ETV Bharat / sports

ಆಂಗ್ಲರ ನಾಡಲ್ಲಿ ದ್ರಾವಿಡ್​ ಶಿಷ್ಯರ ಕರಾಮತ್ತು... ಬಾಂಗ್ಲಾ ಮಣಿಸಿ ಟ್ರೋಫಿ ಗೆದ್ದ ಯಂಗ್​ ಟೈಗರ್ಸ್​ - ಬಾಂಗ್ಲಾದೇಶ- ಭಾರತ

ಬಾಂಗ್ಲಾದೇಶ 19 ತಂಡವನ್ನು 6 ವಿಕೆಟ್​ಗಳಿಂದ ಮಣಿಸಿದ ಭಾರತ ತಂಡ ತ್ರಿಕೋನ ಸರಣಿಯನ್ನು ಎತ್ತಿಹಿಡಿದಿದೆ.

Under-19 tri-series
author img

By

Published : Aug 12, 2019, 9:53 AM IST

ಹೋವ್​: 19ರ ವಯೋಮಿತಿ ಒಳಗಿನ ಭಾರತ, ಇಂಗ್ಲೆಂಡ್​ ಹಾಗೂ ಬಾಂಗ್ಲದೇಶಗಳನ್ನೊಳಗೊಂಡ ತ್ರಿಕೋನ ಸರಣಿಯನ್ನು ಭಾರತ ತಂಡ ಜಯಿಸಿದೆ.

ಭಾನುವಾರ ನಡೆದ ಫೈನಲ್​ ಪಂದ್ಯದಲ್ಲಿ ಭಾರತ ಕಿರಿಯರ ತಂಡ ಬಾಂಗ್ಲಾದೇಶ ತಂಡವನ್ನು 6 ವಿಕೆಟ್​ಗಳಿಂದ ಮಣಿಸುವ ಮೂಲಕ ಟ್ರೋಫಿ ಎತ್ತಿ ಹಿಡಿಯಿತು.

ಮೊದಲು ಬ್ಯಾಟಿಂಗ್​ ನಡೆಸಿದ್ದ ಬಾಂಗ್ಲಾದೇಶ ತಂಡ ಆರಂಭಿಕ ಬ್ಯಾಟ್ಸ್​ಮನ್​ ಪರ್ವೇಜ್​ ಹೊಸೈನ್​ 60 ಹಾಗೂ ಮಹ್ಮದುಲ್​ ಹಸನ್​ ರಾಯ್​ರ 109 ರನ್​ಗಳ ನೆರವಿನಿಂದ 50 ಓವರ್​ಗಳಲ್ಲಿ 261 ರನ್​ ಗಳಿಸಿತ್ತು.

ಭಾರತದ ಉತ್ತಮ ಬೌಲಿಂಗ್​ ದಾಳಿ ನಡೆಸಿದ ಕಾರ್ತಿಕ್​ ತ್ಯಾಗಿ 2, ಸುಶಾಂತ್​ ಮಿಶ್ರಾ 2, ರವಿ ಬಿಷೋನಿ ಹಾಗೂ ಶುಬಾಂಗ್​ ಹೆಗ್ಡೆ ತಲಾ ಒಂದು ವಿಕೆಟ್​ ಪಡೆದಿದ್ದರು.

261 ರನ್​ಗಳ ಟಾರ್ಗೆಟ್​ ಪಡೆದ ಭಾರತ ಯುವ ಪಡೆ 48.4 ಓವರ್​ಗಳಲ್ಲಿ ಗುರಿ ತಲುಪಿತು. ಆರಂಭಿಕ ಬ್ಯಾಟ್ಸ್​ಮನ್​ ಯಶಸ್ವಿ ಜೈಸ್ವಾಲ್​ 50, ದಿವ್ಯಾನ್ಸ್​ ಸಕ್ಷೇನಾ 55, ನಾಯಕ ಪ್ರಿಯಂ ಗರ್ಗ್​ 73, ದ್ರುವ್​ ಜುರೆಲ್​ ಔಟಾಗದೆ 59 ಹಾಗೂ ತಿಲಕ್​ ವರ್ಮಾ ಔಟಾಗದೆ 16 ರನ್​ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.