಶ್ವಕಪ್​ ಮುಖಾಮುಖಿ:

ಎರಡು ತಂಡಗಳು ವಿಶ್ವಕಪ್​ನಲ್ಲಿ 9 ಬಾರಿ ಮುಖಾಮುಖಿಯಾಗಿದೆ. ಇದರಲ್ಲಿ ಪಾಕಿಸ್ತಾನ 5ಬಾರಿ ಗೆದ್ದಿದ್ದರೆ, ಭಾರತ ತಂಡ 4 ಬಾರಿ ಗೆಲುವಿ ಸಾಧಿಸಿದೆ. ಆದರೆ ಕಳೆದ ಮೂರು ವಿಶ್ವಕಪ್​ಗಳಲ್ಲಿ ಭಾರತ ತಂಡವೇ ಮೇಲುಗೈ ಸಾಧಿಸಿದೆ. 2018ರ ಸೆಮಿಫೈನಲ್​ನಲ್ಲಿ ಪೃಥ್ವಿ ಶಾ ನೇತೃತ್ವದ ಭಾರತ ತಂಡ ಬರೋಬ್ಬರಿ 203 ರನ್​ಗಳಿಂದ ಮಣಿಸಿ ಫೈನಲ್​ ಪ್ರವೃಶಿಸಿತ್ತು. ಈಗಾಗಿ ಈ ಪಂದ್ಯದಲ್ಲೂ ಭಾರತ ತಂಡವೇ ಗೆಲ್ಲುವ ನೆಚ್ಚಿನ ತಂಡ ಎನ್ನಲಾಗುತ್ತಿದೆ.

ಭಾರತ ಅಂಡರ್​ 19 ತಂಡ

ಯಶಸ್ವಿ ಜೈಸ್ವಾಲ್, ದಿವ್ಯಾನ್ಶ್​ ಸಕ್ಸೇನಾ, ತಿಲಕ್ ವರ್ಮಾ, ಪ್ರಿಯಾಮ್ ಗರ್ಗ್ (ನಾಯಕ), ಧ್ರುವ್ ಜುರೇಲ್ (ವಿಕೆಟ್​ ಕೀಪರ್​), ಸಿದ್ಧೇಶ್ ವೀರ್, ಅಥರ್ವ ಅಂಕೋಲೆಕರ್, ರವಿ ಬಿಷ್ಣೋಯ್, ಸುಶಾಂತ್ ಮಿಶ್ರಾ, ಕಾರ್ತಿಕ್ ತ್ಯಾಗಿ, ಆಕಾಶ್ ಸಿಂಗ್, ವಿದ್ಯಾಧರ್ ಪಾಟಿಲ್, ಶುಭಾಂಗ್ ಹೆಗ್ಡೆ, ಶಾಶ್ವತ್ ರಾವತ್, ಕುಮಾರ್ ಕುಶಾಗ್ರ.

ಪಾಕಿಸ್ತಾನ ಅಂಡರ್​ 19 ತಂಡ:

ಹೈದರ್ ಅಲಿ, ಮೊಹಮ್ಮದ್ ಹುರೈರಾ, ರೋಹೈಲ್ ನಜೀರ್ (ವಿಕೆ/ನಾಯಕ), ಫಹಾದ್ ಮುನೀರ್, ಖಾಸಿಮ್ ಅಕ್ರಮ್, ಮೊಹಮ್ಮದ್ ಹ್ಯಾರಿಸ್, ಇರ್ಫಾನ್ ಖಾನ್, ಅಬ್ಬಾಸ್ ಅಫ್ರಿದಿ, ತಾಹಿರ್ ಹುಸೇನ್, ಅಮೀರ್ ಅಲಿ, ಮೊಹಮ್ಮದ್ ಅಮೀರ್ ಖಾನ್, ಮೊಹಮ್ಮದ್ ವಾಸಿಮ್ ಜೂನಿಯರ್, ಅಬ್ದುಲ್ ಬಂಗಲ್ಜೈ, ಮೊಹಮ್ಮದ್ ಶಹಝಾದ್, ಆರಿಶ್ ಅಲಿ ಖಾನ್.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.