ETV Bharat / sports

ಟ್ರಂಪ್​ ಬಾಯಲ್ಲಿ ಸಚಿನ್​ - ಕೊಹ್ಲಿ ಹೆಸರು: ಲಕ್ಷಾಂತರ ಜನರಿಂದ ಚಪ್ಪಾಳೆಯ ಹರ್ಷೋದ್ಗಾರ - Sachin Tendulkar and Virat Kohli

ಮೋದಿಯವರ ಕನಸಿನ ಕ್ರಿಕೆಟ್​ ಮೈದಾನವಾ ಮೊಟೇರಾ ಸ್ಟೇಡಿಯಂ ಅನ್ನು ಉದ್ಘಾಟನೆ ಮಾಡಿದ ನಂತರ ಟ್ರಂಪ್​ ತಮ್ಮ ಸುದೀರ್ಘ ಭಾಷಣದ ನಡುವೆ ಸಚಿನ್​ ತೆಂಡೂಲ್ಕರ್​ ಹಾಗೂ ವಿರಾಟ್ ಕೊಹ್ಲಿ ಅವರ ಹೆಸರನ್ನು ಉಚ್ಛಾರಣೆ ಮಾಡುತ್ತಿದ್ದಂತೆ ಕ್ರೀಡಾಂಗಣದಲ್ಲಿ ಸೀಳ್ಳೆಗಳ ಸದ್ದು ಜೋರಾಗಿತ್ತು.

Donald trump
Donald trump
author img

By

Published : Feb 24, 2020, 9:33 PM IST

ಅಹಮದಾಬಾದ್​: ವಿಶ್ವದ ಅತಿದೊಡ್ಡ ಮೊಟೇರಾ ಕ್ರಿಕೆಟ್ ಸ್ಟೇಡಿಯಂ ಉದ್ಘಾಟನೆ ಮಾಡಿದ ಅಮೆರಿಕ ಅಧ್ಯಕ್ಷ ಭಾರತದ ಕ್ರಿಕೆಟ್​ ದಂತಕತೆ ಸಚಿನ್​ ಹಾಗೂ ವಿರಾಟ್​ ಕೊಹ್ಲಿ ಹೆಸರನ್ನು ತಮ್ಮ ಭಾಷಣದಲ್ಲಿ ಉಲ್ಲೇಖಿಸಿದರು

ಮೋದಿಯವರ ಕನಸಿನ ಕ್ರಿಕೆಟ್​ ಮೈದಾನವಾ ಮೊಟೇರಾ ಸ್ಟೇಡಿಯಂ ಅನ್ನು ಉದ್ಘಾಟನೆ ಮಾಡಿದ ನಂತರ ಟ್ರಂಪ್​ ತಮ್ಮ ಸುದೀರ್ಘ ಭಾಷಣದ ನಡುವೆ ಸಚಿನ್​ ತೆಂಡೂಲ್ಕರ್​ ಹಾಗೂ ವಿರಾಟ್ ಕೊಹ್ಲಿ ಅವರ ಹೆಸರನ್ನು ಉಚ್ಛಾರ ಮಾಡಿದರು.

" ಈ ದೇಶದ ಜನಸಾಮಾನ್ಯರು ಕ್ರಿಕೆಟ್‌ ದಿಗ್ಗಜರನ್ನು ಹುರಿದುಂಬಿಸುತ್ತಾರೆ. ಸಚಿನ್‌ ತೆಂಡೂಲ್ಕರ್‌ರಿಂದ ವಿರಾಟ್‌ ಕೊಹ್ಲಿವರೆಗೆ ಇಲ್ಲಿನ ಕ್ರಿಕೆಟಿಗರು ವಿಶ್ವಶ್ರೇಷ್ಠರಾಗಿದ್ದಾರೆ" ಎಂದು ಟ್ರಂಪ್‌ 'ನಮಸ್ತೆ ಟ್ರಂಪ್​' ಕಾರ್ಯಕ್ರಮದಲ್ಲಿ ಭಾರತೀಯರಿಗೆ ನೆನಪಿಸಿದರು. ಟ್ರಂಪ್​ ಭಾರತದ ಈ ಇಬ್ಬರು ಮಹಾನ್​ ಕ್ರಿಕೆಟಿಗರ ಹೆಸರನ್ನು ತಮ್ಮ ಭಾಷಣದಲ್ಲಿ ಉಲ್ಲೇಖಿಸುತ್ತಿದ್ದಂತೆ ಕಾರ್ಯಕ್ರದಲ್ಲಿ ಭಾಗವಹಿಸಿದ್ದ ಲಕ್ಷಾಂತರ ಜನರು ಒಕ್ಕೊರಲಿನಿಂದ ಹರ್ಷೋದ್ಘಾರ ವ್ಯಕ್ತಪಡಿಸಿದರು. ಪ್ರಧಾನಿ ಮೋದಿ ಮೊಗದಲ್ಲೂ ಕೂಡ ನಗು ಅರಳಿತ್ತು.

  • From Sachin Tendulkar to Virat Kohli..

    That includes:

    Sachin
    Ganguly
    Dravid
    Sehwag
    Laxman
    Zaheer
    Dhoni
    Gambhir
    Rohit Sharma

    And finally Virat Kohli 😎

    pic.twitter.com/WOqBNa23wh

    — Vicky Saab (@VICKY__264) February 24, 2020 " class="align-text-top noRightClick twitterSection" data=" ">

ಅಮೆರಿಕದಲ್ಲಿ ಕಳೆದ ವರ್ಷ ಮೋದಿಯವರಿಗಾಗಿ 'ಹೌಡಿ ಮೋದಿ' ಕಾರ್ಯಕ್ರಮ ಏರ್ಪಡಿಸಿದಂತೆ ಇಂದು ಮೊಟೆರಾ ಸ್ಟೇಡಿಯಂನಲ್ಲಿ ನಮಸ್ತೆ ಟ್ರಂಪ್​ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಕೇಂದ್ರ ಗೃಹಸಚಿವ ಅಮಿತ್​ ಶಾ, ಬಿಸಿಸಿಐ ಅಧ್ಯಕ್ಷ ಸೌರವ್​ ಗಂಗೂಲಿ, ಗುಜರಾತ್​ ಮುಖ್ಯಮಂತ್ರಿ ವಿಜಯ್​ ರೂಪಾನಿ ಭಾಗವಹಿಸಿದ್ದರು.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.