ETV Bharat / sports

ಇಂದಿನಿಂದ ಟೆಸ್ಟ್​ ಚಾಂಪಿಯನ್​ಶಿಪ್​ ಆರಂಭ... ಆಸೀಸ್ ​ - ಆಂಗ್ಲರ ನಡುವೆ ಸಮರ ಶುರು - ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್ latet news

ಇಂದಿನಿಂದ ಟೆಸ್ಟ್​ ಚಾಂಪಿಯನ್​ಶಿಪ್​ ಆರಂಭಗೊಳ್ಳಲಿದ್ದು, ಈ ಟೂರ್ನಿಯಲ್ಲಿ 9 ತಂಡಗಳು 27 ಸರಣಿಗಳಲ್ಲಿ 71 ಟೆಸ್ಟ್​ ಪಂದ್ಯಗಳನ್ನ ಬರೋಬ್ಬರಿ 2 ವರ್ಷಗಳ ಕಾಲ ಆಡಲಿವೆ. ಅಂಕಪಟ್ಟಿಯಲ್ಲಿ ಮೊದಲೆರಡು ಸ್ಠಾನ ಪಡೆಯುವ ಎರಡು ತಂಡಗಳು ಫೈನಲ್​ನಲ್ಲಿ ಸೆಣಸಾಡಲಿವೆ.

ICC Test championship
author img

By

Published : Aug 1, 2019, 9:52 AM IST

ಬರ್ಮಿಂಗ್​ ಹ್ಯಾಮ್​: ಟೆಸ್ಟ್​ ಕ್ರಿಕೆಟ್​ ಇತಿಹಾಸದ ಮೊಟ್ಟ ಮೊದಲ ಚಾಂಪಿಯನ್​ ಶಿಪ್​ಗೆ ಕ್ಷಣಗಣನೆ ಶುರುವಾಗಿದ್ದು, ಸಾಂಪ್ರದಾಯಿಕ ಎದುರಾಳಿಗಳಾದ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್​ ನಡುವೆ ನಡೆಯುವ ಆ್ಯಶಸ್​ ಸರಣಿಯ ಮೂಲಕ ಉದ್ಘಾಟನೆಯಾಗುತ್ತಿದೆ.

ಈ ಚಾಂಪಿಯನ್​ ಶಿಪ್​ನಲ್ಲಿ 9 ತಂಡಗಳು 27 ಸರಣಿಗಳಲ್ಲಿ 71 ಟೆಸ್ಟ್​ ಪಂದ್ಯಗಳನ್ನ ಬರೋಬ್ಬರಿ 2 ವರ್ಷಗಳ ಕಾಲ ಆಡಲಿವೆ. ಅಂಕಪಟ್ಟಿಯಲ್ಲಿ ಮೊದಲೆರಡು ಸ್ಠಾನ ಪಡೆಯುವ ಎರಡು ತಂಡಗಳು ಫೈನಲ್​ನಲ್ಲಿ ಸೆಣಸಾಡಲಿವೆ.

ಈ ಟೆಸ್ಟ್​ ಚಾಂಪಿಯನ್​ಶಿಪ್​ನಲ್ಲಿ ಭಾರತ, ನ್ಯೂಜಿಲ್ಯಾಂಡ್ ,ದ​ಕ್ಷಿಣ ಆಫ್ರಿಕಾ, ಇಂಗ್ಲೆಂಡ್​, ಆಸ್ಟ್ರೇಲಿಯಾ, ಪಾಕಿಸ್ತಾನ, ಶ್ರೀಲಂಕಾ, ವೆಸ್ಟ್​ ಇಂಡೀಸ್​ ಹಾಗೂ ಬಾಂಗ್ಲಾದೇಶ ತಂಡಗಳು ಭಾಗವಹಿಸಲಿವೆ. ಜಿಂಬಾಬ್ವೆ ಹಾಗೂ ಈಗಷ್ಟೇ ಟೆಸ್ಟ್​ ಕ್ರಿಕೆಟ್ ಮಾನ್ಯತೆ ಪಡೆದುಕೊಂಡಿರುವ ಐರ್ಲೆಂಡ್​, ಅಫ್ಘಾನಿಸ್ತಾನ ತಂಡಗಳು ಈ ಆವೃತ್ತಿಯನ್ನು ಮಿಸ್​ ಮಾಡಿಕೊಳ್ಳಲಿವೆ.

ICC  Test championship
ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್​

ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್ ಏಕೆ?

ಕ್ರಿಕೆಟ್ ಅಭಿಮಾನಿಗಳು ನಿಧಾನವಾಗಿ ಹೊಡಿಬಡಿ ಆಟಕ್ಕೆ ಹೊರಳುತ್ತಿದ್ದು, ಪರಿಣಾಮ ಐದು ದಿನಗಳ ಕಾಲ ನಡೆಯುವ ಟೆಸ್ಟ್ ಪಂದ್ಯ ನಿಧಾನವಾಗಿ ಮೂಲೆ ಗುಂಪಾಗುತ್ತಿದೆ. ಟೆಸ್ಟ್ ಪಂದ್ಯಗಳು ತನ್ನ ವೈಭವದ ದಿನಗಳನ್ನು ಕಳೆದುಕೊಳ್ಳುತ್ತಿರುವುದನ್ನು ಗಮನಿಸಿರುವ ಐಸಿಸಿ ಇದೇ ನಿಟ್ಟಿನಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್​ ಶಿಪ್​ ಆರಂಭಿಸಿದೆ.

ಪಾಯಿಂಟ್​ ಹಂಚಿಕೆ ಹೇಗೆ?

ಒಂದು ತಂಡ ಎರಡು ವರ್ಷದ ಅವಧಿಯಲ್ಲಿ ಮೂರು ಸರಣಿಯನ್ನು ತವರಿನಲ್ಲಿ , ಉಳಿದ ಮೂರು ಸರಣಿಯನ್ನು ವಿದೇಶದಲ್ಲಿ ಆಡಲಿದೆ. ಎರಡು ಪಂದ್ಯಗಳ ಸರಣಿಯಲ್ಲಿ ಒಂದು ಪಂದ್ಯಕ್ಕೆ 60 ಪಾಯಿಂಟ್​, ಮೂರು ಪಂದ್ಯಗಳ ಸರಣಿಯಲ್ಲಿ 40 ಪಾಯಿಂಟ್​ ಇರಲಿದೆ. ಪಂದ್ಯ ಟೈ ಆದರೆ ಅಂಕ ಸಮನಾಗಿ ಹಂಚಿಕೆ ಆಗಲಿದೆ. ಒಂದು ವೇಳೆ ಡ್ರಾ ಆದರೆ ಇನ್ನಿಂಗ್ಸ್​ ಮುನ್ನಡೆ ಪಡೆದುಕೊಳ್ಳುವ ತಂಡಕ್ಕೆ 3:1 ಪ್ರಮಾಣದಲ್ಲಿ ಅಂಕ ಹಂಚಿಕೆಯಾಗಲಿದೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.