ETV Bharat / sports

ಸಚಿನ್‌ ತೆಂಡುಲ್ಕರ್‌ ಎಲ್ಲ ದಾಖಲೆಗಳು ಕೊಹ್ಲಿಯಿಂದ ಉಡೀಸ್‌.. 'ಗೌಲ್ಡ್' ಭವಿಷ್ಯ​

author img

By

Published : May 31, 2020, 8:38 PM IST

ನೀವು ವಿರಾಟ್​ ಕಡೆ ನೋಡಿದಾಗ ನಿಮ್ಮ ಆಲೋಚನೆಯಲ್ಲಿ ಅವರೊಬ್ಬ ಮಾಡೆಲ್​ ಎಂಬ ಭಾವನೆ ಮೂಡುತ್ತದೆ. ಅವನಿಗೆ ಆಟದ ಬಗ್ಗೆ, ಇತಿಹಾಸದ ಬಗ್ಗೆ ತಿಳಿದಿದೆ. ಅವನೊಬ್ಬ ಸುಂದರ ವ್ಯಕ್ತಿ ಎಂದು ಕೊಹ್ಲಿಯನ್ನು ಹಾಡಿ ಹೊಗಳಿದ್ದಾರೆ.

ವಿರಾಟ್​ ಕೊಹ್ಲಿ- ಇಯಾನ್​ ಗೌಲ್ಡ್​
ವಿರಾಟ್​ ಕೊಹ್ಲಿ- ಇಯಾನ್​ ಗೌಲ್ಡ್​

ಲಂಡನ್​ : ಇಂಗ್ಲೆಂಡ್​ನ ಅಂತಾರಾಷ್ಟ್ರೀಯ ಖ್ಯಾತಿಯ ಅಂಪೈರ್‌ ಇಯಾನ್‌ ಗೌಲ್ಡ್‌, ಭಾರತ ತಂಡದ ನಾಯಕ ವಿರಾಟ್​ ಕೊಹ್ಲಿ ಫಿಟ್​ನೆಸ್​ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅವರನ್ನು ಮಾಡೆಲ್​ಗೆ ಹೋಲಿಕೆ ಮಾಡಿ ಬಣ್ಣಿಸಿದ್ದಾರೆ.

ವಿರಾಟ್​ ಕೊಹ್ಲಿಗೆ ಉತ್ತಮ ಕ್ರಿಕೆಟ್​ ಮೆದುಳಿದೆ. ಅವರ ಕ್ರೀಡಾ ಸ್ಫೂರ್ತಿಯ ಬಗ್ಗೆ ಗಂಟೆಗಟ್ಟಲೇ ಮಾತನಾಡಬಹುದು ಎಂದು ಗೌಲ್ಡ್​ ಅಭಿಪ್ರಾಯಪಟ್ಟಿದ್ದಾರೆ. ಅವರೊಬ್ಬ ತಮಾಷೆಯ ಮನುಷ್ಯ, ಅವರು ಒಂದೆರೆಡು ಬಾರಿ ನನ್ನಂತೆಯೇ ಬ್ಯಾಟಿಂಗ್​ ಮಾಡಿದ್ದಾರೆ. ಅವರೊಬ್ಬ ಮೋಹಕ ಬ್ಯಾಟ್ಸ್​ಮನ್​. ಸಚಿನ್ ತೆಂಡೂಲ್ಕರ್​ ಅವರಂತೆಯೇ ಕೊಹ್ಲಿ ಕೂಡ. ಇಡೀ ಭಾರತ ಅವರ ಬೆನ್ನ ಹಿಂದೆ ಇದೆ ಎಂದು ಗೌಲ್ಡ್​ ವೆಬ್​ಸೈಟ್‌ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ವಿರಾಟ್​ ಕೊಹ್ಲಿ- ಇಯಾನ್​ ಗೌಲ್ಡ್​
ವಿರಾಟ್​ ಕೊಹ್ಲಿ- ಇಯಾನ್​ ಗೌಲ್ಡ್​

ನೀವು ರೆಸ್ಟೋರೆಂಟ್​ನಲ್ಲಿ ಅವರೊಂದಿಗೆ ಗಂಟೆಗಟ್ಟಲೇ ಮಾತನಾಡಬಹುದು. ಅವರೊಬ್ಬ ತುಂಬಾ ಲೌಕಿಕ ಹುಡುಗ. ನೀವು ವಿರಾಟ್​ ಕಡೆ ನೋಡಿದಾಗ ನಿಮ್ಮ ಆಲೋಚನೆಯಲ್ಲಿ ಅವರೊಬ್ಬ ಮಾಡೆಲ್​ ಎಂಬ ಭಾವನೆ ಮೂಡುತ್ತದೆ. ಅವನಿಗೆ ಆಟದ ಬಗ್ಗೆ, ಇತಿಹಾಸದ ಬಗ್ಗೆ ತಿಳಿದಿದೆ. ಅವನೊಬ್ಬ ಸುಂದರ ವ್ಯಕ್ತಿ ಎಂದು ಕೊಹ್ಲಿಯನ್ನು ಹಾಡಿ ಹೊಗಳಿದ್ದಾರೆ.

ವಿರಾಟ್​ ಕೊಹ್ಲಿಯನ್ನು ಸಚಿನ್​ಗೆ ಹೋಲಿಕೆ ಮಾಡಿರುವ ಮಾಜಿ ಇಂಗ್ಲೆಂಡ್​ ಕ್ರಿಕೆಟಿಗರೂ ಆಗಿರುವ ಇಯಾನ್ ಗೌಲ್ಡ್, ಭವಿಷ್ಯದಲ್ಲಿ ಕೊಹ್ಲಿ ಸಚಿನ್ ಅವರ​ ಎಲ್ಲಾ ದಾಖಲೆಗಳನ್ನೂ ಮುರಿಯಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.