ಕರಾಚಿ: ಪಾಕಿಸ್ತಾನ ಸೂಪರ್ ಲೀಗ್(ಪಿಎಸ್‌ಎಲ್)ನಲ್ಲಿ ಭಾಗವಹಿಸಿದ್ದ ಇಂಗ್ಲೆಂಡ್ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಟಾಮ್ ಬಾಂಟನ್ಗೆ ಕೋವಿಡ್ 19 ಪಾಸಿಟಿವ್ ದೃಢಪಟ್ಟಿದೆ. ಇದೀಗ ಆಂಗ್ಲ ಕ್ರಿಕೆಟಿಗ ಐಸೊಲೇಸನ್ಗೆ ಒಳಗಾಗಿದ್ದಾರೆ.
- — Tom Banton (@TBanton18) March 3, 2021 " class="align-text-top noRightClick twitterSection" data="
— Tom Banton (@TBanton18) March 3, 2021
">— Tom Banton (@TBanton18) March 3, 2021
"ನಾನು ನಿನ್ನೆ ಕೋವಿಡ್ ಪರೀಕ್ಷೆಯಲ್ಲಿ ಪಾಸಿಟಿವ್ ವರದಿ ಪಡೆದಿದ್ದೇನೆ. ಇದೀಗ ಪಿಎಸ್ಎಲ್ ಪ್ರೋಟೋಕಾಲ್ಗಳ ಭಾಗವಾಗಿ ಐಸೊಲೇಟ್ ಆಗಿದ್ದು ಇಲ್ಲಿಯವರೆಗೆ ಆರೋಗ್ಯದಿಂದಿದ್ದೇನೆ" ಎಂದು ಬ್ಯಾಂಟನ್ ಟ್ವೀಟ್ ಮಾಡಿದ್ದಾರೆ.
ಹೊಸ ಮೂರು ಪ್ರಕರಣಗಳಲ್ಲಿ ಒಬ್ಬ ಕ್ರಿಕೆಟಿಗ ಇಸ್ಲಾಮಾಬಾದ್ ಯುನೈಟೆಡ್ ಫ್ರ್ಯಾಂಚೈಸ್‌ಗೆ ಸೇರಿದವನು ಎಂದು ಪಿಸಿಬಿ ಅಧಿಕಾರಿ ಹೇಳಿದ್ದಾರೆ. ಸೋಮವಾರ ಅದೇ ತಂಡದ ಫವಾದ್ ಆಹ್ಮದ್ಗೆ ಪಾಸಿಟಿವ್ ದೃಢಪಟ್ಟಿದ್ದರಿಂದ ಪಿಎಸ್ಎಲ್ಗೆ ಆಘಾತ ಉಂಟುಮಾಡಿತ್ತು. ಅಂದಿನ ಪಂದ್ಯವನ್ನು ರದ್ದುಗೊಳಿಸಿ ಮಂಗಳವಾರಕ್ಕೆ ಮುಂದೂಡಲಾಗಿತ್ತು. ಆದರೂ ಇದೀಗ ಹೊಸ 3 ಪ್ರಕರಣ ಪತ್ತೆಯಾಗಿರುವುದು ಪಿಸಿಬಿಗೆ ತಲೆನೋವು ತಂದಿದೆ.
ಇದನ್ನೂ ಓದಿ: ಆಡುವುದು ಗೆಲ್ಲುವುದಕ್ಕೋ ಅಥವಾ 5 ದಿನಗಳ ಕಾಲ ಮನರಂಜಿಸುವುದಕ್ಕೋ? ಕೊಹ್ಲಿ ಕಿಡಿ