ETV Bharat / sports

ಉಮರ್ ಅಕ್ಮಲ್​ ನಿಷೇಧದ ಅವಧಿ 3 ವರ್ಷದಿಂದ 18 ತಿಂಗಳಿಗೆ ಇಳಿಕೆ - Umar Akmal failing to report corrupt approaches

'ನನಗೂ ಮುಂಚೆ ಅನೇಕ ಕ್ರಿಕೆಟಿಗರು ಭ್ರಷ್ಟಾಚಾರದಲ್ಲಿ ಪಾಲ್ಗೊಂಡಿದ್ದವರಿಗೆ, ನನ್ನಷ್ಟು ಶಿಕ್ಷೆಯನ್ನು ನೀಡಲಾಗಿಲ್ಲ. ಹಾಗಾಗಿ ನನ್ನ ಶಿಕ್ಷೆಯನ್ನು ಕಡಿಮೆ ಮಾಡಲು ಮತ್ತೊಮ್ಮೆ ಮನವಿ ಸಲ್ಲಿಸುತ್ತೇನೆಂದು' ಅಕ್ಮಲ್​ ತಿಳಿಸಿದ್ದಾರೆ..

ಉಮರ್ ಅಕ್ಮಲ್​ ನಿಷೇಧ
ಉಮರ್ ಅಕ್ಮಲ್​ ನಿಷೇಧ
author img

By

Published : Jul 29, 2020, 5:22 PM IST

ಕರಾಚಿ : ಪಿಸಿಬಿ ಉಮರ್​ ಅಕ್ಮಲ್​ ಮೇಲೆ ಏರಿದ್ದ 3 ವರ್ಷದ ಶಿಕ್ಷೆ 18 ತಿಂಗಳಿಗೆ ಇಳಿಕೆಯಾಗಿದೆ. ಈ ವರ್ಷದ ಆರಂಭದಲ್ಲಿ ಬುಕ್ಕಿಗಳಿಂದ ಭ್ರಷ್ಟಾಚಾರದ ಒತ್ತಡ ಬಂದಿದ್ದರೂ ಅದನ್ನು ವರದಿ ಮಾಡಲು ವಿಫಲವಾಗಿದ್ದಕ್ಕೆ ಉಮರ್ ಅಕ್ಮಲ್ ಅವರ ಮೂರು ವರ್ಷಗಳ ಎಲ್ಲಾ ಮಾದರಿಯ ಕ್ರಿಕೆಟ್​ನಿಂದ ನಿಷೇಧಿಸಲಾಗಿತ್ತು.

ಇಂದು ವಿಚಾರಣೆ ನಡಿಸಿದ ಇಂಡಿಪೆಂಡೆಂಟ್​ ಅಡ್ಜುಡಿಕೇಟರ್​ ಫಕೀರ್​ ಮೊಹಮ್ಮದ್​ ಖೋಖರ್​ ಉಮರ್​ ಅಕ್ಮಲ್​ ಮೇಲಿನ ನಿಷೇಧದ ಶಿಕ್ಷೆಯನ್ನು 3ರಿಂದ ಒಂದೂವರೆ ವರ್ಷಕ್ಕೆ ಕಡಿತಗೊಳಿಸಿದ್ದಾರೆ. ಅವರ ಪ್ರಸ್ತುತ ನಿಷೇಧದ ಅವಧಿ ಫೆಬ್ರವರಿ 2020ರಿಂದ ಅಗಸ್ಟ್​ 2011ರವರೆಗಿರಲಿದೆ. ಆದರೆ, ನಿಷೇಧದ ಅವಧಿಯನ್ನು ಇನ್ನೂ ಕಡಿತಗೊಳಿಸುವಂತೆ ಕೋರಿ ಈ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುವುದಾಗಿ 30 ವರ್ಷದ ವಿಕೆಟ್ ಕೀಪರ್​ ಬ್ಯಾಟ್ಸ್​ಮನ್ ತಿಳಿಸಿದ್ದಾರೆ.

'ನನಗೂ ಮುಂಚೆ ಅನೇಕ ಕ್ರಿಕೆಟಿಗರು ಭ್ರಷ್ಟಾಚಾರದಲ್ಲಿ ಪಾಲ್ಗೊಂಡಿದ್ದವರಿಗೆ, ನನ್ನಷ್ಟು ಶಿಕ್ಷೆಯನ್ನು ನೀಡಲಾಗಿಲ್ಲ. ಹಾಗಾಗಿ ನನ್ನ ಶಿಕ್ಷೆಯನ್ನು ಕಡಿಮೆ ಮಾಡಲು ಮತ್ತೊಮ್ಮೆ ಮನವಿ ಸಲ್ಲಿಸುತ್ತೇನೆಂದು' ಅಕ್ಮಲ್​ ತಿಳಿಸಿದ್ದಾರೆ.

ಉಮರ್​ ಅಕ್ಮಲ್​ ಕೊನೆಯ ಬಾರಿಗೆ 2009ರಲ್ಲಿ ಪಾಕಿಸ್ತಾನದ ಪರ ಕೊನೆಯ ಟೆಸ್ಟ್​ ಆಡಿದ್ದರು. ಇತ್ತೀಚೆಗೆ ತವರಿನಲ್ಲಿ ಶ್ರೀಲಂಕಾ ವಿರುದ್ಧದ ಟಿ20 ಸರಣಿಯೇ ಅವರ ಕೊನೆಯ ಅಂತಾರಾಷ್ಟ್ರೀಯ ಪಂದ್ಯವಾಗಿದೆ. 2020ರ ಪಿಎಎಸ್​ಎಲ್ ಟಿ20 ಟೂರ್ನಾಮೆಂಟ್ ಆರಂಭಗೊಳ್ಳುವ ಕೇವಲ ಒಂದು ಗಂಟೆ ಇರುವಾಗ ಅವರನ್ನು ಪಿಸಿಬಿ ಫಿಕ್ಸಿಂಗ್​ ಮಾಡಲು ಬಂದಿದ್ದ ಒತ್ತಡದ ವಿಚಾರವನ್ನು ಮುಚ್ಚಿಟ್ಟಿದ್ದ ಆರೋಪದ ಮೇಲೆ ಅವರನ್ನು 3 ವರ್ಷಗಳ ಕಾಲ ಎಲ್ಲಾ ಮಾದರಿಯ ಕ್ರಿಕೆಟ್​ನಿಂದ ನಿಷೇಧ ಹೇರಿತ್ತು.​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.