ಕೊಲಂಬೊ: ಶ್ರೀಲಂಕಾ ಆತಿಥ್ಯದಲ್ಲಿ ನಡೆಯುತ್ತಿರುವ ಅಂಡರ್-19 ಏಷ್ಯಾಕಪ್ ಫೈನಲ್ನಲ್ಲಿ ಬಾಂಗ್ಲಾದೇಶವನ್ನು 5 ರನ್ಗಳಿಂದ ಮಣಿಸಿದ ಭಾರತ ಸತತ 2ನೇ ಬಾರಿ ಹಾಗೂ ಒಟ್ಟಾರೆ 7ನೇ ಬಾರಿ ಏಷ್ಯಾಕಪ್ ಎತ್ತಿ ಹಿಡಿದಿದೆ.
ಕೊಲಂಬೊದಲ್ಲಿ ನಡೆದ ಏಷ್ಯಾಕಪ್ ಫೈನಲ್ನಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ಕೇವಲ 106 ರನ್ಗಳಿಗೆ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡಿತು. ಆದರೆ ಬೌಲರ್ಗಳ ಕರಾರುವಾಕ್ ದಾಳಿಯ ನೆರವಿನಿಂದ ಬಾಂಗ್ಲಾ ತಂಡವನ್ನು ಕಟ್ಟಿಹಾಕಿದೆ.
ಭಾರತದ ಪರ ಬ್ಯಾಟಿಂಗ್ನಲ್ಲಿ ನಾಯಕ ಧ್ರುವ್ ಜುರೆಲ್ 33, ಕರನ್ ಲಾಲ್ 37 ಹಾಗೂ ಶಾಶ್ವತ್ ರಾವತ್ 19 ರನ್ಗಳಿಸಿ ತಂಡದ ಮೊತ್ತ 100 ಗಡಿ ದಾಟುವಂತೆ ನೋಡಿಕೊಂಡರು. ಇವರನ್ನು ಹೊರತುಪಡಿಸಿದರೆ ಉಳಿದ ಯಾವ ಆಟಗಾರರೂ ಎರಡಂಕಿ ಮೊತ್ತ ದಾಟಲಿಲ್ಲ.
ಬಾಂಗ್ಲಾ ಪರ ಮೃತ್ಯುಂಜಯ್ ಚೌಧರಿ 3, ಶಮಿಮ್ ಹುಸೇನ್ 3, ಶಹಿನ್ ಅಲಂ ಹಾಗೂ ತಂಜಿಮ್ ತಲಾ ಒಂದು ವಿಕೆಟ್ ಪಡೆದು ಮಿಂಚಿದರು.
-
👏 What. A. Game!
— AsianCricketCouncil (@ACCMedia1) September 14, 2019 " class="align-text-top noRightClick twitterSection" data="
India(U19) hold their nerve to bowl out Bangladesh(U19) for 101 in a memorable #U19AsiaCup final!
SCORES👉 https://t.co/DzlDKfq7mH
📱👉 'ACC' App available on Android and iOS #BANvIND pic.twitter.com/FFYqO9aGLx
">👏 What. A. Game!
— AsianCricketCouncil (@ACCMedia1) September 14, 2019
India(U19) hold their nerve to bowl out Bangladesh(U19) for 101 in a memorable #U19AsiaCup final!
SCORES👉 https://t.co/DzlDKfq7mH
📱👉 'ACC' App available on Android and iOS #BANvIND pic.twitter.com/FFYqO9aGLx👏 What. A. Game!
— AsianCricketCouncil (@ACCMedia1) September 14, 2019
India(U19) hold their nerve to bowl out Bangladesh(U19) for 101 in a memorable #U19AsiaCup final!
SCORES👉 https://t.co/DzlDKfq7mH
📱👉 'ACC' App available on Android and iOS #BANvIND pic.twitter.com/FFYqO9aGLx
107 ರನ್ಗಳ ಟಾರ್ಗೆಟ್ ಪಡೆದ ಬಾಂಗ್ಲಾದೇಶ ಅಥರ್ವ ಅಂಕೋಲೆಕರ್(5 ವಿಕೆಟ್) ದಾಳಿಗೆ ಸಿಲುಕಿ 101 ರನ್ಗಳಿಗೆ ಆಲೌಟಾಯಿತು. ಬಾಂಗ್ಲಾ ನಾಯಕ ಅಕ್ಬರ್ ಅಲಿ 23, ಮೃತ್ಯುಂಜಯ್ ಚೌಧರಿ 21 ರನ್ಗಳಿಸಿ ತಂಡದ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಕೊನೆಯಲ್ಲಿ 9 ನೇ ವಿಕೆಟ್ ಜೊತೆಯಾಟದಲ್ಲಿ 23 ರನ್ಗಳ ಪಾರ್ಟ್‌ನರ್‌ಶಿಪ್ ನಡೆಸಿದ ತಂಜಿಮ್ ಹಸನ್(12) ಹಾಗೂ ರಕಿಬುಲ್ ಹಸನ್(11) ಭಾರತದ ಪಾಳಯಕ್ಕೆ ಸೋಲಿನ ಭೀತಿ ತಂದಿಟ್ಟರು. ಆದರೆ 33ನೇ ಓವರ್ನಲ್ಲಿ ಅಥರ್ವ ತಂಜಿಮ್ ಹಾಗೂ ಕೊನೆಯ ಬ್ಯಾಟ್ಸ್ಮನ್ ಶಹಿನ್ ಅಲಂ ವಿಕೆಟ್ ಪಡೆಯುವ ಮೂಲಕ ಭಾರತ ತಂಡ ಚಾಂಪಿಯನ್ ಆಗುವಂತೆ ನೋಡಿಕೊಳ್ಳುವಲ್ಲಿ ಯಶಸ್ವಿಯಾದ್ರು.
2014 ರ ಏಷ್ಯಾ ಕಪ್ ವೇಳೆ ಏನಾಗಿತ್ತು?
2014 ರಲ್ಲಿ ಭಾರತ ಹಿರಿಯರ ತಂಡ ಕೂಡ 105 ರನ್ ಟಾರ್ಗೆಟ್ ನೀಡಿದ್ರೂ ಬಾಂಗ್ಲಾ ತಂಡವನ್ನು 58 ರನ್ಗಳಿಗೆ ಆಲೌಟ್ ಮಾಡಿ ಪಂದ್ಯ ಗೆದ್ದುಕೊಂಡಿತ್ತು. ಆ ಪಂದ್ಯದಲ್ಲಿ ಕನ್ನಡಿಗ ಸ್ಟುವರ್ಟ್ ಬಿನ್ನಿ 4 ರನ್ ನೀಡಿ 6 ವಿಕೆಟ್ ಪಡೆದು ವಿಶ್ವದಾಖಲೆ ನಿರ್ಮಿಸಿದ್ದರು.