ETV Bharat / sports

ಐಪಿಎಲ್​ ಇತಿಹಾಸದ TOP​ 5 ರೋಚಕ ಸೂಪರ್​ ಓವರ್​ ಪಂದ್ಯಗಳು.. - ರಾಯಲ್​ ಚಾಂಲೆಂಜರ್ಸ್​ ಬೆಂಗಳೂರು

2008ರಲ್ಲಿ ಶುರುವಾದ ಇಂಡಿಯನ್​ ಪ್ರೀಮಿಯರ್ ಲೀಗ್​ ನೂರಾರು ಹೊಸ ಕ್ರಿಕೆಟಿಗರ ಪ್ರತಿಭೆಯ ಅನಾವರಣಕ್ಕೆ ಒಂದು ಅದ್ಭುತ ವೇದಿಕೆಯಾಗಿತ್ತು. ಇಲ್ಲಿ ಆಡಿದವರು ಬಹುಬೇಗನೆ ಸೀನಿಯರ್​ ತಂಡಕ್ಕೆ ಸೇರ್ಪಡೆಯಾಗಿ ಇಂದಿಗೂ ಕೆಲವು ಆಟಗಾರರು ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಮಿಂಚುತ್ತಿದ್ದಾರೆ. ಇನ್ನು ಕೆಲವು ಸೀನಿಯರ್​ ಆಟಗಾರರು ತಂಡಕ್ಕೆ ವಾಪಸ್ಸಾಗಲು ಕೂಡ ನೆರವಾಗಿದೆ.

ಐಪಿಎಲ್​  ಸೂಪರ್​ ಓವರ್​
ಐಪಿಎಲ್​ ಸೂಪರ್​ ಓವರ್​
author img

By

Published : Apr 11, 2020, 1:53 PM IST

ಮುಂಬೈ: ಕ್ರಿಕೆಟ್​ ಲೀಗ್​ಗಳಲ್ಲಿ ಅತ್ಯಂತ ಜನಪ್ರಿಯ ಹಾಗೂ ಶ್ರೀಮಂತ ಲೀಗ್​ ಆಗಿರುವ ಐಪಿಎಲ್‌ ಕಳೆದ 12 ವರ್ಷಗಳ​ಲ್ಲಿ ಹಲವಾರು ರೋಚಕ ಪಂದ್ಯಗಳಿಗೆ ಸಾಕ್ಷಿಯಾಗಿದೆ. ಇದರಲ್ಲಿ ಕೆಲವು ಸೂಪರ್​ ಓವರ್​ಗಳು ಕೂಡ ಸೇರಿವೆ.

2008ರಲ್ಲಿ ಶುರುವಾದ ಇಂಡಿಯನ್​ ಪ್ರೀಮಿಯರ್ ಲೀಗ್​ ನೂರಾರು ಹೊಸ ಕ್ರಿಕೆಟಿಗರ ಪ್ರತಿಭೆಯ ಅನಾವರಣಕ್ಕೆ ಒಂದು ಅದ್ಭುತ ವೇದಿಕೆಯಾಗಿತ್ತು. ಇಲ್ಲಿ ಆಡಿದವರು ಬಹುಬೇಗನೆ ಸೀನಿಯರ್​ ತಂಡಕ್ಕೆ ಸೇರ್ಪಡೆಯಾಗಿ ಇಂದಿಗೂ ಕೆಲವು ಆಟಗಾರರು ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಮಿಂಚುತ್ತಿದ್ದಾರೆ. ಇನ್ನು ಕೆಲವು ಸೀನಿಯರ್​ ಆಟಗಾರರು ತಂಡಕ್ಕೆ ವಾಪಸ್​ ಆಗಲು ಕೂಡ ನೆರವಾಗಿದೆ.

ಐಪಿಎಲ್​ನಲ್ಲಿ ಬೌಂಡರಿ, ಸಿಕ್ಸರ್​ಗಳ ಜೊತೆಗೆ ಸೂಪರ್​ ಓವರ್ ಪಂದ್ಯಗಳ ವೀಕ್ಷಣೆ ಕ್ರಿಕೆಟ್‌ ಪ್ರಿಯರಿಗೆ ರೋಮಾಂಚನಕಾರಿ ಅನುಭವ. ಮಿಲಿಯನ್​ ಡಾಲರ್​ ಲೀಗ್​ನಲ್ಲಿ ಮಜಲ್ ಪವರ್​, ವೇಗಿಗಳ ಯಾರ್ಕರ್​, ಚಾಣಾಕ್ಷ ಫೀಲ್ಡಿಂಗ್​ ನೋಡಲು ಅಭಿಮಾನಿಗಳು ಕೂಡ ಕುತೂಹಲದಿಂದ ಕಾಯುತ್ತಿರುತ್ತಾರೆ.

ಕಳೆದ 12 ಸೀಸನ್​ಗಳಲ್ಲಿ ಅತ್ಯಂತ ರೋಚಕವಾಗಿದ್ದ 5 ಸೂಪರ್ ಓವರ್​ಗಳು ಇಲ್ಲಿವೆ:

ಡೆಲ್ಲಿ ಕ್ಯಾಪಿಟಲ್​ vs ಕೋಲ್ಕತ್ತಾ ನೈಟ್​ ರೈಡರ್ಸ್​- 2019

ಐಪಿಎಲ್​  ಸೂಪರ್​ ಓವರ್​
ಐಪಿಎಲ್​ ಸೂಪರ್​ ಓವರ್​

ಕಳೆದ ವರ್ಷ ನಡೆದ ಐಪಿಎಲ್​ ಸೀಸನ್​ನಲ್ಲಿ ಕೋಲ್ಕತ್ತಾ ಮತ್ತು ಡೆಲ್ಲಿ ನಡುವೆ ನಡೆದಿದ್ದ ಸೂಪರ್​ ಓವರ್​ ಪಂದ್ಯ ಅತ್ಯಂತ ಹೆಚ್ಚು ರೋಚಕತೆಯಿಂದ ಕೂಡಿತ್ತು. ಮೊದಲು ಬ್ಯಾಟಿಂಗ್​ ನಡೆಸಿದ್ದ ಕೆಕೆಆರ್​ ರಸೆಲ್​ (62) ಸ್ಫೋಟಕ ಬ್ಯಾಟಿಂಗ್​ನಿಂದ 185 ರನ್​ ಗಳಿಸಿತ್ತು. ಇತ್ತ ಡೆಲ್ಲಿ ತಂಡದ ಪ್ರಥ್ವಿ ಶಾ ಅವರ 99 ರನ್​ಗಳ ಹೊರೆತಾಗಿಯೂ ತಂಡ ಡೆತ್​ ಓವರ್​ನಲ್ಲಿ ರನ್​ಗಳಿಸಿ ಪರದಾಡಿ ಸೂಪರ್​ ಓವರ್​ಗೆ ಹೋಗುವಂತೆ ಮಾಡಿತ್ತು.

ಪ್ರಸಿದ್​ ಕೃಷ್ಣ ಎಸೆದ ಸೂಪರ್​ ಓವರ್​ನಲ್ಲಿ ಶ್ರೇಯಸ್​ ಅಯ್ಯರ್​ ವಿಕೆಟ್​ ಪಡೆದುಕೊಂಡು 10 ರನ್​ ಬಿಟ್ಟುಕೊಟ್ಟರು. 11 ರನ್​ಗಳ ಗುರಿ ಪಡೆದ ಕೆಕೆಆರ್​ ರಬಾಡ ಅವರ ಬೌಲಿಂಗ್​ನಲ್ಲಿ 7 ರನ್​ ಗಳಿಸಲಷ್ಟೇ ಶಕ್ತವಾಗಿ 3 ರನ್​ಗಳ ಸೋಲನುಭವಿಸಿತು. ರಬಾಡ ಎಸೆದ ಈ ಓವರ್​ ಐಪಿಎಲ್​ ಅತ್ಯುತ್ತಮ ಓವರ್​ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.

ಮುಂಬೈ ಇಂಡಿಯನ್ಸ್​ vs ಸನ್​ರೈರ್ಸ್​ ಹೈದರಾಬಾದ್:​

ಐಪಿಎಲ್​  ಸೂಪರ್​ ಓವರ್​
ಐಪಿಎಲ್​ ಸೂಪರ್​ ಓವರ್​

2019ರಲ್ಲಿ ನಡೆದ ಒಂದು ರೋಚಕ ಸೂಪರ್​ ಓವರ್​ನಲ್ಲಿ ಇದು ಒಂದು. ಮೊದಲು ಬ್ಯಾಟಿಂಗ್​ ನಡೆಸಿದ್ದ ಮುಂಬೈ ಇಂಡಿಯನ್ಸ್​ ಡಿಕಾಕ್​ ಅವರ 69 ರನ್​ಗಳ ನೆರವಿನಿಂದ 162 ರನ್​ ಗಳಿಸಿದ್ದರು. ಈ ಮೊತ್ತವನ್ನು ಬೆನ್ನತ್ತಿದ ಕನ್ನಡಿಗ ಮನೀಶ್​ ಪಾಂಡೆ ಅವರ ಅಜೇಯ 71 ರನ್​ಗಳ ನೆರವಿನಿಂದ 162 ರನ್​ಗಳಿಸಿ ಫಲಿತಾಂಶಕ್ಕೆ ಸೂಪರ್​ ಓವರ್​ ಮೊರೆ ಹೋಗುವಂತಾಯಿತು.

ಬುಮ್ರಾ ಎಸೆದ ಮೊದಲ ಎಸೆತದಲ್ಲೇ ಮನೀಶ್​ ಪಾಂಡೆ ರನ್ಔಟ್​ ಆದರು. ನಂತರ ಬಂದ ಮೊಹಮ್ಮದ್​ ನಬಿ ಸಿಕ್ಸ್​ ಸಿಡಿಸಿ ಮುಂಬೈಗೆ 9 ರನ್​ಗಳ ಟಾರ್ಗೆಟ್​ ನೀಡಿದರು. ಇತ್ತ ಕ್ಯಾಪ್ಟನ್​ ವಿಲಿಯಮ್ಸನ್​ ಸ್ಪಿನ್ನರ್​ ರಶೀದ್​ ಖಾನ್​ಗೆ ಬೌಲಿಂಗ್​ ನೀಡಿದರು. ಮುಂಬೈನ ಹಾರ್ದಿಕ್​ ಪಾಂಡ್ಯ ಮೊದಲ ಎಸೆತದಲ್ಲಿ ಸಿಕ್ಸರ್​ ಸಿಡಿಸಿ ಮುಂಬೈಗೆ ಗೆಲುವು ತಂದುಕೊಟ್ಟರು.

ರಾಜಸ್ಥಾನ ರಾಯಲ್ಸ್​ vs ಕಿಂಗ್ಸ್​ ಇಲೆವೆನ್ ಪಂಜಾಬ್​- 2015:

ಐಪಿಎಲ್​  ಸೂಪರ್​ ಓವರ್​
ಐಪಿಎಲ್​ ಸೂಪರ್​ ಓವರ್​

ರಹಾನೆ (74) ಹಾಗೂ ವಾಟ್ಸನ್​ (45) ಅವರ ಅದ್ಭುತ ಬ್ಯಾಟಿಂಗ್​ ನೆರವಿನಿಂದ ನೆರವಿನಿಂದ ರಾಜಸ್ಥಾನ್​ ರಾಯಲ್ಸ್​ ಅವರ 191 ರನ್​ ಮೊತ್ತ ಕಲೆ ಹಾಕಿತು. 192 ರನ್​ಗಳ ಗುರಿ ಪಡೆದ ಪಂಜಾಬ್ ತಂಡದ​ ಸೆಹ್ವಾಗ್​, ವಿಜಯ್​ ಅವರ ಬ್ಯಾಟಿಂಗ್​ ವೈಫಲ್ಯದ ಹೊರತಾಗಿಯೂ ಶಾನ್​​ ಮಾರ್ಶ್​ ಅವರ 65 ಹಾಗೂ ಮಿಲ್ಲರ್​ ಅವರ 54 ಹಾಗೂ ಅಕ್ಷರ್​ ಪಟೇಲ್​ ಅವರ ಕೊನೆಯ ಎಸೆತದಲ್ಲಿ ಬೌಂಡರಿ ನೆರವಿನಿಂದ ಪಂದ್ಯ ಟೈ ಆಗುವಂತೆ ಮಾಡಿದರು.

ಕ್ರಿಸ್​ ಮೊರೀಸ್​ ಎಸೆದ ಮೊದಲ ಎಸೆತದಲ್ಲಿ ಮಿಲ್ಲರ್​ ಔಟ್​ ಆದರು. ಆದರೆ ಮಾರ್ಶ್​ ಸತತ 3 ಬೌಂಡರಿ ಬಾರಿಸಿ 15 ರನ್​ ಸೇರಿಸಿದರು. 16 ರನ್​ ಬೆನ್ನತ್ತಿದ ರಾಯಲ್ಸ್​ ಕೂಡ ಮಿಚೆಲ್​ ಜಾನ್ಸನ್​ರನ ಮೊದಲ ಎಸೆತದಲ್ಲೇ ಸ್ಫೋಟಕ ಬ್ಯಾಟ್ಸ್​ಮನ್​ ವಾಟ್ಸನ್​ ಅವರ ವಿಕೆಟ್​ ಕಳೆದುಕೊಂಡಿತು. ನಂತರದ ಎಸೆತ ಚೆಂಡು ಬೌಂಡರಿ ಗೆರೆ ದಾಟಿದರೂ ಮೂರನೇ ಎಸೆತದಲ್ಲಿ ಜೇಮ್ಸ್​ ಫಾಕ್ನರ್​ ರನ್​ಔಟಾಗುವುದರೊಂದಿಗೆ 9 ರನ್​ಗಳ ಸೋಲನುಭವಿಸಿತು.

ಕೋಲ್ಕತ್ತಾ ನೈಟ್​ ರೈಡರ್ಸ್​ vs ರಾಜಸ್ಥಾನ್​ ರಾಯಲ್ಸ್​- 2014:

ಐಪಿಎಲ್​  ಸೂಪರ್​ ಓವರ್​
ಐಪಿಎಲ್​ ಸೂಪರ್​ ಓವರ್​

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್​ ನಡೆಸಿದ್ದ ರಾಜಸ್ಥಾನ್​ ರಾಯಲ್ಸ್​ ರಹಾನೆಯ 72 ರನ್​ಗಳ ನೆರವಿನಿಂದ 152 ರನ್​ಗಳ ಸ್ಪರ್ಧಾತ್ಮಕ ಮೊತ್ತ ದಾಖಲಿಸಿತ್ತು. ಕೆಕೆಆರ್ ತಂಡದ ಗೌತಮ್​ ಗಂಭೀರ್​ ಅವರ 44 ರನ್​ ಹಾಗೂ ಶಕೀಬ್​ ಅವರ 29 ರನ್​ಗಳ ಹೊರತಾಗಿಯೂ ಫಾಕ್ನರ್​ ಬೌಲಿಂಗ್​ಗೆ ನರಳಾಡಿ ಸುಲಭವಾಗಿ ಗೆಲ್ಲುವ ಪಂದ್ಯ ಟೈನಲ್ಲಿ ಮುಗಿಯಿತು.

ಸೂಪರ್​ ಓವರ್​ನಲ್ಲಿ ಮನೀಶ್​ ಪಾಂಡೆ ಕೊನೆಯ ಎಸೆತದ ಸಿಕ್ಸರ್​ ನೆರವಿನಿಂದ ಕೆಕೆಆರ್ ತಂಡಕ್ಕೆ 11 ರನ್​ಗಳ ಗುರಿ ನೀಡಿತು. ವಾಟ್ಸನ್ ಹಾಗೂ ಸ್ಟೀವ್​ ಸ್ಮಿತ್​ ಮೊದಲ ಮೂರು ಎಸೆತಗಳಲ್ಲಿ ಸಿಂಗಲ್​​ ರನ್‌ ತಗೆಯಲಷ್ಟೇ ಶಕ್ತರಾದರು. ಆದರೆ ನಾಲ್ಕನೇ ಎಸೆತದಲ್ಲಿ ವಾಟ್ಸನ್​ ಸಿಕ್ಸರ್​ ಸಿಡಿಸಿದರು. ಕೊನೆಯ ಎಸೆತದಲ್ಲಿ ಗೆಲುವಿಗೆ 2 ರನ್​ ಅಗತ್ಯವಿದ್ದ ಸಂದರ್ಭದಲ್ಲಿ ಆರ್​ಆರ್​ ಬೌಂಡರಿಯೊಂದಿಗೆ ಪಂದ್ಯವನ್ನು ಗೆದ್ದುಕೊಂಡಿತು.

ರಾಯಲ್​ ಚಾಂಲೆಂಜರ್ಸ್​ vs ಡೆಲ್ಲಿ ಡೇರ್​ಡೇವಿಲ್ಸ್​- 2013:

ಐಪಿಎಲ್​  ಸೂಪರ್​ ಓವರ್​
ಐಪಿಎಲ್​ ಸೂಪರ್​ ಓವರ್​

2013ರ ಆವೃತ್ತಿಯ 21ನೇ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್​ ನಡೆಸಿದ ಡೆಲ್ಲಿ 5 ವಿಕೆಟ್​ ಕಳೆದುಕೊಂಡು 152 ರನ್​ಗಳಿಸಿತ್ತು. ಸೆಹ್ವಾಗ್​ 25, ಜಯವರ್ದನೆ 28, ಕೇದರ್​ ಜಾಧವ್​ 29 ರನ್ ​ಗಳಿಸಿದ್ದರು. ಸುಲಭ ಗುರಿ ಬೆನ್ನತ್ತಿದ ಆರ್​ಸಿಬಿ ಕೊಹ್ಲಿಯವರ 65 ರನ್​, ಹಾಗೂ ವಿಲಿಯರ್ಸ್​ ಅವರ 39 ರನ್​ಗಳ ಹೊರತಾಗಿಯೂ 7 ವಿಕೆಟ್​ ಕಳೆದುಕೊಂಡು 152 ರನ್​ಗಳಿಸಿತು.

ಉಮೇಶ್​ ಯಾದವ್​ ಎಸೆದ ಸೂಪರ್​ ಓವರ್​ನಲ್ಲಿ ಆರ್​ಸಿಬಿ ವಿಲಿಯರ್ಸ್ ಅವರ ಭರ್ಜರಿ 2 ಸಿಕ್ಸರ್​ ಸಹಿತ 15 ರನ್​ಗಳಿಸಿತು. ರವಿ ರಾಂಪಲ್​ ಎಸೆದ ಸೂಪರ್ ಓವರ್​ನ ಮೊದಲ ಎಸೆತದಲ್ಲಿ ಡೇವಿಡ್​ ವಾರ್ನರ್​ ವಿಕೆಟ್ ಕಳೆದುಕೊಂಡಿತು. ನಂತರ ಬಂದ ಇರ್ಫಾನ್​ ಪಠಾಣ್​ ಬ್ಯಾಕ್​ ಟು ಬ್ಯಾಕ್​ ಬೌಂಡರಿ, ಸಿಕ್ಸರ್​ ಸಿಡಿಸಿದರಾದರೂ 11 ರನ್​ಗಳಿಸಿ 4 ರನ್​ಗಳ ಸೋಲುಕಂಡು ನಿರಾಶೆಯನುಭವಿಸಿತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.