ನವದೆಹಲಿ : ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಮಾಜಿ ಅಂಪೈರ್ ಸ್ಟೀವ್ ಬಕ್ನರ್, ಭಾರತದ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರ ಎರಡು ಆಟದ ಸಂದರ್ಭಗಳಲ್ಲಿ ಹೇಗೆ ತಪ್ಪಾಗಿ ತೀರ್ಪು ನೀಡಿದ್ದೆ ಎಂಬುದನ್ನು ನೆನಪಿಸಿಕೊಂಡಿದ್ದಾರೆ.
ಆ ತಪ್ಪು ತೀರ್ಮಾನಗಳು ಯಾವುವು?: 2003ರಲ್ಲಿ ಗಬ್ಬಾದಲ್ಲಿ ನಡೆದ ಟೆಸ್ಟ್ ಪಂದ್ಯದ ಬಗ್ಗೆ ಮಾತನಾಡಿದ ಬಕ್ನರ್, ನಾನು ಆಗ ಸಚಿನ್ ಎಲ್‌ಬಿಡಬ್ಲ್ಯೂ ಆಗಿದ್ದರು ಎಂದು ತೀರ್ಪು ನೀಡಿದ್ದೆ. ಆದರೆ, ಅಂದು ಜೇಸನ್ ಗಿಲೆಸ್ಪಿ ಅವರ ಬೌಲಿಂಗ್‌ನಲ್ಲಿ ಸಚಿನ್ ಪ್ಯಾಡ್ಸ್‌ಗೆ ಬಡಿದಿದ್ದ ಬಾಲ್ ಬಹುಶಃ ಸ್ಟಂಪ್ಸ್‌ನಿಂದ ಮೇಲೆ ಹೋಗುತ್ತಿತ್ತು ಎಂದು ಒಪ್ಪಿಕೊಂಡಿದ್ದಾರೆ. ಅಲ್ಲದೇ 2005ರಲ್ಲಿ ಪಾಕಿಸ್ತಾನದ ವಿರುದ್ಧ ಈಡನ್ ಗಾರ್ಡನ್ಸ್ನಲ್ಲೂ ನಡೆದ ಪಂದ್ಯದಲ್ಲೂ ಸಚಿನ್ ವೇಗಿ ಅಬ್ದುಲ್ ರಝಾಕ್ ಬೌಲಿಂಗ್ಸ್‌ನಲ್ಲಿ ಎಡ್ಜ್ ಮಾಡಿ ಕೀಪರ್‌ಗೆ ಕ್ಯಾಚ್ ನೀಡಿದ್ದರು ಎಂದು ತಪ್ಪಾಗಿ ತಿಳಿದಿದ್ದಾಗಿ ಒಪ್ಪಿಕೊಂಡಿದ್ದಾರೆ.
ತಪ್ಪು ತೀರ್ಮಾನ ದ್ವಂದ್ವಕ್ಕೆ ತಳ್ಳುತ್ತದೆ : ಎರಡು ವಿಭಿನ್ನ ಸಂದರ್ಭಗಳಲ್ಲಿ ಸಚಿನ್ ಆಟದ ಕುರಿತು ತಪ್ಪಾದ ನಿರ್ಧಾರವನ್ನು ನೀಡಿದ್ದಾಗಿ ಒಪ್ಪಿಕೊಂಡಿರುವ ಇವರು, ಅಂದಹಾಗೆ ಯಾವುದೇ ಅಂಪೈರ್ ತಪ್ಪಾದ ನಿರ್ಧಾರ ನೀಡಬೇಕೆಂದು ಬಯಸುವುದಿಲ್ಲ. ಅದು ಅವನೊಂದಿಗೆ ಶಾಶ್ವತವಾಗಿ ಉಳಿಯುವುದಲ್ಲದೇ,ಅವನನ್ನು ದ್ವಂದ್ವಕ್ಕೆ ತಳ್ಳಬಹುದು ಎಂದು ಬಾರ್ಬಡೋಸ್‌ನಲ್ಲಿ ನಡೆದ ಮೇಸನ್ ಮತ್ತು ಅತಿಥಿಗಳ ರೇಡಿಯೋ ಕಾರ್ಯಕ್ರಮದಲ್ಲಿ ಬಕ್ನರ್ ಹೇಳಿದರು.
ಮನುಷ್ಯನಿಂದ ತಪ್ಪುಗಳಾಗುವುದು ಸಹಜ. ನಾನಾಗ ಆಸ್ಟ್ರೇಲಿಯಾದಲ್ಲಿ ಸಚಿನ್ ಎಲ್‌ಬಿಡಬ್ಲ್ಯೂ ಆಗಿದ್ದಾರೆ ಎಂದು ತೀರ್ಪು ನೀಡಿದ್ದೆ. ಆದರೆ, ಬಾಲ್ ಸ್ಟಂಪ್ಸ್‌ನಿಂದ ಮೇಲೆ ಹೋಗುತ್ತಿತ್ತು ಎಂಬುದು ನಂತರ ಗೊತ್ತಾಯಿತು. ಮತ್ತೊಮ್ಮೆ ಭಾರತದಲ್ಲಿ ಕಾಟ್‌ಬಿಹೈಂಡ್ ತೀರ್ಪನ್ನು ನೀಡಿದ್ದೆ. ಚೆಂಡು ಬ್ಯಾಟ್‌ಗೆ ತಾಗದೇ ಇದ್ದರೂ ಅದು ತನ್ನ ದಿಕ್ಕನ್ನು ಬದಲಾಯಿಸಿತ್ತು ಎಂದ ಅವರು, ಈಡನ್‌ನಲ್ಲಿ ಭಾರತ ಬ್ಯಾಟಿಂಗ್ ಮಾಡುವಾಗ ನಿಮಗೆ ಏನೂ ಕೇಳಿಸುವುದಿಲ್ಲ. ಕಾರಣವೆಂದರೆ ಈಡನ್‌ನಲ್ಲಿ ಪಂದ್ಯ ನಡೆಯುವ ಸಮಯ ಒಂದು ಲಕ್ಷಕ್ಕೂ ಹೆಚ್ಚು ಪ್ರೇಕ್ಷಕರು ಸೇರಿ ಭಾರಿ ಶಬ್ದ ಮಾಡುತ್ತಿರುತ್ತಾರೆ ಎಂದು ಬಕ್ನರ್ ವಿವರಿಸಿದರು.
ತಪ್ಪೊಪ್ಪಿಕೊಳ್ಳುವುದು ಜೀವನದ ಒಂದು ಭಾಗ : ವೃತ್ತಿ ಬದುಕಿನಲ್ಲಿ ನಾನು ನೀಡಿರುವ ಇವರೆಡು ತಪ್ಪು ತೀರ್ಮಾನದಿಂದ ಬಹಳಷ್ಟು ಬೇಸರವಾಗಿದೆ. ಮನುಷ್ಯನಾದವನು ತಪ್ಪುಗಳನ್ನು ಮಾಡುವುದು ಸಹಜ. ಆದರೆ, ಅವುಗಳನ್ನು ಒಪ್ಪಿಕೊಳ್ಳುವುದು ಜೀವನದ ಒಂದು ಭಾಗ ಎಂದಿದ್ದಾರೆ. ತಂತ್ರಜ್ಞಾನದ ಸುಧಾರಣೆ ಮತ್ತು ಡಿಆರ್ಎಸ್ ಬಳಕೆಯಿಂದ ಇಂದು ಅಂಪೈರ್ಗಳ ಆತ್ಮ ಸ್ಥೈರ್ಯ ಕಡಿಮೆಯಾಗುತ್ತದೆ ಎಂದು ಹೇಳುವುದು ತಪ್ಪು. ಇಂತಹ ತಂತ್ರಜ್ಞಾನದಿಂದ ತಮ್ಮ ತಪ್ಪನ್ನು ಸ್ಥಳದಲ್ಲಿಯೇ ಸರಿಪಡಿಸಿಕೊಳ್ಳಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.