ಟ್ರಿನಿಡಾಡ್: ಟ್ರಿಂಬಾಗೋ ನೈಟ್ ರೈಡರ್ಸ್ ಮಂಗಳವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಜಮೈಕಾ ತಲವಾಸ್ ವಿರುದ್ಧ 9 ವಿಕೆಟ್ಗಳ ಭರ್ಜರಿ ಜಯದೊಂದಿಗೆ ಫೈನಲ್ ಪ್ರವೇಶಿಸಿದೆ.
ಲೀಗ್ ಹಂತದಲ್ಲಿ ಎಲ್ಲಾ 10 ಪಂದ್ಯಗಳನ್ನು ಗೆದ್ದಿದ್ದ ಪೊಲಾರ್ಡ್ ಪಡೆ ಇಂದು ನಡೆದ ಸೆಮಿಫೈನಲ್ನಲ್ಲಿ ಎಲ್ಲಾ ವಿಭಾಗದಲ್ಲೂ ಪ್ರಾಬಲ್ಯ ಸಾಧಿಸಿತು. ತಲೈವಾಸ್ ತಂಡವನ್ನು ಕೇವಲ 107 ರನ್ಗಳಿಗೆ ಕಟ್ಟಿಹಾಕಿದ ಟಿಕೆಆರ್ 15 ಓವರ್ಗಳಲ್ಲಿ ಗುರಿತಲುಪಿತು.
108 ರನ್ಗಳ ಟಾರ್ಗೆಟ್ ಬೆನ್ನತ್ತಿದ ನೈಟ್ ರೈಡರ್ಸ್ ಆರಂಭದಲ್ಲೇ ಸುನೀಲ್ ನರೈನ್(4) ವಿಕೆಟ್ ಕಳೆದುಕೊಂಡಿತು. ಆದರೆ, ನಂತರ ಅನುಭವಿ ಸಿಮನ್ಸ್ ಜೊತೆಗೂಡಿದ ಯುವ ಬ್ಯಾಟ್ಸ್ಮನ್ ಟಿಯೋನ್ ವೆಬ್ಸ್ಟರ್ ಮುರಿಯದ 2ನೇ ವಿಕೆಟ್ ಜೊತೆಯಾಟದಲ್ಲಿ 95 ರನ್ಗಳ ಜೊತೆಯಾಟ ನಡೆಸಿ ತಂಡಕ್ಕೆ 9 ವಿಕೆಟ್ಗಳ ಗೆಲುವು ತಂದುಕೊಟ್ಟರು.
44 ಎಸೆತಗಳನ್ನೆದುರಿಸಿದ ಲೆಂಡ್ಲ್ ಸಿಮನ್ಸ್ 2 ಸಿಕ್ಸರ್ ಹಾಗೂ 6 ಬೌಂಡರಿ ಸಹಿತ 54 ರನ್ಗಳಿಸಿದರೆ, ವೆಬ್ಸ್ಟರ್ 43 ಎಸೆತಗಳಲ್ಲಿ 6 ಬೌಂಡರಿ ಒಂದು ಸಿಕ್ಸರ್ ಸಹಿತ 44 ರನ್ಗಳಿಸಿ ಗೆಲುವಿನ ಗಡಿದಾಟಿಸಿದರು.
ಇದಕ್ಕು ಮುನ್ನ ಬ್ಯಾಟಿಂಗ್ ನಡೆಸಿದ ಜಮೈಕಾ ತಂಡ ಟಿಕೆಆರ್ ಬೌಲಿಂಗ್ ದಾಳಿಗೆ ತತ್ತರಿಸಿತು. ಮೊದಲ ಓವರ್ನಲ್ಲೆ ಬ್ಲಾಕ್ವುಡ್(0), ಎರಡನೇ ಓವರ್ನಲ್ಲಿ ಗ್ಲೆನ್ ಫಿಲಿಫ್ಸ್(2), 3ನೇ ಓವರ್ನಲ್ಲಿ ಮುಜೀಬ್(0) ಹಾಗೂ 5ನೇ ಓವರ್ನಲ್ಲಿ ಆಸಿಫ್ ಅಲಿ(4) ಅವರನ್ನು ಪವರ್ ಪ್ಲೇ ಒಳಗೆ ಕಳೆದುಕೊಂಡು ಆಘಾತ ಅನುಭವಿಸಿತು.
-
Trinbago Knight Riders are in the Hero CPL 2020 Final! #CPL20 #CricketPlayedLouder #TKRvJT #RoadToTheFinal pic.twitter.com/08CBtJQSUv
— CPL T20 (@CPL) September 8, 2020 " class="align-text-top noRightClick twitterSection" data="
">Trinbago Knight Riders are in the Hero CPL 2020 Final! #CPL20 #CricketPlayedLouder #TKRvJT #RoadToTheFinal pic.twitter.com/08CBtJQSUv
— CPL T20 (@CPL) September 8, 2020Trinbago Knight Riders are in the Hero CPL 2020 Final! #CPL20 #CricketPlayedLouder #TKRvJT #RoadToTheFinal pic.twitter.com/08CBtJQSUv
— CPL T20 (@CPL) September 8, 2020
ನಂತರ 5ನೇ ವಿಕೆಟ್ ಜೊತೆಯಾಟದಲ್ಲಿ ಎನ್ ಬಾನರ್ (41) ಹಾಗೂ ನಾಯಕ ಪೊವೆಲ್(33) 38 ರನ್ ಸೇರಿಸಿದರು. 42 ಎಸೆತಗಳಲ್ಲಿ 21 ರನ್ಗಳಿಸಿದ್ದ ಬಾನರ್ ಔಟಾಗುತ್ತಿದ್ದಂತೆ ಬಂದ ರಸೆಲ್ 2 ರನ್ಗಳಿಗೆ ವಿಕೆಟ್ ಒಪ್ಪಿಸಿದರೆ, ಬ್ರಾತ್ವೇಟ್ 13 ರನ್ಗಳಿಸಿ ನರೈನ್ ಬೌಲಿಂಗ್ನಲ್ಲಿ ಬ್ರಾವೋಗೆ ಕ್ಯಾಚ್ ನೀಡಿ ಔಟಾದರು. ಕೊನೆ 20 ಓವರ್ಗಳ ಮುಕ್ತಾಯಕ್ಕೆ 7 ವಿಕೆಟ್ ಕಳೆದುಕೊಂಡು ಜಮೈಕಾ ತಲವಾಸ್ 107 ರನ್ಗಳಿಸಿತು.
ಅದ್ಭುತ ಬೌಲಿಂಗ್ ಪದರ್ಶನ ತೋರಿದ ಟಿಕೆಆರ್ನ ಅಕೀಲ್ ಹೊಸೀನ್ 3 ವಿಕೆಟ್ ಪಡೆದು ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಇವರಿಗೆ ಬೆಂಬಲಿ ನೀಡಿದ ಖಾರಿ ಪರ್ರಿ 2, ನರೈನ್ ಹಾಗೂ ಫವಾದ್ ಅಹ್ಮದ್ ತಲಾ ಒಂದು ವಿಕೆಟ್ ಪಡೆದರು.
ಟೂರ್ನಿಯಲ್ಲಿ ಅಜೇಯ ತಂಡವಾಗಿ ಫೈನಲ್ಗೆ ಎಂಟ್ರಿಕೊಟ್ಟಿರುವ ಪೊಲಾರ್ಡ್ ಪಡೆ, ಫೈನಲ್ನಲ್ಲಿ ಗಯಾನ ಅಥವಾ ಸೇಂಟ್ ಲೂಸಿಯಾ ಜೌಕ್ಸ್ ತಂಡವನ್ನು ಎದುರಿಸಲಿದೆ.