ಲಂಡನ್: ಚೊಚ್ಚಲ ಐಸಿಸಿ ವಿಶ್ವಕಪ್ ಸೂಪರ್ ಲೀಗ್‌ನಲ್ಲಿ ಟಿವಿ ಅಂಪೈರ್‌ಗಳು ಕ್ರೀಸ್ ನೋ-ಬಾಲ್ ಕರೆಗಳನ್ನು ನೀಡುವ ಜವಾಬ್ದಾರಿ ಹೊರಲಿದ್ದಾರೆ.
ಐಸಿಸಿ ವಿಶ್ವಕಪ್ ಸೂಪರ್ ಲೀಗ್ ಈ ವಾರದಿಂದ ಐರ್ಲೆಂಡ್ ಮತ್ತು ಇಂಗ್ಲೆಂಡ್ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯೊಂದಿಗೆ ಪ್ರಾರಂಭವಾಗಲಿದೆ.
ಈಗಾಗಲೆ ಟಿವಿ ಅಂಪೈರ್ ಫ್ರಂಟ್ ಫೂಟ್ ನೋಬಾಲ್ ಮಾನಿಟರಿಂಗ್ ತಂತ್ರಜ್ಞಾನದ ಪ್ರಯೋಗವನ್ನು ಕಳೆದ ವರ್ಷ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಸರಣಿಯಲ್ಲಿ ಬಳಿಸಿಕೊಳ್ಳಲಾಗಿತ್ತು ಎಂದು ಐಸಿಸಿ ವೆಬ್ಸೈಟ್ನಲ್ಲಿ ವರದಿ ಮಾಡಿದೆ.
ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಸರಣಿಯಲ್ಲಿ ಈ ತಂತ್ರಜ್ಞಾನ ಪ್ರಯೋಗ ಅಪೆಕ್ಸ್ ಕ್ರಿಕೆಟ್ ಬಾಡಿಗೆ ತೃಪ್ತಿ ತಂದಿತ್ತು. ನಂತರ ಇದೇ ವಿಧಾನವನ್ನು ಈ ವರ್ಷದ ಆರಂಭದಲ್ಲಿ ಜರುಗಿದ ಮಹಿಳೆಯರ ಟಿ20 ವಿಶ್ವಕಪ್ನಲ್ಲೂ ಮೂರನೇ ಅಂಪೈರ್‌ಗಳೆ ಫ್ರಂಟ್-ಫೂಟ್ ನೋ-ಬಾಲ್ ಗುರುತಿಸುತ್ತಿದ್ದರು.
ಸೌತಾಂಪ್ಟನ್‌ನಲ್ಲಿ ಜುಲೈ 30 ರಂದು ಇಂಗ್ಲೆಂಡ್ ಮತ್ತು ಐರ್ಲೆಂಡ್ ನಡುವಿನ ಸರಣಿಯೊಂದಿಗೆ ವಿಶ್ವಕಪ್ ಸೂಪರ್ ಲೀಗ್ ಪ್ರಾರಂಭವಾಗಲಿದೆ ಎಂದು ಐಸಿಸಿ ಇಂದು ಬೆಳಿಗ್ಗೆ ಚೊಚ್ಚಲ ಪುರುಷರ ಕ್ರಿಕೆಟ್ ವಿಶ್ವಕಪ್ ಸೂಪರ್ ಲೀಗ್ಗೆ ಚಾಲನೆ ನೀಡಿತ್ತು. ಇದೀಗ ಇದೇ ಟೂರ್ನಿಯಿಂದ ಈ ಹೊಸ ತಂತ್ರಜ್ಞಾನ ಬಳಕೆಗೆ ಚಾಲನೆ ನೀಡಲಾಗುವುದು ಎಂದು ಐಸಿಸಿ ತನ್ನ ವೆಬ್ಸೈಟ್ನಲ್ಲಿ ವರದಿ ಮಾಡಿದೆ.
ಇನ್ನು ಸೂಪರ್ ಲೀಗ್‌ನಲ್ಲಿ ಟೆಸ್ಟ್ ಆಡಲು ಮಾನ್ಯತೆ ಪಡೆದಿರುವ ಎಲ್ಲಾ 12 ರಾಷ್ಟ್ರ ಹಾಗೂ 2015-17ರಲ್ಲಿ ಐಸಿಸಿ ಸೂಪರ್ ಲೀಗ್‌ನಲ್ಲಿ ಪ್ರಶಸ್ತಿ ಗೆದ್ದಿರುವ ನೆದರ್ಲೆಂಡ್ ಭಾಗವಹಿಸಿಲಿದೆ. ಈ ಟೂರ್ನಿಯಲ್ಲಿ ಗರಿಷ್ಟ ಅಂಕ ಪಡೆದ 7 ತಂಡಗಳು ಭಾರತದಲ್ಲಿ 2023ರಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ಗೆ ನೇರ ಅರ್ಹತೆ ಪಡೆಯಲಿವೆ. ಉಳಿದ 5 ತಂಡಗಳು ಕ್ವಾಲಿಫೈಯರ್ ಮೂಲಕ ಬರಲಿವೆ. ಮೂರು ವರ್ಷದ ಅವಧಿಯಲ್ಲಿ ಎಲ್ಲಾ ತಂಡಗಳು ತಲಾ 4 ತವರು ಮತ್ತು ವಿದೇಶದಲ್ಲಿ 3 ಪಂದ್ಯಗಳ ಏಕದಿನ ಸರಣಿಯನ್ನಾಡಲಿವೆ.