ಮರಟುವಾ(ಶ್ರೀಲಂಕಾ): ಕಿರಿಯರ ಏಷ್ಯಾ ಕಪ್ನಲ್ಲಿ ಭಾರತ ತಂಡ ಪಾಕಿಸ್ತಾನ ತಂಡವನ್ನು 60 ರನ್ಗಳಿಂದ ಮಣಿಸುವ ಮೂಲಕ ಟೂರ್ನಿಯಲ್ಲಿ 2ನೇ ಜಯ ಸಾಧಿಸಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತ ತಂಡ 50 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 305 ರನ್ ಗಳಿಸಿತು. ಆರಂಭಿಕ ಬ್ಯಾಟ್ಸ್ಮನ್ ಅರ್ಜುನ್ ಅಜಾದ್ (121) ಹಾಗೂ 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದ ತಿಲಕ್ ವರ್ಮಾ (110) ಭರ್ಜರಿ ಶತಕಗಳಿಸಿ ಬೃಹತ್ ಮೊತ್ತಕ್ಕೆ ಕಾರಣರಾದರು. ಅರ್ಜುನ್ 111 ಎಸೆತಗಳಲ್ಲಿ 4 ಸಿಕ್ಸರ್ ಹಾಗೂ 11 ಬೌಂಡರಿ ಗಳಿಸಿದರೆ, ತಿಲಕ್ 119 ಎಸೆತಗಳಲ್ಲಿ 10 ಬೌಂಡರಿ ಹಾಗೂ ಒಂದು ಸಿಕ್ಸರ್ ಸಿಡಿಸಿದರು.
-
🙌
— AsianCricketCouncil (@ACCMedia1) September 7, 2019 " class="align-text-top noRightClick twitterSection" data="
The first Century of the #U19AsiaCup 2019 belongs to India's Arjun Azad!
SCORECARD 👉 https://t.co/DzlDKfq7mH ➡ Match Centre
📱iOS: https://t.co/2lRla1opwc
📱Android: https://t.co/1q3HVXQ4EL#INDvPAK pic.twitter.com/1lZ7ro2qly
">🙌
— AsianCricketCouncil (@ACCMedia1) September 7, 2019
The first Century of the #U19AsiaCup 2019 belongs to India's Arjun Azad!
SCORECARD 👉 https://t.co/DzlDKfq7mH ➡ Match Centre
📱iOS: https://t.co/2lRla1opwc
📱Android: https://t.co/1q3HVXQ4EL#INDvPAK pic.twitter.com/1lZ7ro2qly🙌
— AsianCricketCouncil (@ACCMedia1) September 7, 2019
The first Century of the #U19AsiaCup 2019 belongs to India's Arjun Azad!
SCORECARD 👉 https://t.co/DzlDKfq7mH ➡ Match Centre
📱iOS: https://t.co/2lRla1opwc
📱Android: https://t.co/1q3HVXQ4EL#INDvPAK pic.twitter.com/1lZ7ro2qly
ಪಾಕ್ ಪರ ನಸೀಮ್ ಶಾ 3, ಅಬ್ಬಾಸ್ ಅಫ್ರಿದಿ 3, ಅಮೀರ್ ಅಲಿ ಹಾಗೂ ಮೊಹಮ್ಮದ್ ಅಮೀರ್ ತಲಾ ಒಂದು ವಿಕೆಟ್ ಪಡೆದರು.
306 ರನ್ಗಳ ಮೊತ್ತ ಬೆನ್ನಟ್ಟಿದ ಪಾಕ್ 46.4 ಓವರ್ಗಳಲ್ಲಿ 245 ರನ್ಗಳಿಗೆ ಸರ್ವಪತನ ಕಾಣುವ ಮೂಲಕ 60 ರನ್ಗಳಿಂದ ಸೋಲೊಪ್ಪಿಕೊಂಡಿತು. ನಾಯಕ ರೊಹೈಲ್ 117 ಹಾಗೂ ಮೊಹಮ್ಮದ್ ಹ್ಯಾರೀಸ್ 43 ರನ್ ಗಳಿಸಿ ಪ್ರತಿರೋಧ ಒಡ್ಡಿದರೂ ಗೆಲುವು ದಕ್ಕಿಸಿಕೊಳ್ಳಲಾಗಲಿಲ್ಲ.
ಉತ್ತಮ ಬೌಲಿಂಗ್ ನಡೆಸಿದ ಭಾರತೀಯ ಬೌಲರ್ಗಳಾದ ಅಥರ್ವ ಆಂಕೋಲೆಕರ್ 3, ಸುಶಾಂತ್ ಮಿಶ್ರಾ 2, ವಿದ್ಯಾದರ್ ಪಾಟೀಲ್ 2 ಹಾಗೂ ಅಕಾಶ್ ಸಿಂಗ್ 1 ವಿಕೆಟ್ ಪಡೆದರು.
ಭಾರತ ತನ್ನ ಮೊದಲ ಪಂದ್ಯದಲ್ಲಿ ಕುವೈತ್ ವಿರುದ್ಧ ಗೆಲುವು ಸಾಧಿಸಿತ್ತು.