ETV Bharat / sports

ಕಲ್ಲು-ಮುಳ್ಳಿನ ಹಾದಿ ಸವೆಸಿ ಬಂದವರಿಂದು ಟೀಂ ಇಂಡಿಯಾದ ಭವಿಷ್ಯದ ತಾರೆಗಳು - ರವಿ ಬಿಷ್ನೋಯ್ ಲೇಟೆಸ್ಟ್ ನ್ಯೂಸ್

ಜೀವನದಲ್ಲಿ ಸಾಕಷ್ಟು ಸಂಕಷ್ಟಗಳನ್ನು ಎದುರಿಸಿ ಅಂಡರ್​-19 ತಂಡ ಸೇರಿಕೊಂಡಿರುವ ಹಲವು ಉತ್ಸಾಹಿ ಯುವ ಆಟಗಾರರು ಮುಂದಿನ ದಿನಗಳಲ್ಲಿ ಭಾರತ ತಂಡದ ಭವಿಷ್ಯದ ತಾರೆಗಳಾಗಿ ಹೊರಹೊಮ್ಮುತ್ತಿದ್ದಾರೆ.

U19 World Cup,ಜೂನಿಯರ್ ಟೀಂ ಇಂಡಿಯಾ ಸ್ಟಾರ್ ಪ್ಲೇಯರ್ಸ್
ಟೀಂ ಇಂಡಿಯಾದ ಭವಿಷ್ಯದ ತಾರೆಗಳು
author img

By

Published : Feb 8, 2020, 6:16 PM IST

Updated : Feb 8, 2020, 6:45 PM IST

ಹೈದರಾಬಾದ್: 2020ರ ಅಂಡರ್​-19 ವಿಶ್ವಕಪ್ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡಿರುವ ಟೀಂ ಇಂಡಿಯಾ ಯುವ ಆಟಗಾರರು ಈಗಾಗಲೇ ಫೈನಲ್ ಹಂತಕ್ಕೆ ತಲುಪಿದ್ದು, ವಿಶ್ವಕಪ್ ಕಿರೀಟಕ್ಕಾಗಿ ನಾಳೆ ಬಾಂಗ್ಲಾ ವಿರುದ್ಧ ಸೆಣಸಲಿದ್ದಾರೆ.

ಭಾರತ ಅಂಡರ್-19 ತಂಡ ಇಲ್ಲಿಯವರೆಗೆ ದಾಖಲೆಯ 7 ಬಾರಿ ಫೈನಲ್​ ಪ್ರವೇಶಿಸಿದೆ. ಇದೆಲ್ಲದಕ್ಕೂ ಯುವ ಆಟಗಾರರ ಪರಿಶ್ರಮವೇ ಕಾರಣವಾಗಿದೆ. ಸಾಕಷ್ಟು ಕಷ್ಟಗಳನ್ನು ಎದುರಿಸಿರುವ ಹಲವು ಉತ್ಸಾಹಿ ಯುವ ಆಟಗಾರರು, ಮುಂದಿನ ದಿನಗಳಲ್ಲಿ ಭಾರತ ತಂಡದ ಭವಿಷ್ಯದ ತಾರೆಗಳಾಗಿ ಹೊರಹೊಮ್ಮುತ್ತಿದ್ದಾರೆ.

ಛಲದಂಕ ಮಲ್ಲ ಈ ಯಶಸ್ವಿ ಜೈಸ್ವಾಲ್:
ಉತ್ತರ ಪ್ರದೇಶದ ಭಾದೋಹಿ ನಿವಾಸಿ ಯಶಸ್ವಿ ಜೈಸ್ವಾಲ್, ತಮ್ಮ ಕ್ರಿಕೆಟ್​ ವೃತ್ತಿಜೀವನವನ್ನು ಮುಂದುವರಿಸಲು ಮನೆ ಬಿಟ್ಟು ಮುಂಬೈಗೆ ಬರಬೇಕಾಯಿತು. ಮುಂಬೈಯಲ್ಲಿದ್ದಾಗ ಅನೇಕ ಸವಾಲುಗಳನ್ನು ಎದುರಿಸಿದ ಜೈಸ್ವಾಲ್, ಹಣದ ಕೊರತೆಯಿಂದಾಗಿ ಪಾನಿ ಪೂರಿ ಮಾರಾಟ ಮಾಡಬೇಕಾಯಿತು.

U19 World Cup,ಜೂನಿಯರ್ ಟೀಂ ಇಂಡಿಯಾ ಸ್ಟಾರ್ ಪ್ಲೇಯರ್ಸ್
ಯಶಸ್ವಿ ಜೈಸ್ವಾಲ್

ಹಾಗಂತ ಈ ಎಡಗೈ ಓಪನರ್ ಎಂದಿಗೂ ಛಲ ಬಿಡಲಿಲ್ಲ. ಕಠಿಣ ಪರಿಶ್ರಮದಿಂದ ಭಾರತೀಯ ಅಂಡರ್ -19 ತಂಡದಲ್ಲಿ ಸ್ಥಾನ ಪಡೆದುಕೊಂಡರು. ಪ್ರಸಕ್ತ ವಿಶ್ವಕಪ್‌ನಲ್ಲಿ ಅಸಾಧಾರಣ ಪ್ರದರ್ಶನ ನೀಡಿರುವ ಜೈಸ್ವಾಲ್​, 5 ಪಂದ್ಯಗಳಿಂದ 156ರ ಸರಾಸರಿಯೊಂದಿಗೆ 312 ರನ್ ಗಳಿಸಿದ್ದಾರೆ. ವಿಶ್ವಕಪ್‌ನಲ್ಲಿ ಅಗ್ರ ಸ್ಕೋರರ್ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದು, ಪಾಕ್ ವಿರುದ್ಧ ನಡೆದ ಸೆಮಿಫೈನಲ್​ ಪಂದ್ಯದಲ್ಲಿ ಶತಕ ಸಿಡಿದ್ದಾರೆ.

ಪ್ರಿಯಂ ಗರ್ಗ್​ ಹಿನ್ನೆಲೆ ಗೊತ್ತೇ?
ಅಂಡರ್ -19 ತಂಡದ ನಾಯಕನಾಗಿರುವ ಪ್ರಿಯಂ ಗರ್ಗ್ ಉತ್ತರ ಪ್ರದೇಶದ ಮೀರತ್​ನವರು. ಗರ್ಗ್​ ಈ ಸ್ಥಾನಕ್ಕೆರಲು ಸಾಕಷ್ಟು ಕಷ್ಟಪಟ್ಟಿದ್ದಾರೆ. ಮಗನ ಕನಸನ್ನು ಈಡೇರಿಸಲೆಂದು ತನ್ನ ಜೀವನವನ್ನೇ ಮುಡುಪಾಗಿಟ್ಟ ಈತನ ತಂದೆ ಹಣದ ಕೊರತೆಯಿಂದ ಹಾಲು ಮತ್ತು ದಿನಪತ್ರಿಕೆಯನ್ನು ಮಾರಾಟ ಮಾಡಿದ್ದಾರೆ.

ಪ್ರಿಯಂ ಗರ್ಗ್​

ಸ್ನೇಹಿತರು ಮತ್ತು ಸಂಬಂಧಿಕರ ಬಳಿ ಸಾಲ ಮಾಡಿ ಮಗನಿಗೆ ಕ್ರಿಕೆಟ್ ಕಿಟ್ ಮತ್ತು ತರಬೇತಿ ಕೊಡಿಸಿದ್ದಾರೆ. ತಂದೆಯ ಪರಿಶ್ರಮಕ್ಕೆ ಮೋಸ ಮಾಡದ ಮಗ, ಇಂದು ತಂಡದ ನಾಯಕನ ಜವಾಬ್ದಾರಿ ವಹಿಸಿಕೊಳ್ಳುವಷ್ಟು ಎತ್ತರಕ್ಕೆ ಬೆಳೆದಿದ್ದಾರೆ.

ರವಿ ಬಿಷ್ನೋಯ್ ಎಂಬ ಹುಡುಗ ಯಾರು ಗೊತ್ತೇ?
ರಾಜಸ್ಥಾನದಲ್ಲಿ ಶಿಕ್ಷಕನಾಗಿರುವ ಮಂಗಿಲಾಲ್ ಅವರ ಪುತ್ರ ರವಿ ಬಿಷ್ನೋಯ್ ಶ್ರದ್ಧೆ ಓದಿಗಿಂತ ಹೆಚ್ಚು ಕ್ರಿಕೆಟ್​ನಲ್ಲಿತ್ತು. ವೇಗದ ಬೌಲರ್​ ಆಗಬೇಕೆಂದು ಕಳೆದ 8 ವರ್ಷದ ಹಿಂದೆ ಸ್ಪಾರ್ಟನ್ ಕ್ರಿಕೆಟ್ ಅಕಾಡೆಮಿ ಸೇರಿದ ಬಿಷ್ನೋಯ್​ ಅವರನ್ನು ಲೆಗ್​ ಸ್ಪಿನ್ನರ್ ಆಗುವಂತೆ ತರಬೇತುದಾರರಾದ ಪ್ರತ್ಯುಷ್ ಮತ್ತು ಶಾರುಖ್ ಸಲಹೆ ನೀಡಿದ್ರು. ಅದಕ್ಕಾಗಿ ದಿನವಿಡೀ ಕ್ರಿಕೆಟ್ ಮೈದಾನದಲ್ಲೆ ಕಾಲ ಕಳೆಯುತ್ತಿದ್ದರು. ಮಗ ಕ್ರಿಕೆಟ್ ಆಡುವುದು ತಂದೆಗೆ ಇಷ್ಟವಿರಲಿಲ್ಲ, ಆದರೂ ಛಲ ಬಿದ ಬಿಷ್ನೋಯ್ ಇಂದು ಅಂಡರ್​-19 ತಂಡದಲ್ಲಿ ಮಿಂಚುತ್ತಿದ್ದಾರೆ.

ರವಿ ಬಿಷ್ನೋಯ್

ಸಾಧನೆಗೆ ಅಮ್ಮನೇ ಈ ಹುಡುಗನಿಗೆ ದಾರಿದೀಪ:
​ಮುಂಬೈ ಮೂಲದ ಅಥರ್ವ ಅಂಕೋಲೆಕರ್​ ತಾಯಿ ಬಸ್​ ಕಂಡಕ್ಟರ್​. ತಂದೆ ಇಲ್ಲದೆ ಮಗನನ್ನ ತಾಯಿಯೇ ಬೆಳೆಸಿದ್ದಾಳೆ. ಕ್ರಿಕೆಟ್ ಅಭ್ಯಾಸಕ್ಕಾಗಿ ತಾಯಿಯೇ ಅಥರ್ವ ಅವರನ್ನ ಮೈದಾನಕ್ಕೆ ಕರೆದುಕೊಂಡು ಹೋಗುತ್ತಿದ್ದರು.

ಅಥರ್ವ ಅಂಕೋಲೆಕರ್

ಅಭ್ಯಾಸ ಮುಗಿಯುತಿದ್ದಂತೆ ಇತರೆ ಆಟಗಾರರೆಲ್ಲ ಜ್ಯೂಸ್ ಕುಡಿಯುತಿದ್ದರು. ಆದರೆ ಎಂದಿಗೂ ನನ್ನ ಮಗ ಜ್ಯೂಸ್ ಬೇಕೆಂದು ಕೇಳಲಿಲ್ಲ. ಅನ್ನ ಊಟ ಮಾಡಿ ತೃಪ್ತಿ ಪಡುತ್ತಿದ್ದ ಎಂದು ಅಥರ್ವ ಅವರ ತಾಯಿ ವೈದೇಹಿ ತಿಳಿಸಿದ್ದಾರೆ.

Last Updated : Feb 8, 2020, 6:45 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.