ದುಬೈ: 2020ರ ಐಪಿಎಲ್ ಲೀಗ್ ಹಂತದಲ್ಲಿ ಅಗ್ರಸ್ಥಾನ ಪಡೆದ ತಂಡ ಚಾಂಪಿಯನ್ ಪಟ್ಟಕ್ಕೇರಿದ ಕೇವಲ ನಾಲ್ಕನೇ ನಿದರ್ಶನವಾಗಿದೆ.
2008ರಲ್ಲಿ ಆರಂಭವಾದ ಐಪಿಎಲ್ನಲ್ಲಿ ಇಲ್ಲಿಯವರೆಗೆ ಅಗ್ರಸ್ಥಾನ ಪಡೆದ ತಂಡಗಳು ಚಾಂಪಿಯನ್ ಆಗಿರುವುದು ಕೇವಲ 4 ಬಾರಿ, ಉಳಿದ ಆವೃತ್ತಿಗಳಲ್ಲಿ ಅಗ್ರಸ್ಥಾನ ಪಡೆದ ಹೊರೆತಾಗಿಯೂ ಕೆಲವು ತಂಡಗಳು ಟೂರ್ನಿ ಜಯಿಸಲು ವಿಫಲವಾಗಿದ್ದವು. ಮೊದಲ 9 ಆವೃತ್ತಿಗಳಲ್ಲಿ ಕೇವಲ ಒಂದು ಬಾರಿ ಮಾತ್ರ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದ್ದ ತಂಡ ಚಾಂಪಿಯನ್ ಆಗಿತ್ತು. ನಂತರದ 4 ಆವೃತ್ತಿಗಳಲ್ಲಿ 3 ಬಾರಿ ಮುಂಬೈ ತಂಡ ಅಗ್ರಸ್ಥಾನದ ಹೊರೆತಾಗಿಯೂ ಚಾಂಪಿಯನ್ ಆಗುವ ಮೂಲಕ ತನ್ನ ತಾಕತ್ತು ಪ್ರದರ್ಶಿಸಿದೆ.
2008ರಲ್ಲಿ ಶೇನ್ ವಾರ್ನ್ ನಾಯಕತ್ವದ ರಾಜಸ್ಥಾನ್ ರಾಯಲ್ಸ್ 14 ಪಂದ್ಯಗಳಲ್ಲಿ 22 ಅಂಕ ಪಡೆದು ಚಾಂಪಿಯನ್ ಆಗಿತ್ತು. ನಂತರ 2016ರವರೆಗೂ ಅಗ್ರಸ್ಥಾನ ಪಡೆದ ತಂಡ ಚಾಂಪಿಯನ್ ಆಗುವಲ್ಲಿ ವಿಫಲವಾದ್ದವು. ಆದರೆ 2017, 2019 ಮತ್ತು 2020ರಲ್ಲಿ ಮುಂಬೈ ತಂಡ ಅಗ್ರಸ್ಥಾನ ಪಡೆದರೂ ಚಾಂಪಿಯನ್ ಪಟ್ಟಕ್ಕೇರುವ ಮೂಲಕ ಅಗ್ರಸ್ಥಾನ ಅನಿಷ್ಠ ಎಂಬ ಹಣೆಪಟ್ಟಿಯನ್ನು ಹೋಗಲಾಡಿಸಿದೆ.
2009ರಲ್ಲಿ ಡೆಲ್ಲಿ(20 ಅಂಕ), 2010ರಲ್ಲಿ ಮುಂಬೈ(20), 2011ರಲ್ಲಿ ಆರ್ಸಿಬಿ(19), 2012ರಲ್ಲಿ ಡೆಲ್ಲಿ(22), 2013ರಲ್ಲಿ ಚೆನ್ನೈ (22) 2014ರಲ್ಲಿ ಪಂಜಾಬ್(22), 2015 ರಲ್ಲಿ(18),2016ರಲ್ಲಿ ಗುಜರಾತ್ ಲಯನ್ಸ್(18), 2018ರಲ್ಲಿ ಹೈದರಾಬಾದ್(18) ಅಗ್ರಸ್ಥಾನ ಪಡೆದರೂ ಚಾಂಪಿಯನ್ ಪಟ್ಟಕ್ಕೇರಲು ವಿಫಲವಾಗಿದ್ದವು. ಅದರಲ್ಲೂ ಡೆಲ್ಲಿ ತಂಡ 2 ಬಾರಿ ಅಗ್ರಸ್ಥಾನ ಪಡೆದ ಹೊರೆತಾಗಿಯೂ ಫೈನಲ್ ಕೂಡ ಪ್ರವೇಶಿಸಲು ವಿಫಲವಾಗಿತ್ತು.