ವೆಲ್ಲಿಂಗ್ಟನ್: ನ್ಯೂಜಿಲ್ಯಾಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಆರಂಭಿಕರಾಗಿ ಕನ್ನಡಿಗ ಮಯಾಂಕ್ ಅಗರ್ವಾಲ್ ಹಾಗೂ ಪೃಥ್ವಿ ಶಾ ಇನ್ನಿಂಗ್ಸ್ ಆರಂಭಿಸುವ ಸಾಧ್ಯತೆ ಇದೆ. ಈ ಜೋಡಿ ಕುರಿತು ಕಿವೀಸ್ ತಂಡದ ವೇಗಿ ಟಿಮ್ ಸೌಥಿ ತಮ್ಮ ಅಭಿಪ್ರಾಯ ಹೊರಹಾಕಿದ್ದಾರೆ.
2 ಟೆಸ್ಟ್ ಪಂದ್ಯಗಳಲ್ಲಿ ಭಾಗಿಯಾಗಿರುವ ಪೃಥ್ವಿ ಶಾ ಹಾಗೂ 9 ಟೆಸ್ಟ್ ಪಂದ್ಯಗಳಲ್ಲಿ ಟೀಂ ಇಂಡಿಯಾ ಪ್ರತಿನಿಧಿಸಿರುವ ಮಯಾಂಕ್ ಅಗರ್ವಾಲ್ ಇದೀಗ ನ್ಯೂಜಿಲ್ಯಾಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದು, ತಂಡಕ್ಕೆ ಉತ್ತಮ ಆರಂಭ ನೀಡುವ ಸಾಧ್ಯತೆ ಇದೆ. ಈ ಜೋಡಿ ಬಳಿ ಅನುಭವದ ಕೊರತೆ ಇದೆ. ಆದರೆ ತಂಡಕ್ಕೆ ಉತ್ತಮ ರನ್ ಗಳಿಸುವ ಸಾಮರ್ಥ್ಯ ಹೆಚ್ಚಾಗಿದೆ ಎಂದಿದ್ದಾರೆ.
ಗಾಯದ ಸಮಸ್ಯೆಯಿಂದ ಟೀಂ ಇಂಡಿಯಾ ಅನುಭವಿ ಆಟಗಾರರಾದ ಶಿಖರ್ ಧವನ್, ರೋಹಿತ್ ಶರ್ಮಾ ತಂಡದಿಂದ ಹೊರಗುಳಿದಿದ್ದು, ಅವರ ಸ್ಥಾನದಲ್ಲಿ ಪೃಥ್ವಿ ಹಾಗೂ ಮಯಾಂಕ್ ಅವಕಾಶ ಪಡೆದುಕೊಂಡಿದ್ದಾರೆ.
ಇದೇ ವೇಳೆ ಮೈದಾನದ ಬಗ್ಗೆ ಮಾತನಾಡಿರುವ ಅವರು, ಖಂಡಿತವಾಗಿ ಇಲ್ಲಿನ ಪಿಚ್ ತವರಿನ ತಂಡಕ್ಕೆ ಸಹಕಾರಿಯಾಗುವ ಸಾಧ್ಯತೆ ಇದೆ. ನಾವು ಜವಾಬ್ದಾರಿಯುತವಾಗಿ ಆಟವಾಡಬೇಕಾಗಿದೆ ಎಂದಿದ್ದಾರೆ.