ನವದೆಹಲಿ: ಇತ್ತೀಚೆಗಷ್ಟೇ ಪಿಸಿಬಿಯಿಂದ 3 ವರ್ಷ ನಿಷೇಧಕ್ಕೊಳಗಾಗಿದ್ದ ಉಮರ್ ಅಕ್ಮಲ್ಗೆ ಅವರ ಸಹೋದರ ಮೈದಾನ ಒಳಗಾಗಲಿ ಅಥವಾ ಹೊರಗಾಗಲಿ ಭಾರತದ ಸಚಿನ್ ಹಾಗೂ ಕೊಹ್ಲಿ ನೋಡಿ ಕಲಿಯುವಂತೆ ಕಿವಿಮಾತು ಹೇಳಿದ್ದಾರೆ.
2020ರ ಪಿಎಸ್ಎಲ್ ಲೀಗ್ಗಿಂತ ಮೊದಲು ಬುಕ್ಕಿಗಳು ಮ್ಯಾಚ್ ಫಿಕ್ಸಿಂಗ್ ಮಾಡಲು ಉಮರ್ ಅಕ್ಮಲ್ಗೆ ಆಫರ್ ನೀಡಿದ್ದರು. ಆದರೆ ಬುಕ್ಕಿಗಳು ಸಂಪರ್ಕಿಸಿದ್ದ ವಿಚಾರವನ್ನು ಅಕ್ಮಲ್ ಗೌಪ್ಯವಾಗಿಟ್ಟಿದ್ದಕ್ಕೆ ಪಿಸಿಬಿ ಅವರ ಮೇಲೆ 3 ವರ್ಷಗಳ ಕಾಲ ಕ್ರಿಕೆಟ್ನಿಂದ ನಿಷೇಧವೇರಿತ್ತು.
"ಉಮರ್ ಕಲಿಯುವುದು ಬಹಳಷ್ಟಿದೆ. ಆತ ಇನ್ನು ಯುವ ಆಟಗಾರ, ಬೇರೆಯವರಿಂದ ಕಲಿಯಬೇಕಿದೆ. ಜೀವನದಲ್ಲಿ ಬಹಳಷ್ಟು ಅಡಚಣೆಗಳು ಬರುತ್ತದೆ, ಇವು ಆತನ ಏಕಾಗ್ರತೆಗೆ ಭಂಗ ತರುತ್ತದೆ" ಎಂದು ಕೌ ಕಾರ್ನರ್ ಕ್ರಾನಿಕಲ್ಸ್ ಚಾಟ್ ಶೋನಲ್ಲಿ ಹೇಳಿದ್ದಾರೆ.
ಭಾರತದ ವಿರಾಟ್ ಕೊಹ್ಲಿಯಂತಹ ಯಶಸ್ವಿ ಆಟಗಾರನನ್ನು ನೋಡಿ ಉಮರ್ ಕಲಿಯಬೇಕಿದೆ. ವಿರಾಟ್ ಆರಂಭದ ದಿನಗಳಲ್ಲಿ ವಿಭಿನ್ನವಾಗಿದ್ದರು. ನಂತರ ಅವರು ತಮ್ಮ ವರ್ತನೆಯನ್ನು ಬದಲಾಯಿಸಿಕೊಂಡರು. ಇದೀಗ ವಿಶ್ವದ ನಂಬರ್ ಒನ್ ಆಟಗಾರನಾಗಿದ್ದಾರೆ ಎಂದು ಕಮ್ರನ್ ಹೇಳಿದ್ದಾರೆ.
ಇದೇ ವೇಳೆ ಭಾರತದ ಲೆಜೆಂಡ್ಗಳಾದ ಧೋನಿ ಹಾಗೂ ಸಚಿನ್ರಂತೆ ವೃತ್ತಿ ಜೀವನದಲ್ಲಿ ವಿವಾದದಿಂದ ದೂರವಿದ್ದರು. ಇನ್ನು ಪಾಕ್ನ ಬಾಬರ್ ಅಜಮ್ ಕೂಡ ವಿಶ್ವದ ಟಾಪ್ 3 ಬ್ಯಾಟ್ಸ್ಮನ್ಗಳಲ್ಲಿ ಒಬ್ಬರಾಗಿದ್ದಾರೆ. ಇವರೆಲ್ಲರಂತೆ ಕ್ರಿಕೆಟ್ನಲ್ಲಿ ವಿವಾದ ರಹಿತರಾಗಿ ಬದುಕುವುದನ್ನು ಉಮರ್ ಕಲಿತುಕೊಳ್ಳಬೇಕಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.